ಮುಳ್ಳೂರು, ಮಾ. ೨೦: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಜಿಲ್ಲಾಧಿಕಾರಿಯವರ ನಡಿಗೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅಧ್ಯಕ್ಷತೆಯಲ್ಲಿ ಜರುಗಿತು.ಕೊಡ್ಲಿಪೇಟೆಯ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯ ಆರಂಭದಲ್ಲಿ ಫಲಾನುಭವಿಗಳಿಗೆ ವಿವಿಧ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಯಿತು. ಜಿಲ್ಲಾಧಿಕಾರಿಗಳನ್ನು ಕಿರಿಕೊಡ್ಲಿ ಮಠಾದೀಶ ಸದಾಶಿವ ಸ್ವಾಮೀಜಿ ಮತ್ತು ಇತರೆ ಸ್ವಾಮೀಜಿಗಳು ಕಳಸ ಆರತಿಯೊಂದಿಗೆ ಬರಮಾಡಿ ಕೊಂಡರು. ಸ್ಥಳೀಯರು ಗ್ರಾಮದ ಸಮಸ್ಯೆಯನ್ನು ಜಿಲ್ಲಾಧಿಕಾರಿ ಎದುರು ಮುಂದಿಟ್ಟರು.ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಯೋಜಕ ಸುನಂದ್ ಕುಮಾರ್ ಅವರು ಕಳೆದ ೩೦ ವರ್ಷಗಳಿಂದ ಜಿಲ್ಲೆಯ ಸುಮಾರು ೧೦ ಸಾವಿರ ಅರ್ಜಿದಾರರ ಬಗರ್ ಹುಕುಂ ಕಂದಾಯ ಭೂಮಿ ಅಕ್ರಮ ಸಕ್ರಮದ ಫಾರಂ ನಂ ೫೦, ೫೩ ಮತ್ತು ೫೭ ರ ಅರ್ಜಿದಾರರ ಕಡತಗಳು ವಿಲೇವಾರಿಯಾಗದೆ ಬಾಕಿ ಇವೆ. ಇದರಿಂದ ಅರ್ಜಿದಾರರಿಗೆ ಸಮಸ್ಯೆಯಾಗುತ್ತದೆ ಕೂಡಲೇ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಪಿಂಚಣಿಗಳು ಕೆಲವು ತಿಂಗಳಿನಿAದ ಸ್ಥಗಿತಗೊಂಡಿದೆ ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಪಿಂಚಣಿದಾರರಿಗೆ ಸರಿಯಾದ ಮಾಹಿತಿ ನೀಡಿಲ್ಲ ಮಾಸಿಕ ಪಿಂಚಣಿ ಸ್ಥಗಿತಗೊಂಡಿರುವುದ್ದರಿAದ ಜೀವನಕ್ಕೆ ಕಷ್ಟವಾಗುತ್ತಿದೆ ಎಂದು ವಿಶೇಷಚೇತನ ಮಹಿಳೆಯೊಬ್ಬರು ದೂರಿದರು.

ಕೊಡ್ಲಿಪೇಟೆ ಜಿ.ಪಂ.ಕ್ಷೇತ್ರದ ಸದಸ್ಯ ಸಿ.ಪಿ.ಪುಟ್ಟರಾಜು ಬೆಸೂರು ಸರಕಾರಿ ಶಾಲೆಗಳ ಬಳಿಯಲ್ಲಿ ಮಧ್ಯದಂಗಡಿ ಇದ್ದು ಇದರಿಂದ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಮತ್ತು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಇದನ್ನು ಬೇರೆಡೆಗೆ ಸ್ಥಳಾಂತರಿಸುವAತೆ, ಬೆಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವುದ್ದರಿಂದ ರಸ್ತೆ ಬದಿಗಳಲ್ಲಿ ದೀಪಗಳನ್ನು ಅಳವಡಿಸುವಂತೆ ಸಲಹೆ ನೀಡಿದರು.

