ಮಡಿಕೇರಿ, ಮಾ. ೯: ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿಗಳಿಗೂ ಮನರಂಜನೆ ಎಂಬದು ಬೇಕೇ ಬೇಕು., ಮನುಷ್ಯ ವಿವಿಧ ಚಟುವಟಿಕೆಗಳಲ್ಲಿ ಮನರಂಜನೆಯನ್ನು ಕಂಡುಕೊAಡರೆ, ಪ್ರಾಣಿ-ಪಕ್ಷಿಗಳು ತಮ್ಮ ಆಹಾರ, ಪ್ರಕೃತಿ, ವಾತಾವರಣಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಮನರಂಜನೆಯನ್ನು ಕಂಡುಕೊಳ್ಳುತ್ತವೆ. ಮನುಷ್ಯನಿಗೆ ಮನರಂಜನೆ ನೀಡುವಲ್ಲಿ ಸಿನಿಮಾ ಕ್ಷೇತ್ರವೂ ಒಂದಾಗಿದೆ. ಹಿಂದೆ ಪ್ರತಿ ಊರಿನಲ್ಲಿ ಸಿನಿಮಾ ಮಂದಿರಗಳಿದ್ದುದು ಬರಬರುತ್ತಾ ಬಹುತೇಕ ಕಾಣೆಯಾಗಿವೆ., ಇದೀಗ ಮತ್ತೆ ಅಲ್ಲಲ್ಲಿ ಮಂದಿರಗಳು ತೆರೆದುಕೊಳ್ಳುತ್ತಿದ್ದು ಮತ್ತೆ ಮನರಂಜನೆ ಸಿಗುವಂತಾಗಿದೆ.

ಹಾಗೂ ಉತ್ತಮ ಸಂದೇಶಗಳನ್ನು ನೀಡಲಾಗುತಿತ್ತು. ಬರಬರುತ್ತಾ ನಾಟಕಗಳಿಗೆ ಇನ್ನೊಂದಿಷ್ಟು ಮಾರ್ಪಾಡು ಮಾಡಿ ಸಿನಿಮಾಗಳನ್ನಾಗಿ ಮಾಡಿ ಗೋಡೆಗಳ ಮೇಲೆ, ಟೆಂಟ್‌ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಕಪ್ಪು ಬಿಳುಪುಗಳಿದ್ದುದು ಬಣ್ಣಕ್ಕೆ ತಿರುಗಿತು. ಈಸ್ಟ್ಮನ್ ಕಲರ್ ಇದ್ದುದು ನಂತರ ಸಿನಿಮಾ ಸ್ಕೋಪ್‌ಗಳಾಗಿ ಮಾರ್ಪಾಡಾದವು. ತಂತ್ರಜ್ಞಾನ ಮುಂದುವರಿದು ಇದೀಗ ಡಿಜಿಟಲ್ ಮೂವಿಗಳಾಗಿ ಸ್ಯಾಟ್‌ಲೈಟ್ ಮೂಲಕ ನೇರವಾಗಿ ಪ್ರದರ್ಶನಗೊಳ್ಳುವಂತಾಗಿದೆ.
