ಗೋಣಿಕೊಪ್ಪ ವರದಿ, ಮಾ. ೨೦: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗ್ರಾಮದ ಡೆಡ್ಲಿ ಡ್ರೀಮ್ಸ್ ಸಂಘದ ವತಿಯಿಂದ ಆಯೋಜಿಸಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಮೈದಾನದ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ಸಣ್ಣುವಂಡ ಎಂ. ಸುರೇಶ್, ಮಚ್ಚಮಾಡ ಅನೀಶ್ ಮಾದಪ್ಪ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌ. ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಡೆಡ್ಲಿ ಡ್ರೀಮ್ಸ್ ಸಂಘದ ಸಂಚಾಲಕ ಬಾನಂಡ ಕ್ರಿಶ್‌ರಾಜ್ ಇತರರಿದ್ದರು.

ಫಲಿತಾಂಶ: ಜೆಬಿಎಸ್‌ಸಿ, ಮಾನಿಲ್ ಅಯ್ಯಪ್ಪ, ಸೆವೆನ್ ಫೈಟರ್ಸ್, ಎಚ್.ಎಂಸಿ ಬಿ ತಂಡಗಳು ಮೊದಲ ಸುತ್ತಿನಲ್ಲಿ ಜಯಗಳಿಸಿ ಮುನ್ನಡೆ ಕಾಯ್ದುಕೊಂಡಿದೆ. ೧೨ ತಂಡಗಳು ಟೂರ್ನಿಯಲ್ಲಿ ಭಾವಹಿಸಿದ್ದು, ಭಾನುವಾರ ಮಧ್ಯಾಹ್ನ ಫೈನಲ್ ಪಂದ್ಯ ನಡೆಯಲಿದೆ.