ಮಡಿಕೇರಿ, ಮಾ. ೨೦: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎನ್‌ಎಸ್ ಘಟಕದ ಉದ್ಘಾಟನೆ ಮಾಡಲಾಯಿತು.

ಮೂರ್ನಾಡು ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಿಗರಾದ ಅಕ್ಷತಾ ಶೆಟ್ಟಿ ಮಾತನಾಡಿ ಎನ್‌ಎನ್‌ಎಸ್ ರಾಷ್ಟç ನಿರ್ಮಾಣದ ಕಾರ್ಯದಲ್ಲಿ ಒಳಗೊಂಡAತಹ ಅನುಭವವನ್ನು ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ರಾಷ್ಟçಪ್ರೇಮ, ಸೇವಾಮನೋಭಾವ ಬೆಳೆಯುವಂತೆ ಮಾಡುತ್ತದೆ ಇದು ಸಮಾಜಸೇವೆಯ ಬಗೆಯಲ್ಲಿ ತಿಳಿಯಲು ಇರುವ ಒಂದು ಸರಕಾರದ ಯೋಜನೆಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.

ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಕುಮಾರ್, ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಕಾಲೇಜಿನ ಎನ್‌ಎನ್‌ಎಸ್ ಅಧಿಕಾರಿ ಹರೀಶ್ ಕಿಗ್ಗಾಲು, ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೇಣು ಅಪ್ಪಣ್ಣ, ನಿರ್ದೇಶಕ ರಾಜಾ ಮಾದಪ್ಪ ಇದ್ದರು. ಉಪನ್ಯಾಸಕ ದರ್ಶನ್ ಸ್ವಾಗತಿಸಿ, ಸೋಮಯ್ಯ ವಂದಿಸಿ, ಕಲ್ಪನಾ ಸಾಮ್ರಾಟ್ ನಿರೂಪಿಸಿದರು.