ಕೊಡಗು ಜಿಲ್ಲೆಯಲ್ಲೂ ಕೂಡ ಬಹಳಷ್ಟು ಸಿನಿಮಾ ಮಂದಿರಗಳು, ಟೆಂಟ್‌ಗಳಿದ್ದವು. ಟಿ.ವಿ.ಗಳು ವಿರಳವಾಗಿದ್ದ ಕಾಲದಲ್ಲಿ ಜನರು ಮಂದಿರಗಳಿಗೆ, ಟೆಂಟ್‌ಗೆ ಹೋಗಿ ಹಣ ಕೊಟ್ಟು ಸಿನಿಮಾ ನೋಡಿ ಮನರಂಜನೆ ಪಡೆದುಕೊಳ್ಳುತ್ತಿದ್ದರು. ಬರಬರುತ್ತಾ ಟಿ.ವಿ.ಗಳು ಹೆಚ್ಚಾದಂತೆ, ಸ್ಯಾಟ್‌ಲೈಟ್ ಮೂಲಕ ಡಿಶ್‌ಗಳ ಮೂಲಕ ಕಾರ್ಯಕ್ರಮಗಳು, ಸಿನಿಮಾಗಳು ಪ್ರಸಾರವಾಗತೊಡಗಿದಾಗ ಜನರು ಮನೆಯಲ್ಲಿಯೇ ಮನರಂಜನೆ ಕಂಡುಕೊಳ್ಳುವAತಾದಾಗ ಸಿನಿಮಾ ಮಂದಿರಗಳಿಗೆ ಜನರ ಬರುವಿಕೆ ಕುಂಠಿತಗೊAಡು ಆದಾಯವಿಲ್ಲದೆ, ಮುಂದುವರಿಸಲು ಸಾಧ್ಯವಾಗದೆ ಒಂದೊAದಾಗಿ ಮುಚ್ಚಲ್ಪಟ್ಟವು. ಕಾಲ ಕ್ರಮೇಣ ಬಹುತೇಕ ಎಲ್ಲ ಸಿನಿಮಾ ಮಂದಿರಗಳ ಬಾಗಿಲಿಗೆ ಬೀಗ ಮುದ್ರೆ ಬಿದ್ದಿತು. ಮಡಿಕೇರಿಯ ಒಂದು ಮಂದಿರ ಮಾತ್ರ ಉಳಿದುಕೊಂಡಿತು.
ಪೊಲೀಸರೇ ಬರಬೇಕಿತ್ತು..!
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎರಡು ಸಿನಿಮಾ ಮಂದಿರಗಳು ಹಾಗೂ ಒಂದು ಮಿನಿ ಥಿಯೇಟರ್ ಇದ್ದವು. ಹಾಗೂ ಉತ್ತಮ ಸಂದೇಶಗಳನ್ನು ನೀಡಲಾಗುತಿತ್ತು. ಬರಬರುತ್ತಾ ನಾಟಕಗಳಿಗೆ ಇನ್ನೊಂದಿಷ್ಟು ಮಾರ್ಪಾಡು ಮಾಡಿ ಸಿನಿಮಾಗಳನ್ನಾಗಿ ಮಾಡಿ ಗೋಡೆಗಳ ಮೇಲೆ, ಟೆಂಟ್‌ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಕಪ್ಪು ಬಿಳುಪುಗಳಿದ್ದುದು ಬಣ್ಣಕ್ಕೆ ತಿರುಗಿತು. ಈಸ್ಟ್ಮನ್ ಕಲರ್ ಇದ್ದುದು ನಂತರ ಸಿನಿಮಾ ಸ್ಕೋಪ್‌ಗಳಾಗಿ ಮಾರ್ಪಾಡಾದವು. ತಂತ್ರಜ್ಞಾನ ಮುಂದುವರಿದು ಇದೀಗ ಡಿಜಿಟಲ್ ಮೂವಿಗಳಾಗಿ ಸ್ಯಾಟ್‌ಲೈಟ್ ಮೂಲಕ ನೇರವಾಗಿ ಪ್ರದರ್ಶನಗೊಳ್ಳುವಂತಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎರಡು ಸಿನಿಮಾ ಮಂದಿರಗಳು ಹಾಗೂ ಒಂದು ಮಿನಿ ಥಿಯೇಟರ್ ಇದ್ದವು. (ಮೊದಲ ಪುಟದಿಂದ) ಎತ್ತಿರುವುದು ಕಳೆದ ೧ ದಶಕದ ಬೆಳವಣಿಗೆಯಾಗಿದೆ. ಸುತ್ತಮುತ್ತಲ ವ್ಯಾಪ್ತಿಯ ಪಿರಿಯಾಪಟ್ಟಣ, ಸುಂಟಿಕೊಪ್ಪ, ಕೊಣನೂರು ಪಟ್ಟಣಗಳಲ್ಲಿ ಕೂಡ ಥಿಯೇಟರ್‌ಗಳು ಮುಚ್ಚಲ್ಪಟ್ಟು