ಕೂಡಿಗೆ, ಮಾ. ೨೦: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಾಳಿಕಾಂಬ ಯುವಕ ಸಂಘದ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು ಹುದುಗೂರು ವಾಲಿಬಾಲ್ ಕ್ರೀಡಾ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟ ಅಂಗವಾಗಿ ಐದು ಗ್ರಾಮ ಪಂಚಾಯತಿ ಮಟ್ಟದಲ್ಲಿ ವಾಲಿಬಾಲ್, ಕಬ್ಬಡಿ ಮಹಿಳೆಯರಿಗೆ ಥ್ರೋಬಾಲ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳು ಗುಡ್ಡಗಾಡು ಓಟ, ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನವನ್ನು ಅರಿಸಿನಗುಪ್ಪೆ ತಂಡ, ದ್ವಿತೀಯ ಸ್ಥಾನ ಕಾಳಿಕಾಂಬ ತಂಡ ಮತ್ತು ಮೂರನೇ ಸ್ಥಾನ ಭುವನಗಿರಿಯ ರಾಯಲ್ ಬ್ರದರ್ಸ್ ತಂಡ, ನಾಲ್ಕನೇ ಸ್ಥಾನವನ್ನು ಗಿರೀಶ್ ಪ್ರೆಂಡ್ಸ್ ತಂಡ ಪಡೆದುಕೊಂಡವು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಐ.ಬಿ. ಶರತ್ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನವನ್ನು ಅರಿಸಿನಗುಪ್ಪೆ ತಂಡ, ದ್ವಿತೀಯ ಸ್ಥಾನ ಕಾಳಿಕಾಂಬ ತಂಡ ಮತ್ತು ಮೂರನೇ ಸ್ಥಾನ ಭುವನಗಿರಿಯ ರಾಯಲ್ ಬ್ರದರ್ಸ್ ತಂಡ, ನಾಲ್ಕನೇ ಸ್ಥಾನವನ್ನು ಗಿರೀಶ್ ಪ್ರೆಂಡ್ಸ್ ತಂಡ ಪಡೆದುಕೊಂಡವು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಐ.ಬಿ. ಶರತ್ ಮಂಡಳಿ ನಿವೃತ್ತ ಅಧಿಕಾರಿ ಶಾಂತಿ, ಡಾ. ಚಿಟ್ಟಿಯಪ್ಪ, ವಿಶ್ವ ಕುಮಾರ್ ಜವರೇಗೌಡ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೩ ಮಂದಿಯನ್ನು ಗೌರವಿಸಿ ಸನ್ಮಾನಿಸಲಾಯಿತು.