ಕುಶಾಲನಗರ, ಮಾ. ೧೬: ಲಾರಿಯಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚುವಲ್ಲಿ ಕುಶಾಲನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಂದಾಜು ರೂ. ೩೦ ಲಕ್ಷಕ್ಕೂ ಹೆಚ್ಚು ಕುಶಾಲನಗರ, ಮಾ. ೧೬: ಲಾರಿಯಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚುವಲ್ಲಿ ಕುಶಾಲನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಂದಾಜು ರೂ. ೩೦ ಲಕ್ಷಕ್ಕೂ ಹೆಚ್ಚು ತುಂಬಿದ ಲಾರಿಯಲ್ಲಿ ಭಾರೀ ಗಾತ್ರದ ಬೀಟೆ ನಾಟಾಗಳು ಪತ್ತೆಯಾಗಿದೆ. ಲಾರಿಯಲ್ಲಿ ಇದ್ದ ಚಾಲಕ ಸಿದ್ದಾಪುರದ ಇರ್ಷಾದ್, ಅಮ್ಮತ್ತಿಯ ಮಣಿ ಎಂಬವರುಗಳನ್ನು ವಶಕ್ಕೆ ತೆಗೆದುಕೊಂಡ ಕಾರ್ಯಾಚರಣೆ ತಂಡ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಿದ್ದಾಪುರ ಕಾಫಿ ತೋಟವೊಂದರಿAದ ಬೀಟೆ ಮರ ಲೋಡ್ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ.

ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ತಂಡಗಳ ನೇತೃತ್ವವನ್ನು

(ಮೊದಲ ಪುಟದಿಂದ) ಉಪವಲಯ ಅರಣ್ಯಾಧಿಕಾರಿಗಳಾದ ಕೆ.ಪಿ. ರಂಜನ್, ಅನಿಲ್ ಡಿಸೋಜ, ಕೆ.ಎನ್. ದೇವಯ್ಯ, ಕೆ.ಎಸ್. ಸುಬ್ರಾಯ ವಹಿಸಿದ್ದು, ಅರಣ್ಯ ರಕ್ಷಕರಾದ ಬಿ.ಸಿ. ಗಣೇಶ, ಆನಂದ ರಾಮಪ್ಪ, ಸಿದ್ದ ರಾಮ, ದಿನೇಶ, ಜಗ ಚಾಲಕ ಕೆ.ಡಿ. ವಾಸು, ಆರ್‌ಆರ್‌ಟಿ ತಂಡದ ಶಾಂತ, ಪ್ರದೀಪ, ಸುನಿಲ್, ರಮೇಶ, ಅಶೋಕ ಪಾಲ್ಗೊಂಡಿದ್ದರು.