ಇತ್ತೀಚೆಗೆ ಕುಶಾಲನಗರದಲ್ಲಿ ಕೂರ್ಗ್ ಸಿನಿಪ್ಲೆಕ್ಸ್ ಎಂಬ ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಚಲನಚಿತ್ರಗಳನ್ನು ಪ್ರದರ್ಶನ ಮಾಡುತ್ತಿರುವುದು ಕನಿಷ್ಟ ಚಲನಚಿತ್ರ ಪ್ರಿಯರಿಗೆ ಸಮಾಧಾನಕರ ವಿಷಯವಾಗಿದೆ. ಮೊಬೈಲ್, ಸಾಮಾಜಿಕ ಜಾಲತಾಣಗಳ ಮೂಲಕ ಬಹುತೇಕರು ಚಲನಚಿತ್ರಗಳು, ಧಾರಾವಾಹಿ ವೀಕ್ಷಣೆಯಲ್ಲಿ ತೊಡಗಿರುವುದೇ ಥಿಯೇಟರ್ ಅವನತಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.
ಕುಶಾಲನಗರ-ಮಡಿಕೇರಿ ರಸ್ತೆಯ ಬೈಚನಹಳ್ಳಿ ಬಳಿ ಇರುವ ಸಿನಿಪ್ಲೆಕ್ಸ್ ಆವರಣದಲ್ಲಿ ನಿತ್ಯ ಹೌಸ್‌ಫುಲ್ ಬೋರ್ಡ್ ಕಂಡುಬರುತ್ತಿದೆ. ಈ ಸಂದರ್ಭ ಕಳೆದ ಹತ್ತಾರು ವರ್ಷಗಳಿಂದ ಚಲನಚಿತ್ರ ಬಿಡುಗಡೆಯಂದೇ ಸಿನಿಮಾ ಥಿಯೇಟರ್‌ನಲ್ಲಿ ಹಾಜ ರಾಗುತ್ತಿರುವ ಗುಡ್ಡೆಹೊಸೂರಿನ ಹರೀಶ ಅವರಲ್ಲಿ ಮಾತನಾಡಿಸಿ ದಾಗ ಕೊರೊನಾ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಥಿಯೇಟರ್‌ಗಳು ಬಂದ್ ಆಗಿ ಕಾಲ ಕಳೆಯಲು ಕಷ್ಟವಾಗುತ್ತಿತ್ತು. ಇದೀಗ ಹಲವು ತಿಂಗಳುಗಳ ನಂತರ ಥಿಯೇಟರ್ ತೆರೆದಿರುವುದು ಸಂತಸದ ಸಂಗತಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕುಶಾಲನಗರದಲ್ಲಿ ಥಿಯೇಟರ್‌ಗಳು ಬಂದ್ ಆದ ಸಂದರ್ಭ ನೆರೆಯ ಹುಣಸೂರು, ಮೈಸೂರು ಭಾಗದಲ್ಲಿ ಚಲನಚಿತ್ರ ವೀಕ್ಷಿಸಲು ತೆರಳುತ್ತಿದ್ದ ನೆನಪು ಇನ್ನೂ ಇದೆ ಎನ್ನುವ ಅಭಿಲಾಷ್, ಥಿಯೇಟರ್‌ನಲ್ಲಿ ಮೂರು ಗಂಟೆಗಳ ಕಾಲ ಚಿತ್ರ ವೀಕ್ಷಿಸುವುದೇ ಒಂದು ಸಂಭ್ರಮ ಎನ್ನುವ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸುಮಾರು ೧೦ ತಿಂಗಳ ಕಾಲ ಥಿಯೇಟರ್ ಬಂದ್ ಆದ ಹಿನ್ನೆಲೆಯಲ್ಲಿ ಕೆಲಸಗಾರರಿಗೂ ಯಾವುದೇ ಕೆಲಸವಿಲ್ಲದೆ ಬದಲಿ ಕೆಲಸ ಹುಡುಕುವ ಪರಿಸ್ಥಿತಿ ಎದುರಾಗಿತ್ತು. ಇದೀಗ ಮತ್ತೆ ಅವರನ್ನು ಕರೆತಂದು ಹಿಂದಿನ ಸ್ಥಿತಿಗೆ ಥಿಯೇಟರ್ ವ್ಯವಸ್ಥೆ ತರಲು ಭಾರೀ ಕಷ್ಟಪಡಬೇಕಾಯಿತು ಎನ್ನುತ್ತಾರೆ ಥಿಯೇಟರ್ ಪಾಲುದಾರ ಹರೀಶ್.