ಕೊಡ್ಲಿಪೇಟೆಯ ಯಸಳೂರು ರಸ್ತೆಯಲ್ಲಿರುವ ಮಧ್ಯದಂಗಡಿಯಿAದ ಜನರಿಗೆ ತೊಂದರೆಯಾಗುತ್ತಿದ್ದು ಅವರಿಗೆ ಪರವಾನಿಗೆ ನೀಡುವ ನೀವು ಅಬಕಾರಿ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಎಂದು ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗೆ ಮನವಿ ಮಾಡಿದರು.

ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಸರ್ಕಾರದ ಆದೇಶದ ಮೂಲಕ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತಿದೆ. ವೃದ್ದಾಪ್ಯ ವೇತನ, ಸಂದ್ಯಾ ಸುರಕ್ಷ ಯೋಜನೆ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹರು ಪಡೆಯಲು ಗ್ರಾಮ ಲೆಕ್ಕಿಗರಿಗೆ ಬ್ಯಾಂಕ್ ವಿವರಣೆ ನೀಡಬೇಕೆಂದು ಮಾಹಿತಿ ನೀಡಿದರು.

(ಮೊದಲ ಪುಟದಿಂದ) ಗ್ರಾ.ಪಂ. ಸದಸ್ಯ ಮೋಕ್ಷಿತ್ ಮಾತನಾಡಿ, ಕೊಡ್ಲಿಪೇಟೆ ವ್ಯಾಪ್ತಿಯ ಹಲವು ಗ್ರಾಮದಲ್ಲಿ ಮಳೆ ಹಾನಿಯಿಂದಾಗಿ ಮನೆ ಕಳೆದುಕೊಂಡವರಿಗೆ ಇದುವರೆಗೂ ಮನೆ ಸಿಕ್ಕಿಲ್ಲ, ಈ ಬಗ್ಗೆ ಆದಷ್ಟು ಬೇಗ ಪರಿಶೀಲನೆ ಮಾಡಬೇಕು ಎಂದು ಕೋರಿದರು.

ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ಕೊಡ್ಲಿಪೇಟೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ರಸ್ತೆ ದುರಸ್ತಿ ಆಗಬೇಕು ಎಂದು ಕೋರಿಕೊಂಡರು. ೯೪ಸಿ ಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಮನೆ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಜನಾರ್ದನ್ ಮಾತನಾಡಿ, ಕೊಡ್ಲಿಪೇಟೆ ವ್ಯಾಪ್ತಿಯ ೪೦ ಗ್ರಾಮದಲ್ಲಿ ೨೦ ಸಾವಿರ ಜನಸಂಖ್ಯೆಯಿದೆ. ಆದರೆ ಇದುವರೆಗೂ ಸಾರ್ವಜನಿಕ ಬಸ್ ತಂಗುದಾಣ ಇಲ್ಲದಿರುವುದು ಬೇಸರದ ಸಂಗತಿ ಎಂದರು. ಹಾಗೆಯೇ ಆಸ್ಪತ್ರೆಗಳಲ್ಲಿ ಒಬ್ಬರೇ ವೈದ್ಯರಿದ್ದು, ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ದೂರದ ಹಾಸನ ಜಿಲ್ಲೆಗೆ ತೆರಳುವುದು ಕಷ್ಟವಾಗಿದೆ. ಆದ್ದರಿಂದ ತಜ್ಞ ವೈದ್ಯರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು. ಕೊಡ್ಲಿಪೇಟೆಯಲ್ಲಿ ಸರ್ಕಾರಿ ಕಟ್ಟಡಗಳು ದುರಸ್ತಿಯಲ್ಲಿದ್ದು, ಹೊರಗಿನಿಂದ ಬಂದ ಸರ್ಕಾರಿ ಅಧಿಕಾರಿಗಳಿಗೆ ತಂಗಲು ಸೂಕ್ತ ವ್ಯವಸ್ಥೆ ಇಲ್ಲ. ಆದ್ದರಿಂದ ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಕೊಡ್ಲಿಪೇಟೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯವಿದ್ದು, ವಿದ್ಯಾರ್ಥಿಗಳಿಗೆ ಕೊರತೆಯಾಗುತ್ತಿದೆ. ಆದ್ದರಿಂದ ಸರ್ಕಾರಿ ಜಾಗವನ್ನು ಗುರುತಿಸಿ ಮತ್ತೊಂದು ವಿದ್ಯಾರ್ಥಿ ನಿಲಯ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ಸ್ಮಶಾನ ಜಾಗ ಇರುವುದಿಲ್ಲ. ಮೊದಲು ಇದ್ದ ಸ್ಮಶಾನಗಳಿಗೆ ಆರ್.ಟಿ.ಸಿ ಇರುವುದಿಲ. ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಕೋರಿದರು.

