ಗೋಣಿಕೊಪ್ಪಲು, ಮಾ. ೧೬: ಕಳೆದ ೨೬ ದಿನಗಳಿಂದ ನಿರಂತರ ಹುಲಿ ಸೆರೆಗೆ ಅರಣ್ಯ ಇಲಾಖೆಯು ಹಲವು ಪ್ರಯತ್ನಗಳನ್ನು ನಡೆಸಿದರಾದರೂ ಮಾನವರನ್ನು ಕೊಂದ ಹುಲಿಯನ್ನು ಹಿಡಿಯುವುದಾಗಲಿ, ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವುದಾಗಲಿ ಸಾಧ್ಯವಾಗಲಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಅಂತಿಮವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದೀಗ ಕಾಡಿನೊಂದಿಗೆ ಅವಿನಾಭಾವ ಸಂಬAಧ ಹೊಂದಿರುವ, ಅರಣ್ಯದ ಪ್ರಾಣಿಗಳನ್ನು ದೂರದಿಂದಲೇ ಗುರುತಿಸುವ ಕಲೆ ಹೊಂದಿರುವ, ಅರಣ್ಯ ಪ್ರದೇಶದಲ್ಲಿ ದಿನಗಟ್ಟಲೆ ನಡೆದುಕೊಂಡೇ ಸಾಗುವ ಸೋಲಿಗರನ್ನು ಕರೆ ತರುವ ಮೂಲಕ ಇವರಿಂದ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವ ವಿನೂತನ ಪ್ರಯತ್ನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದಾರೆ.

ಬಿಳಿಗಿರಿ ರಂಗನ ಬೆಟ್ಟದಿಂದ ೫ ಜನರ ಸೋಲಿಗರ ತಂಡವು ಸೋಮವಾರ ಸಂಜೆಯ ವೇಳೆಯಲ್ಲಿ ಬೆಳ್ಳೂರಿನ ಹುಲಿ ಕಾರ್ಯಾಚರಣೆಯ ಕ್ಯಾಂಪ್‌ಗೆ ಆಗಮಿಸಿ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ೫ ತಂಡಗಳಲ್ಲಿ ಸೋಲಿಗರೊಂದಿಗೆ ಆನೆ ಮಾವುತರು, ಆರ್‌ಆರ್‌ಟಿ ತಂಡ, ಎಸ್.ಟಿ.ಬಿ.ಎಸ್. ತಂಡ ಸೋಲಿಗರ ಸಹಕಾರದಿಂದ ಪ್ರತಿ ದಿನ ಕಾಡಂಚಿನಲ್ಲಿ,

ಯಾರು ಸುಳಿಯದ ಅರಣ್ಯ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಹುಡುಕುತ್ತ ಸಾಗುತ್ತಿದ್ದಾರೆ. ಈ ಮೂಲಕ ಸೋಲಿಗರು ಪಾಳು ಬಿದ್ದ ಕಾಫಿ ತೋಟ, ದೇವರಕಾಡು, ಕುರುಚಲು ಕಾಡಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಹುಲಿಯ ಹೆಜ್ಜೆಯ ಗುರುತುಗಳನ್ನು ಕಂಡು ಹಿಡಿಯುವಲ್ಲಿ ಈ ಸೋಲಿಗರ ತಂಡ ಪರಿಣತಿ ಪಡೆದಿದ್ದು ರಾಜ್ಯದ ವಿವಿಧ