ಕುಶಾಲನಗರದಲ್ಲಿ ಜನವರಿಯಲ್ಲಿ ಮತ್ತೆ ಥಿಯೇಟರ್ ತೆರೆದಿದ್ದು ಇದೀಗ ತುಂಬಿದ ಪ್ರೇಕ್ಷಕರಿಂದ ಚಿತ್ರ ಪ್ರದರ್ಶನವಾಗುತ್ತಿರುವುದರೊಂದಿಗೆ ಸಿನಿಪ್ರಿಯರ ಮುಖದಲ್ಲಿ ಮಂದಹಾಸ ಕಂಡುಬAದಿರುವುದAತೂ ಸತ್ಯ.
ವೀರಾಜಪೇಟೆ ತಾಲೂಕಿಗೆ ಒಂದೇ ಥಿಯೇಟರ್
ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಸಿದ್ದಾಪುರದ ಚಿತ್ರ ಮಂದಿರ ಪುನಾರಂಭವಾಗಿದ್ದು, ಚಿತ್ರ ರಸಿಕರ ಮನಸ್ಸಿಗೆ ಮುದ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸರ್ಕಾರವು ಎಲ್ಲಾ ಚಿತ್ರ ಮಂದಿರಗಳನ್ನು ಮುಚ್ಚುವಂತೆ ಆದೇಶವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಕೂಡ ಮುಂಜಾಗ್ರತಾ ಕ್ರಮವಾಗಿ ಸಿನಿಮಾ ಮಂದಿರವನ್ನು ಮುಚ್ಚಿದ್ದರು. ಸಿದ್ದಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೋಟ ಕಾರ್ಮಿಕರು ಹಾಗೂ ಬಡವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾನುವಾರ ಸಂತೆ ದಿನದಂದು ಹಾಗೂ ಸೋಮವಾರದಂದು ಕೆಲಸಗಳಿಗೆ ರಜೆ ಮಾಡಿ ಈ ಭಾಗದ ಮಂದಿ ಸಿದ್ದಾಪುರದ ಪಟ್ಟಣದಲ್ಲಿರುವ ವೀರಾಜಪೇಟೆ ತಾಲೂಕಿನ ಏಕೈಕ ಚಿತ್ರಮಂದಿರ ವುಡ್ ಲ್ಯಾಂಡ್ ಸಿನಿಪ್ಲೆಕ್ಸ್ ಚಿತ್ರಮಂದಿರಕ್ಕೆ ಚಲನಚಿತ್ರ ವೀಕ್ಷಿಸಲು ಬರುತ್ತಿದ್ದಾರೆ.