ದೇವರಾಜು ಕುಡ್ಲೂರು ಅವರು ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು. ಮಳೆ ಬಿದ್ದು ಬೆಳೆ ಹಾನಿಯಾಗಿದ್ದು ಮನೆಗಳನ್ನು ಕಳೆದುಕೊಂಡಿದ್ದೇವೆ. ಒಂದು ವರ್ಷ ಆದರೂ ಸಹ ಏನು ಪರಿಹಾರ ದೊರಕಿಲ್ಲ ಎಂದು ಅವಲತ್ತುಕೊಂಡರು.

ಬಸವಯ್ಯ ಅವರು ಅರಣ್ಯ ಹಕ್ಕು ಸಮಿತಿಯ ಕುರಿತು ಮಾತನಾಡಿ ಹಾಡಿಗಳಲ್ಲಿನ ಜಮೀನುಗಳನ್ನು ಇತರೆ ಜನಾಂಗದವರು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಆದಿವಾಸಿಗಳಿಗೆ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ ಎಂದರು. ಪೋಡಿ ಮತ್ತು ದುರಸ್ತಿ ಸಂಬAಧಿಸಿ ದಂತೆ ಯಾವುದೇ ದಾಖಲಾತಿಗಳು ತಾಲೂಕು ಕಚೇರಿಗಳಲ್ಲಿ ಲಭ್ಯವಿಲ್ಲ. ಇದರಿಂದ ಕರ್ನಾಟಕ ಭೂ ಸುಧಾರಣಾ ಕಾಯಿದೆಯನ್ನು ಸದುಪಯೋಗ ಪಡಿಸಿಕೊಳ್ಳಲು ಆಗುತ್ತಿಲ್ಲ, ತಾತ್ಕಾಲಿಕವಾದರು ಯಾವುದಾದರು ನೀತಿಯನ್ನು ತಂದು ಕೊಡ್ಲಿಪೇಟೆ ಹೋಬಳಿಯನ್ನು ಪೋಡಿ ಮುಕ್ತ ಹೋಬಳಿಯನ್ನಾಗಿ ಮಾಡಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾತನಾಡಿ, ಪಹಣಿ ದಾಖಲೆಗಳ ತಿದ್ದುಪಡಿ, ಗ್ರಾಮದ ಪೌತಿ ಖಾತೆಗಳ ಕ್ರಮಗೊಳಿಸುವ ವಿಷಯಗಳು, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ವಿಷಯಗಳು, ಆಹಾರ ಪಡಿತರ ಚೀಟಿಗೆ ಸಂಬAಧಿಸಿದ ವಿಷಯಗಳು, ಪೋಡಿ. ಅಳತೆ ವಿಚಾರಕ್ಕೆ ಸಂಬAಧಿಸಿದ ವಿಷಯಗಳು, ಸ್ಮಶಾನ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ ವಿಷಯಗಳು, ಸರ್ಕಾರಿ ಜಮೀನಿನ ಒತ್ತುವರಿ ವಿಚಾರಗಳು, ಅತಿವೃಷ್ಟಿ ಪರಿಹಾರ ವಿಚಾರಗಳ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.