ಗೋಣಿಕೊಪ್ಪಲು, ಮಾ. ೨೦: ಹೋರಾಟ ಆರಂಭಿಸುವುದು ಸುಲಭ,ಆದರೆ ಅದನ್ನು ಮುಂದುವರಿಸಿ ಅಂತ್ಯಗೊಳಿಸುವುದು ಬಹಳ ಕಷ್ಟ. ಆದರೂ ನಿರಂತರವಾಗಿ ಅಹೋರಾತ್ರಿ ಚಳವಳಿ ನಡೆಸಿ, ತಾರ್ಕಿಕ ಅಂತ್ಯ ಕಾಣಲು ಇನ್ನೂ ಕೆಲವು ದಿನಗಳ ಮಟ್ಟಿಗೆ ಪ್ರತಿಭಟನೆ ಮುಂದುವರಿಸು ವುದು ಅನಿವಾರ್ಯ ಎಂದು ರೈತ ಸಂಘದ ಜಿಲ್ಲಾದ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಭಿಪ್ರಾಯಪಟ್ಟರು.ಬೆಳ್ಳೂರು ಜಂಕ್ಷನ್ನಲ್ಲಿ ಕಳೆದ ೧೩ ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಅಪಾಯಕಾರಿಯಾಗಿದ್ದ ಹುಲಿಯು ಮೃತಪಟ್ಟಿದೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸ್ಪಷ್ಟತೆ ನೀಡಬೇಕು. ಅಲ್ಲಿಯ ತನಕ ಹುಲಿಯ ಕಾರ್ಯಾಚರಣೆ ಮುಂದುವರಿಸಬೇಕು. ಉಳಿದ ಹುಲಿಗಳನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಬೇಕು. ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಕಳೆದ ೨೭ ದಿನಗಳ ಕಾಲ ನಿರಂತರವಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಇವರಿಗೂ ವಿಶ್ರಾಂತಿ ಅವಶ್ಯಕತೆ ಇರುವುದರಿಂದ ಕೆಲ ದಿನಗಳ ವಿಶ್ರಾಂತಿ ನೀಡಬೇಕು, ನಂತರದಲ್ಲಿ ಕಾರ್ಯಾಚರಣೆ ಮುಂದುವರಿಸಬೇಕು ಎಂದು ಹೇಳಿದರು.
ತಾ. ೨೨ ರಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ, ಅರಣ್ಯ ಮಂತ್ರಿ ಹಾಗೂ ಅರಣ್ಯ ಇಲಾಖೆಯ ಪಿಸಿಸಿಎಫ್ ಅವರನ್ನು ಭೇಟಿ ಮಾಡುವ ಮೂಲಕ ಇಲ್ಲಿನ ವಿದ್ಯಮಾನಗಳನ್ನು
(ಮೊದಲ ಪುಟದಿಂದ) ವಿವರಿಸಲಾಗು ವುದು ಅಲ್ಲಿಯ ತನಕ ಹೋರಾಟ ನಡೆಯಲಿದೆ. ಮಂತ್ರಿವರ್ಯರ ಭೇಟಿಯ ನಂತರ ಪ್ರತಿಭಟನೆ ಹಿಂಪಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವು ದಾಗಿ ಸಭೆಗೆ ತಿಳಿಸಿದರು. ಇದಕ್ಕೆ ಹೋರಾಟ ಗಾರರು ಒಮ್ಮತ ಸೂಚಿಸಿದರು.
ಕಳೆದ ೧೩ ದಿನಗಳ ಹೋರಾಟ ದಿಂದ ಭಾಗಶಃ ಜಯ ಸಿಕ್ಕಿದೆ. ಎಂದು ಕದ್ದಣಿಯಂಡ ಹರೀಶ್ ಬೋಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ರೂಪುರೇಷೆಗಳನ್ನು
(ಮೊದಲ ಪುಟದಿಂದ) ವಿವರಿಸಲಾಗು ವುದು ಅಲ್ಲಿಯ ತನಕ ಹೋರಾಟ ನಡೆಯಲಿದೆ. ಮಂತ್ರಿವರ್ಯರ ಭೇಟಿಯ ನಂತರ ಪ್ರತಿಭಟನೆ ಹಿಂಪಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವು ದಾಗಿ ಸಭೆಗೆ ತಿಳಿಸಿದರು. ಇದಕ್ಕೆ ಹೋರಾಟ ಗಾರರು ಒಮ್ಮತ ಸೂಚಿಸಿದರು.
ಕಳೆದ ೧೩ ದಿನಗಳ ಹೋರಾಟ ದಿಂದ ಭಾಗಶಃ ಜಯ ಸಿಕ್ಕಿದೆ. ಎಂದು ಕದ್ದಣಿಯಂಡ ಹರೀಶ್ ಬೋಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ರೂಪುರೇಷೆಗಳನ್ನು
ಪೂಣಚ್ಚ, ತಿರುನೆಲ್ಲಿಮಾಡ ದೇವಯ್ಯ, ಕೈಬುಲಿರ ಹರೀಶ್, ಇಟ್ಟಿರ ಲಾಲಪ್ಪ, ಇಟ್ಟಿರ ವಿಷ್ಣು, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಚಂಗುಲAಡ ಸೂರಜ್, ಮೀದೇರಿರ ಕವಿತರಾಮ್, ಅಪ್ಪಚಂಗಡ ಮೋಟಯ್ಯ, ಚಕ್ಕೇರ ಸನ್ನಿ, ಮುಂತಾದ ಗಣ್ಯರು ಮಾತನಾಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮುಖಂಡರಾದ ಚೊಟ್ಟೆಕಾಳಪಂಡ ಮನು, ಮಲ್ವಿರ ಅಶೋಕ್, ತೀತರಮಾಡ ರಾಜ ಮುಂತಾದವರು ಉಪಸ್ಥಿತರಿದ್ದರು.