ಮಡಿಕೇರಿ, ಮಾ. ೧೯: ಮೂರ್ನಾಡು ಪದವಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಕೇಂದ್ರ ಮುಂಗಡ ಪತ್ರ ೨೦೨೧-೨೨ ಕುರಿತಾಗಿ ವಿಚಾರ ಸಂಕಿರಣ ನಡೆಯಿತು.
ಸೆಮಿನಾರಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕ ನವೀನ್, ದರ್ಶನ್, ಸೋಮಯ್ಯ ಹಾಗೂ ಅರ್ಥಶಾಸ್ತç ಉಪನ್ಯಾಸಕ ಹರೀಶ್ ವಿಷಯ ಮಂಡಿಸಿದರು. ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಾಚಿಮಾಡ ತಿಮ್ಮಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಲಿಯಲು ಅನುಕೂಲವಾಗುತ್ತದೆ ಹಾಗೂ ಪ್ರಸ್ತುತ ವರ್ಷದ ಬಜೆಟ್‌ನ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಸೆಮಿನಾರಿನಲ್ಲಿ ಮಂಡಿಸಿದ ವಿಚಾರದ ಕುರಿತಾಗಿ ಚರ್ಚೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಪಟ್ಟಡ ಪೂವಣ್ಣ, ಸಂಸ್ಥೆಯ ಕಾರ್ಯದರ್ಶಿ ವೇಣು ಅಪ್ಪಣ್ಣ ಹಾಗೂ ನಿರ್ದೇಶಕ ರಾಜಾ ಮಾದಪ್ಪ, ಖಜಾಂಚಿ ಸುಬ್ರಮಣಿ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕಿ ವಿಲ್ಮಾ ಸ್ವಾಗತಿಸಿ, ಸರೋಜಿನಿ ಹಾಗೂ ಕಲ್ಪನಾ ನಿರೂಪಿಸಿ, ಬೋಪಣ್ಣ ವಂದಿಸಿದರು.