ಮಡಿಕೇರಿ, ಮಾ. ೧೭: ಬೆಂಗಳೂರಿನ ಯಲಹಂಕದ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಅಲ್ಲಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಸಲಾದ ನಾಟ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಬಿ. ಚೈತನ್ಯ ಕಲಾ ಮಾಣಿಕ್ಯ ಪ್ರಶಸ್ತಿ ಪಡೆದುಕೊಂಡು ದೆಹಲಿಯಲ್ಲಿ ನಡೆಯಲಿರುವ ರಾಷ್ಟçಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಚೆಟ್ಟಿಮಾನಿಯ ಸಾಂದೀಪನಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಅಯ್ಯಂಗೇರಿ ಗ್ರಾಮ ನಿವಾಸಿ ಕಾವೇರಿಮನೆ ಭರತ್ ಹಾಗೂ ಜೀವಿತಾ ದಂಪತಿಯ ಪುತ್ರಿಯಾಗಿದ್ದು, ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.