(ಮೊದಲ ಪುಟದಿಂದ) ಪ್ರದೇಶಗಳಲ್ಲಿ ಹುಲಿ ಹಾವಳಿಯ ಸಂದರ್ಭ ಈ ಸೋಲಿಗರು ಹುಲಿಯ ಜಾಡನ್ನು ಕಂಡು ಹಿಡಿದು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಲಿಗರನ್ನು ಹುಲಿಯ ಕಾರ್ಯಾಚರಣೆಗೆ ಬಳಸಿಕೊಂಡಿದ್ದಾರೆ. ಪ್ರತಿ ದಿನ ೮ ರಿಂದ ೧೦ ಕಿ.ಮೀ. ಪಾಳು ಬಿದ್ದ ಪ್ರದೇಶದಲ್ಲಿ ನಡೆದಾಡುವ ನಿಪುಣತೆ ಹೊಂದಿರುವ ಇವರು ಬೆಳ್ಳೂರು ಭಾಗದಲ್ಲಿ ಅರಣ್ಯ ಸಿಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ತನ್ನ ವಾಸ ಸ್ಥಳವನ್ನು ಆಗಿಂದ್ದಾಗಿಯೇ ಬದಲಾಯಿಸುತ್ತಿರುವ ಹುಲಿಯ ಜಾಡನ್ನು ಹಿಡಿಯಲು (ಮೊದಲ ಪುಟದಿಂದ) ಪ್ರದೇಶಗಳಲ್ಲಿ ಹುಲಿ ಹಾವಳಿಯ ಸಂದರ್ಭ ಈ ಸೋಲಿಗರು ಹುಲಿಯ ಜಾಡನ್ನು ಕಂಡು ಹಿಡಿದು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಲಿಗರನ್ನು ಹುಲಿಯ ಕಾರ್ಯಾಚರಣೆಗೆ ಬಳಸಿಕೊಂಡಿದ್ದಾರೆ. ಪ್ರತಿ ದಿನ ೮ ರಿಂದ ೧೦ ಕಿ.ಮೀ. ಪಾಳು ಬಿದ್ದ ಪ್ರದೇಶದಲ್ಲಿ ನಡೆದಾಡುವ ನಿಪುಣತೆ ಹೊಂದಿರುವ ಇವರು ಬೆಳ್ಳೂರು ಭಾಗದಲ್ಲಿ ಅರಣ್ಯ ಸಿಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ತನ್ನ ವಾಸ ಸ್ಥಳವನ್ನು ಆಗಿಂದ್ದಾಗಿಯೇ ಬದಲಾಯಿಸುತ್ತಿರುವ ಹುಲಿಯ ಜಾಡನ್ನು ಹಿಡಿಯಲು ದ.ಕೊಡಗಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ಅಳಮೇಂಗಡ ಮೋಹನ್ ದಾಸ್ ಎಂಬುವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ತಾ. ೧೬ರ ಮುಂಜಾನೆ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಮನೆಯವರು ಎಂದಿನAತೆ ಕೊಟ್ಟಿಗೆಗೆ ಹಾಲು ಕರೆಯಲು ತೆರಳಿದ ಸಂದರ್ಭ ಹಸು ಮೃತಪಟ್ಟಿರುವುದು ತಿಳಿದು ಬಂದಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಚೆಕ್ಕೇರ ಸೂರಿ ಅಯ್ಯಪ್ಪ, ಸದಸ್ಯ ಶರೀನ್ ಮುತ್ತಣ್ಣ, ಗ್ರಾಮದ ಪ್ರಮುಖರಾದ ಮಾಚಂಗಡ ಅಶೋಕ್, ಅಳಮೇಂಗಡ ದಿಲ್ಲು, ಮಲ್ಲೇಂಗಡ ಶಶಿಮಣಿ, ಆರ್‌ಎಂಸಿ ಮಾಜಿ ಅಧ್ಯಕ್ಷ ಸುಜಾ ಪೂಣಚ್ಚ ಮುಂತಾದವರು ಸ್ಥಳಕ್ಕೆ ತೆರಳಿ ಕ್ರಮಕ್ಕೆ ಒತ್ತಾಯಿಸಿದರು.

ಅರಣ್ಯ ಅಧಿಕಾರಿಗಳು ಕೂಡಲೇ ಹುಲಿ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು. ಕೂಂಬಿAಗ್ ಕಾರ್ಯಾಚರಣೆ ಚುರುಕುಗೊಳಿಸಿ, ಹುಲಿ ಸೆರೆಗೆ ಬೋನನ್ನು ಅಳವಡಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೆರ ಸೂರ್ಯ ಆಗ್ರಹಿಸಿದ್ದಾರೆ.