ಇದಲ್ಲದೇ ಗೋಣಿಕೊಪ್ಪಲು, ಕುಟ್ಟ ಹಾಗೂ ವೀರಾಜಪೇಟೆ ಯಿಂದಲೂ ಸಿನಿಮಾ ವೀಕ್ಷಿಸಲು ಸಿನಿಪ್ರಿಯರು ಆಗಮಿಸುತ್ತಿದ್ದಾರೆ. ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಚಿತ್ರ ಮಂದಿರದಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಚಿತ್ರ ಮಂದಿರದ ಮಾಲೀಕರಿಗೆ ಹಾಗೂ ಇದನ್ನೇ ಅವಲಂಬಿಸಿಕೊAಡು ಜೀವನ ಸಾಗಿಸುತ್ತಿದ್ದ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಆದರೆ ಇದೀಗ ಕೋವಿಡ್-೧೯ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿದ ಸರ್ಕಾರ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಿದರು. ಇದೀಗ ಸಿದ್ದಾಪುರ ಚಿತ್ರ ಮಂದಿರದಲ್ಲಿ ದಿನನಿತ್ಯ ೩ ಪ್ರದರ್ಶನಗಳು ನಡೆಯುತ್ತಿವೆ.
ಸರ್ಕಾರದ ಮಾರ್ಗ ಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ದಿನಕ್ಕೆ ೩ ಪ್ರದರ್ಶನವಾಗುತ್ತಿದ್ದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರು ಆಗಮಿಸುತ್ತಿಲ್ಲ. ಹೊಸ ಚಲನಚಿತ್ರಗಳು ಬಿಡುಗಡೆಗೊಂಡ ಕೂಡಲೇ ಹಾಗೂ ಉತ್ತಮ ಚಲನಚಿತ್ರ ಬಂದಲ್ಲಿ ಸಿನಿಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸುತ್ತಾರೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ಇದೀಗ ಕನ್ನಡ ಸಿನಿಮಾ ರಾಬರ್ಟ್ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು ಸಿನಿಪ್ರಿಯರು ಸಿನಿಮಾ ನೋಡಲು ದೂರದ ಊರುಗಳಿಂದ ಬಂದು ಟಿಕೆಟ್ ಸಿಗದೇ ಹಿಂತಿರುಗಿದ ಪ್ರಸಂಗವು ಕೂಡ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಿಯರು ಟಿಕೆಟ್ ಬುಕ್ಕಿಂಗ್ ಮಾಡಿ ಸಿನಿಮಾ ವೀಕ್ಷಿಸಲು ಬರುತ್ತಿದ್ದಾರೆ. ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಗಳು ಪ್ರಾರಂಭಗೊAಡ ಬಳಿಕ ಇದೀಗ ಪಟ್ಟಣದಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬರುತ್ತಿದೆ.
ಹೊರ ಜಿಲ್ಲೆಯಿಂದಲೂ ಸುಂಟಿಕೊಪ್ಪಕ್ಕೆ
ಚಿತ್ರ ರಸಿಕರ ಆಶ್ರಯ ತಾಣವಾದ ಸುಂಟಿಕೊಪ್ಪದ ಗಣೇಶ ಚಿತ್ರ ಮಂದಿರ ಕೊರೊನಾ ಮಹಾಮಾರಿ ನಂತರ ಸರಕಾರದ ಆದೇಶದಂತೆ ತೆರೆ ಕಾಣುತ್ತಿದ್ದು ಚಲನಚಿತ್ರ ಪ್ರೇಮಿಗಳಿಗೆ ರಸದೌತಣ ನೀಡುತ್ತಿದೆ.
ಮಡಿಕೇರಿಯಲ್ಲಿ ಚಿತ್ರ ಮಂದಿರ ಬಾಗಿಲು ಹಾಕಿರುವುದರಿಂದ ದೂರದ ಸುಳ್ಯ, ಮಡಿಕೇರಿ, ಮಕ್ಕಂದೂರು, ಮಾದಾಪುರ, ಹಟ್ಟಿಹೊಳೆ, ಮುಕ್ಕೋಡ್ಲು, ಸೋಮವಾರಪೇಟೆ, ಕುಶಾಲನಗರ, ಹೊಸಕೋಟೆ, ಚಿಕ್ಲಿಹೊಳೆ ಮಂದಿ ಸುಂಟಿಕೊಪ್ಪ ಚಿತ್ರಮಂದಿರಕ್ಕೆ ಚಿತ್ರ ಪ್ರೇಮಿಗಳು ಬರುತ್ತಿದ್ದಾರೆ.
