ಸಿದ್ದಾಪುರ, ಮಾ ೧೯: ಮಗನ ಶಸ್ತç ಚಿಕಿತ್ಸೆಗೆ ಸಹಾಯ ಯಾಚಿಸುತ್ತಿರುವ ತಾಯಿ, ಪತಿಯ ಚೇತರಿಕೆಗೆ ದೇವರ ಮೊರೆ ಹೋದ ಪತ್ನಿ ಅಪ್ಪನ ಮುದ್ದಿಗಾಗಿ ಕಾದಿರುವ ಪುಟಾಣಿ ಮಕ್ಕಳು. ಇದು ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ ಕಾಲೋನಿಯಲ್ಲಿ ಕಂಡು ಬಂದ ಹೃದಯ ವಿದ್ರಾವಕ ದೃಶ್ಯ. ನೆಲ್ಲಿಹುದಿಕೇರಿ ನಿವಾಸಿ ಅನಿಲ್ ಕಳೆದ ವರ್ಷ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಮನೆಯಿಂದ ಅನತಿ ದೂರದ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಅನಿಲ್(ಸವಾರ)ನ ತಲೆಗೆ ಗಂಭೀರ ಗಾಯವಾಗಿತ್ತು.
ನಂತರ ಸಂಬAಧಿಕರ ಹಾಗೂ ಸಾಲ ಮಾಡಿ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಅಲ್ಪ ಚೇತರಿಸಿಕೊಂಡಿದ್ದರು. ಇದೀಗ ತಲೆಯಲ್ಲಿ ಮತ್ತೊಮ್ಮೆ ಶಸ್ತç ಚಿಕಿತ್ಸೆ ಅವಶ್ಯಕತೆ ಇದ್ದು ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರೂ. ೧ ಲಕ್ಷ ವೆಚ್ಚವಾಗಲಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಅನಿಲನ ಚಿಕಿತ್ಸೆಯ ವೆಚ್ಚ ಭರಿಸಲು ಅಸಾಧ್ಯವಾಗಿದೆ. ಅಪಘಾತವಾದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಮಾಡಿದ ಸಾಲ ಬಾಕಿ ಉಳಿದಿರುವ ಬೆನ್ನಲ್ಲೇ, ಮತ್ತೊಮ್ಮೆ ಚಿಕಿತ್ಸೆಯ ವೆಚ್ಚಕ್ಕಾಗಿ ಪರದಾಡುತ್ತಿರುವ ಅನಿಲನ ತಾಯಿ ಮತ್ತು ಹೆಂಡತಿ ಅಸಹಾಯಕರಾಗಿ ಕಣ್ಣೀರಾಕುತ್ತಿದ್ದಾರೆ. ಅಲ್ಲದೇ ಚಿಕಿತ್ಸೆಗಾಗಿ ಸಂಘ ಸಂಸ್ಥೆಗಳ ಮೊರೆ ಹೋಗಿದ್ದಾರೆ.
ಖಾತೆ ಸಂಖ್ಯೆ ೫೨೦೧೦೧೦೫೫೮೮೫೮೯೨ ಯೂನಿಯನ್ ಬ್ಯಾಂಕ್, ನೆಲ್ಯಹುದಿಕೇರಿ, IಈSಅ ಕೋಡ್ UಃIಓ ೦೯೦೩೬೦೪. ಮೊ.ನಂ. ೬೩೬೧೬೭೦೫೯೭.