ಕುಟ್ಟ, ಮಾ. ೨೦: ಕೊರೊನಾದ ೨ನೇ ಅಲೆ ಅಪ್ಪಳಿಸುವ ಭೀತಿಯಿಂದ ಕೊಡಗು ಜಿಲ್ಲೆ ಪ್ರವೇಶಿಸುವ ಕೇರಳ ರಾಜ್ಯದವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದು, ಕೊಡಗು-ಕೇರಳ ಗಡಿಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಈ ಹಿನ್ನೆಲೆ ಕೆಲವರು ನಕಲಿ ಕೊರೊನಾ ನೆಗೆÀಟಿವ್ ವರದಿ ತೋರಿಸಿ ಜಿಲ್ಲೆ ಪ್ರವೇಶಿಸುವ ಚಾಲಾಕಿ ಕೆಲಸ ಮಾಡುತ್ತಿದ್ದಾರೆ. ಆದರೆ, ಆರೋಗ್ಯ ಕಾರ್ಯಕರ್ತರು ನಕಲಿ ರಿಪೋರ್ಟ್ ತೋರಿಸುವವರನ್ನು ಪತ್ತೆ ಹಚ್ಚಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ದಕ್ಷಿಣ ಕೊಡಗಿನ ಕುಟ್ಟ ಚೆಕ್ಪೋಸ್ಟ್ನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೆಲವರು ಮಕ್ಮಲ್ ಟೋಪಿ ಹಾಕಲು ಮುಂದಾಗಿದ್ದಾರೆ. ಈ ನಡುವೆ ಕೇರಳ ರಾಜ್ಯದಿಂದ ಬಂದ ಕೆಲವು ಆರೋಗ್ಯ ನಿರೀಕ್ಷಕರು, ಖಾಸಗಿ ವೈದ್ಯರು, ಹಾಗೂ ಪೊಲೀಸ್ ಕುಟುಂಬವಿಡಿ ಸಲ್ಲಿಸಿದ ವರದಿ(ಮೊದಲ ಪುಟದಿಂದ) ನಕಲಿ ಎಂದು ಪತ್ತೆ ಹಚ್ಚಿ ತಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ, ನಕಲಿ ವರದಿ ಸಲ್ಲಿಸಿದವರನ್ನು ಪುನಃ ಕೇರಳಕ್ಕೆ ಕಳುಹಿಸಿದ್ದಾರೆ.
ಕೇರಳ ರಾಜ್ಯದಿಂದ ಬರುವವರು ಸಲ್ಲಿಸುವ ವರದಿಯನ್ನು ಸೂಕ್ಷö್ಮವಾಗಿ ಗಮನಿಸುವ ಆರೋಗ್ಯ ಕಾರ್ಯಕರ್ತರು ವರದಿಯಲ್ಲಿರುವ ಕ್ಯೂ.ಆರ್. ಕೋಡ್ ಸ್ಕಾö್ಯನ್ ಮಾಡಿ ಇಲಾಖೆ ನೀಡಿರುವ ಆ್ಯಪ್ ಮೂಲಕ ರಿಪೋರ್ಟ್ ಅಸಲಿಯೋ, ನಕಲಿಯೋ ಎಂದು ಪತ್ತೆಹಚ್ಚುತ್ತಿದ್ದಾರೆ. ಇದರೊಂದಿಗೆ ಸೂಚಿಸಿರುವ ಮೊಹರು, ನೀಡುವ ಐಡಿಯನ್ನು ನೋಡಲಾಗುತ್ತದೆ. ಈ ನಡುವೆಯು ಕೇರಳದ ಖಾಸಗಿ ವೈದ್ಯ, ಆರೋಗ್ಯ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆಯ ಕುಟುಂಬದವರು ನಕಲಿ ವರದಿಯನ್ನು ತೋರಿಸಿದ್ದಾರೆ. ಎಚ್ಚೆತ್ತ ಆರೋಗ್ಯ ಕಾರ್ಯಕರ್ತರು ವರದಿಯನ್ನು ಗಮನಿಸಿ ನಕಲಿ ವರದಿ ಎಂದು ದೃಢಪಡಿಸಿದ್ದಾರೆ.
ಕೇರಳ-ಕೊಡಗು ಗಡಿ ಪ್ರದೇಶಗಳಲ್ಲಿ ನಕಲಿ ಕೋವಿಡ್ ನೆಗೆಟಿವ್ ದೃಢೀಕರಣ ಪತ್ರಗಳನ್ನು ನೀಡುತ್ತಿರುವ ಪ್ರಕರಣಗಳ ಕುರಿತು ‘ಶಕ್ತಿ’ ಜಿಲ್ಲಾ ಎಸ್ಪಿ ಕ್ಷಮಾ ಮಿಶ್ರಾ ಅವರ ಗಮನ ಸೆಳೆಯಿತು. ಈಗಾಗಲೇ ಇಂತಹ ಹಲವು ನಕಲಿ ದಾಖಲೆಗಳನ್ನು ನೀಡಿದ ವ್ಯಕ್ತಿಗಳನ್ನು ವಾಪಾಸ್ ಕಳುಹಿಸಲಾಗಿದೆ ಎಂದು ಎಸ್ಪಿ ಖಾತರಿಪಡಿಸಿದರು. ನಿರ್ಧಿಷ್ಟವಾಗಿ ಇನ್ನೂ ಯಾವುದಾದರೂ ಪ್ರಕರಣಗಳಿದ್ದರೆ ತಮ್ಮ ಗಮನಕ್ಕೆ ತರಬಹುದಾಗಿದ್ದು, ಕಾನೂನಾತ್ಮಕ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. - ವರದಿ: ತಿಮ್ಮು