ಸುಂಟಿಕೊಪ್ಪದಲ್ಲಿ ಚಿತ್ರ ಮಂದಿರ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ೨೯.೧೧.೨೦೧೯ ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಉದ್ಘಾಟಿಸಿದ್ದರು. ಆನಂತರ ಕೊರೊನಾ ಮಹಾಮರಿಯಿಂದ ಚಿತ್ರಮಂದಿರ ಅನಿವಾರ್ಯವಾಗಿ ಸರಕಾರದ ಆದೇಶದಂತೆ ‘ಬಂದ್’ ಮಾಡಲಾಗಿತ್ತು.
ಇದೀಗ ಮತ್ತೆ ಚಿತ್ರ ಮಂದಿರ ತೆರೆಯಲಾಗಿದ್ದು, ಚಿತ್ರ ಪ್ರೇಮಿಗಳು ಆರಂಭ ದಿನಗಳಲ್ಲಿ ಬಾರೀ ಸಂಖ್ಯೆಯಲ್ಲಿ ಬರುತ್ತಿದ್ದು, ಚಿತ್ರಮಂದಿರ ಭರ್ತಿಯಾಗಿದ್ದವು ಎಂದು ವ್ಯವಸ್ಥಾಪಕ ರಮೇಶ್ ಬಾಬು ತಿಳಿಸಿದ್ದಾರೆ.
ಬೆಳಿಗ್ಗೆ ೧೧ ಗಂಟೆಗೆ, ಅಪರಾಹ್ನ ೨ ಗಂಟೆಗೆ, ಸಂಜೆ ೬.೧೫ಕ್ಕೆ ಹಾಗೂ ೯.೧೫ಕ್ಕೆ ಚಲನಚಿತ್ರ ಪ್ರದರ್ಶನವಾಗುತ್ತಿದೆ. ಬೆಳಿಗ್ಗೆ, ಮಧ್ಯಾಹ್ನದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಸಂಜೆ ಮತ್ತು ರಾತ್ರಿ ಪ್ರದರ್ಶನದಲ್ಲಿ ಸರಾಸರಿ ಸಂಖ್ಯೆಯ ಪ್ರೇಕ್ಷಕರು ಬರುತ್ತಿರುವುದರಿಂದ ಅದರಲ್ಲೂ ದೂರದ ಗ್ರಾಮೀಣ ಪ್ರದೇಶದ ಜನರ ಅಪೇಕ್ಷೆಯಂತೆ ಸ್ಟಾರ್ ನಾಯಕರ ಚಿತ್ರಕ್ಕೆ ಭಾರೀ ಬೇಡಿಕೆಯಿದೆ. ತಮಿಳು ಸ್ಟಾರ್ ನಟ ವಿಜಯ ಅವರ ಮಾಸ್ಟರ್, ಕನ್ನಡದ ಧ್ರುವಸರ್ಜಾ ಅವರ ಪೊಗರು ಚಲನ ಚಿತ್ರ ಪ್ರೇಕ್ಷಕರ ಮನ ಸೆಳೆದಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಸುಂಟಿಕೊಪ್ಪ ಗಣೇಶ್ ಚಿತ್ರ ಮಂದಿರ ೫ ದಶಕಗಳಿಂದ ತನ್ನದೇ ರೀತಿಯಲ್ಲಿ ಜನಮನ್ನಣೆಗಳಿಸಿದ್ದು, ಅಂದಿನ ದಿನಗಳಲ್ಲಿ ರೀಲ್ ಮೂಲಕ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಈಗ ವಿನೂತನ ತಂತ್ರಜ್ಞಾನದಿAದ ಚಿತ್ರ ಪ್ರೇಮಿಗಳಿಗೆ ಮನರಂಜನೆ ನೀಡುತ್ತಿದೆ.
ಗ್ರಾಮೀಣ ಪ್ರದೇಶದ ಅದರಲ್ಲೂ ಕೂಲಿ ಕಾರ್ಮಿಕರೇ ಹೆಚ್ಚಾಗಿ ಚಲನ ಚಿತ್ರ ವೀಕ್ಷಿಸಲು ಬರುತ್ತಿದ್ದಾರೆ. ಕೆಲವರು ಮುಂಗಡವಾಗಿ ಟಿಕೆಟ್ ಖರೀದಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.
ಮನೋರಂಜನೆಯಿAದ ದೂರ ಉಳಿದಿರುವ ಸೋಮವಾರಪೇಟೆ
ಕಳೆದ ನಾಲ್ಕು ವರ್ಷಗಳ ಹಿಂದೆ ಇದ್ದಂತಹ ಒಂದೇ ಒಂದು ಚಿತ್ರಮಂದಿರವೂ ಸಹ ಇದೀಗ ಮುಚ್ಚಲ್ಪಟ್ಟಿರುವುದರಿಂದ ಸೋಮವಾರಪೇಟೆ ಭಾಗದ ಸಿನಿಪ್ರಿಯರಿಗೆ ಸಿನಿಮಾಗಳ ಮನೋರಂಜನೆ ಇಲ್ಲವಾಗಿದೆ.
ಕಳೆದ ೨೦ ವರ್ಷಗಳ ಹಿಂದೆ ಸೋಮವಾರಪೇಟೆಯಲ್ಲಿ ಮೂರು ಚಿತ್ರಮಂದಿರಗಳಿದ್ದು, ಪ್ರತಿ ದಿನದ ಪ್ರತಿ ಪ್ರದರ್ಶನವೂ ಸಿನಿ ಪ್ರಿಯರಿಂದ ಬಹುತೇಕ ಭರ್ತಿಯಾಗುತ್ತಿತ್ತು. ನಂತರದ ವರ್ಷಗಳಲ್ಲಿ ಒಂದೊAದೇ ಚಿತ್ರಮಂದಿರ ಮುಚ್ಚಲ್ಪಟ್ಟು, ಚಿತ್ರಮಂದಿರವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದಾಗಿ ೨೦೧೪ರಲ್ಲಿ ಮನಸ್ವಿ ಚಿತ್ರಮಂದಿರದ ಬದಲಾಗಿ ತ್ರಿಷಾ ಚಿತ್ರಮಂದಿರ ಹೆಸರಿನಲ್ಲಿ ಇಲ್ಲಿನ ಮಡಿಕೇರಿ ರಸ್ತೆಯಲ್ಲಿ ಪುನರಾರಂಭಗೊAಡ ಚಿತ್ರಮಂದಿರ ಕಳೆದ ೪ ವರ್ಷಗಳ ಹಿಂದೆ ಮುಚ್ಚುವ ಮೂಲಕ ಈ ಭಾಗದಲ್ಲಿ ಒಂದೇ ಒಂದು ಚಿತ್ರಮಂದಿರ ಇಲ್ಲದಂತಾಗಿದೆ.
ಕಳೆದ ೨ ದಶಕಗಳ ಹಿಂದೆ ಸೋಮವಾರಪೇಟೆಯಲ್ಲಿ ಶ್ರೀಗುರುರಾಘವೇಂದ್ರ, ಲಕ್ಷಿö್ಮÃ ಚಿತ್ರಮಂದಿರ, ಮನಸ್ವಿ ಥಿಯೇಟರ್ ಜೊತೆಗೆ ರಾಜ್‌ಮಹಲ್ ಕಟ್ಟಡದಲ್ಲಿ ಮಿನಿ ಚಿತ್ರಮಂದಿರವೂ ಕಾರ್ಯಾಚರಿಸುತ್ತಿತ್ತು. ಇದೀಗ ಎಲ್ಲವೂ ಮುಚ್ಚಲ್ಪಟ್ಟಿರುವದರಿಂದ ಪ್ರಸ್ತುತ ಸಿನಿ ಪ್ರಿಯರು, ಸಿನಿಮಾಗಳನ್ನು ನೋಡಲು ಕಲೆಕ್ಷನ್ ಇಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.
ಸೋಮವಾರಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ತ್ರಿಷಾ ಚಿತ್ರಮಂದಿರದ ಕಟ್ಟಡವನ್ನು ಇದೀಗ ಒಡೆಯಲಾಗುತ್ತಿದ್ದು, ಬೇರೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಇರಾದೆಯನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಒಂದು ಕಾಲದಲ್ಲಿ ಭರ್ಜರಿ ಮನೋರಂಜನೆಗಳನ್ನು ಒದಗಿಸುತ್ತಿದ್ದ ಸಿನಿಮಾ ಮಂದಿರಗಳು ತೆರೆಮರೆಗೆ ಸರಿದಿವೆ. ಇದರೊಂದಿಗೆ ಡಿವಿಡಿ, ಸಿ.ಡಿ. ಪ್ಲೇಯರ್ ಜೊತೆಗೆ ಸಿನಿಮಾ ಸಿ.ಡಿ., ಕ್ಯಾಸೆಟ್‌ಗಳೂ ಇಲ್ಲದಿರುವರಿಂದ ಬಹುತೇಕ ಮಂದಿ ಮನೆಯ ಟಿ.ವಿ.ಗಳ ಮೊರೆ ಹೋಗಿದ್ದಾರೆ. ಮೊಬೈಲ್‌ಗಳಲ್ಲಿಯೂ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ.
ಒಂದು ಸಿನಿಮಾ ತಯಾರಿಸಲು ಸಾಕಷ್ಟು ಶ್ರಮ, ಬಂಡವಾಳ ಹಾಕಲಾಗುತ್ತದೆ. ಪ್ರಸ್ತುತ ಕಾಲಮಾನದಲ್ಲಿ ಒಂದು ಸಿನಿಮಾ ಮಾಡಲು ಬಹುಕೋಟಿ ವೆಚ್ಚವಾಗುತ್ತದೆ. ವಿತರಕರು ಕೂಡ ಹಣ ವ್ಯಯಮಾಡಿ ಸಿನಿಮಾ ಖರೀದಿಸಿ ಸಿನಿಮಾ ಮಂದಿರಗಳಿಗೆ ವಿತರಣೆ ಮಾಡುತ್ತಾರೆ. ಆದರೆ, ಕೆಲವರು ಆ ಸಿನಿಮಾವನ್ನು ನಕಲು ಮಾಡಿ, ಸಿ.ಡಿ. ಮಾಡಿ ಹಂಚಿಬಿಡುತ್ತಾರೆ. ಜನರು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡುತ್ತಾರೆ. ಹೀಗಾದರೆ, ಜನರು ಸಿನಿಮಾ ಮಂದಿರಗಳಿಗೆ ಬಾರದೆ ಹೋದರೆ ಸಿನಿಮಾ ಮಂದಿರಗಳನ್ನು ಮುನ್ನಡೆಸುವದಾದರೂ ಹೇಗೇ..?
-ಕುಡೆಕಲ್ ಸಂತೋಷ್. ಸಹಕಾರ; ಚಂದ್ರಮೋಹನ್, ವಾಸು ಆಚಾರ್ಯ, ರಾಜು ರೈ, ವಿಜಯ್ ಹಾನಗಲ್, ಲಕ್ಷಿö್ಮÃಶ್