ಮಡಿಕೇರಿ, ಮಾ. ೧೬: ಅರಣ್ಯ ಇಲಾಖೆ ಧೋರಣೆಯಿಂದ ಹಾಡಿಯ ಮಕ್ಕಳು ಅಂಗನವಾಡಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮೇಲ್ಮನೆಯ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ಪ್ರಶ್ನೆಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಉತ್ತರಿಸಿದ್ದಾರೆ.

ಹಾಡಿಗಳಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನರೇಗಾ ಯೋಜನೆ ಮೂಲಕ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ತಲಾ ರೂ. ೮ ಲಕ್ಷ ಅನುದಾನ ನೀಡಿವೆ. ನೀಲಿ ನಕ್ಷೆ ಕೂಡ ತಯಾರಿಸಿ ಅರಣ್ಯ ಇಲಾಖೆ ಅನುಮತಿ ಕೋರಿ ಹಲವು ತಿಂಗಳು ಕಳೆದರೂ ಅರಣ್ಯ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಆನೆಚೌಕೂರು ವನ್ಯಜೀವಿ ವಲಯದ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಹಾಡಿಗಳಿದ್ದು,

ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನರೇಗಾ ಯೋಜನೆ ಮೂಲಕ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ತಲಾ ರೂ. ೮ ಲಕ್ಷ ಅನುದಾನ ನೀಡಿವೆ. ನೀಲಿ ನಕ್ಷೆ ಕೂಡ ತಯಾರಿಸಿ ಅರಣ್ಯ ಇಲಾಖೆ ಅನುಮತಿ ಕೋರಿ ಹಲವು ತಿಂಗಳು ಕಳೆದರೂ ಅರಣ್ಯ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಆನೆಚೌಕೂರು ವನ್ಯಜೀವಿ ವಲಯದ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಹಾಡಿಗಳಿದ್ದು,

(ಮೊದಲ ಪುಟದಿಂದ) ಹೀಗಾಗಿ ಕಟ್ಟಡ ನಿರ್ಮಾಣ, ಕುಡಿಯುವ ನಿರೀನ ಯೋಜನೆ, ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರ ಈ ಹಾಡಿಗಳ ಜನರಿಗೆ ಹಕ್ಕುಪತ್ರ ನೀಡಿದೆ. ಸರಕಾರದ ಮೂಲಭೂತ ಸೌಕರ್ಯ ಹೊಂದಲು ಹಾಡಿ ಜನರು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಅರಣ್ಯ ಇಲಾಖೆ ಕಠಿಣ ನೀತಿ ನಿಲ್ಲಿಸಿ ಜನರಿಗೆ ಮೂಲಭೂತ ಸೌಕರ್ಯ ನೀಡಲು ಮುಂದಾಗುವAತೆ ಸುನಿಲ್ ಸುಬ್ರಮಣಿ ಒತ್ತಾಯಿಸಿದ್ದರು.

ಇದಕ್ಕೆ ಉತ್ತರಿಸಿರುವ ಅರಣ್ಯ ಸಚಿವರು, ಹಕ್ಕುಗಳನ್ನು ಗುರುತಿಸಲಾಗಿರುವ ಪ್ರದೇಶದಲ್ಲಿ ಹೊಸ ಮನೆಗಳ ನಿರ್ಮಾಣ ಅಥವಾ ಅಸ್ತಿತ್ವದಲ್ಲಿರುವ ವಾಸಸ್ಥಳಗಳ ಸುಧಾರಣೆಗೆ ಅರಣ್ಯ ಇಲಾಖೆಯು ಅಡ್ಡಿಪಡಿಸುವುದಿಲ್ಲ. ಆದರೆ, ಹುಲಿ ಮೀಸಲು ಪ್ರದೇಶದಲ್ಲಿ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಒಪ್ಪಿಗೆ ಈ ನಿರ್ದಿಷ್ಟ ಚಟುವಟಿಕೆಯನ್ನು ಅನುಮತಿಸುವ ಮೊದಲು ಪರಿಶೀಲಿಸುತ್ತದೆ. ಅಭಿವೃದ್ದಿ ಕಾರ್ಯಕ್ಕೆ ಕೆಲ ಕಾನೂನಾತ್ಮಕ ವಿಚಾರಗಳಿವೆ. ಇದರ ಅಡಿಯಲ್ಲಿ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.