ಮಡಿಕೇರಿ, ಮಾ. ೨೦: ರಾಜ್ಯದ ಉದಯೋನ್ಮುಖ ಗಾಯಕ, ಹಾಡು ಕರ್ನಾಟಕ ಖ್ಯಾತಿಯ ಮಚ್ಚಂಡ ಶರಣ್ ಅಯ್ಯಪ್ಪ ಅವರನ್ನು ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಗ್ಗೋಡ್ಲುವಿನ ಖಾಸಗಿ ರೆಸಾರ್ಟ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚೆಯ್ಯಂಡಾಣೆಯ ಕೋಕೇರಿ ಗ್ರಾಮ ಮೂಲದ ಮಚ್ಚಂಡ ಶರಣ್ ಅಯ್ಯಪ್ಪ ಮತ್ತು ಮಂಗಳೂರಿನ ಯುವಗಾಯಕಿ ಡಾ.ವೈಷ್ಣವಿ ಕಿಣಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಚ್ಚಂಡ ಶರಣ್, ರಾಜ್ಯದಲ್ಲಿ ರೆಸಾರ್ಟ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚೆಯ್ಯಂಡಾಣೆಯ ಕೋಕೇರಿ ಗ್ರಾಮ ಮೂಲದ ಮಚ್ಚಂಡ ಶರಣ್ ಅಯ್ಯಪ್ಪ ಮತ್ತು ಮಂಗಳೂರಿನ ಯುವಗಾಯಕಿ ಡಾ.ವೈಷ್ಣವಿ ಕಿಣಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಚ್ಚಂಡ ಶರಣ್, ರಾಜ್ಯದಲ್ಲಿ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ ಶರಣ್ ಅಯ್ಯಪ್ಪ, ಭವಿಷ್ಯದಲ್ಲಿ ತನ್ನದೇ ಸ್ವಂತ ಆಡಿಯೋ ಸಂಸ್ಥೆ ಸ್ಥಾಪಿಸಬೇಕೆಂಬ ಹಂಬಲವಿದೆ ಎಂದೂ ಹೇಳಿದರು.
ಹಾಡು ಕರ್ನಾಟಕದಲ್ಲಿ ಹೆಸರಾಗಿದ್ದ ಮಂಗಳೂರಿನ ಯುವ ಗಾಯಕಿ ಡಾ.ವೈಷ್ಣವಿ ಕಿಣಿ, ಕೊಡಗಿನಲ್ಲಿ ಹಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ.ಸAದೀಪ್, ಕಾರ್ಯದರ್ಶಿ ಸತೀಶ್ ಸೋಮಣ್ಣ, ನಿಯೋಜಿತ ಅಧ್ಯಕ್ಷೆ ಅನಿತಾ ಪೂವಯ್ಯ, ಜೋನಲ್ ಲೆಫ್ಟಿನೆಂಟ್ ಜಿ.ಆರ್.ರವಿಶಂಕರ್ ಹಾಜರಿದ್ದರು. ಇದೇ ಸಂದರ್ಭ ಶರಣ್ ಅಯ್ಯಪ್ಪ ಮತ್ತು ಡಾ.ವೈಷ್ಣವಿ ಕಿಣಿ ಅವರ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು.