ನಾಪೋಕ್ಲು, ಮಾ. ೨೧: ಕೊಡಗಿನಲ್ಲಿ ಕಾಫಿ ಬೆಳೆಗಾರರು ಸಹಕಾರ ಸಂಘ ಮತ್ತು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಸಾಲವನ್ನು ಪಡೆದುಕೊಂಡಿದ್ದು ಕಳೆದ ಮೂರು ವರ್ಷಗಳ ಅತಿವೃಷ್ಠಿಯಿಂದ ಸಾಲಗಾರರು ತತ್ತರಿಸಿ ಹೋಗಿದ್ದು, ಸಾಲ ಮರುಪಾವತಿ ಮಾಡಲಾಗದೆ ಸಂಕಷ್ಟದಲ್ಲಿದ್ದಾರೆ.

ಈ ಹಿನ್ನೆಲೆ ಬೆಳೆಗಾರರು ಪಡೆದಿರುವ ದೀರ್ಘಾವಧಿ ಸಾಲವನ್ನು ಮರುಪಾವತಿಸಲು ಒಂದು ವರ್ಷಗಳ ಕಾಲವಧಿಯನ್ನು ವಿಸ್ತರಿಸಬೇಕೆಂದು ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಮತ್ತು ಬಿ.ಜೆ.ಪಿ. ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ತಾಕೇರಿ ಪೊನ್ನಪ್ಪ ಇವರುಗಳು ಸಹಕಾರ ಸಚಿವ ಸೋಮಶೇಖರ್ ಮತ್ತು ತೋಟಗಾರಿಕೆ ಸಚಿವ ಆರ್. ಶಂಕರ್ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಸಚಿವರುಗಳು ಅವಧಿ ವಿಸ್ತರಣೆ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.