ಮಡಿಕೇರಿ, ಮಾ. ೧೬: ಕೊಡಗು ಜಿಲ್ಲೆಯಲ್ಲಿ ನಿರಂತರ ಹುಲಿ ದಾಳಿ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಅರಣ್ಯ ಸಚಿವರು ಕೊಡಗಿಗೆ ಆಗಮಿಸಬೇಕೆಂದು ಮೇಲ್ಮನೆಯಲ್ಲಿ ವೀಣಾ ಅಚ್ಚಯ್ಯ ಒತ್ತಾಯಿಸಿದರು. ಶಾರ್ಪ್ ಶೂಟರ್ ಹಠಾತ್ ನಿರ್ಗಮನ, ವ್ಯಾಘ್ರ ದಾಳಿಯಿಂದ ಜಿಲ್ಲೆ ಅನುಭವಿಸುತ್ತಿರುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವಿಸ್ಕೃತ ವರದಿ ಪ್ರಕಟಗೊಂಡಿತ್ತು. ಇದನ್ನು ಮುಂದಿಟ್ಟುಕೊAಡು ವಿಧಾನ ಪರಿಷತ್‌ನಲ್ಲಿ ವೀಣಾ ಅಚ್ಚಯ್ಯ ಗಮನ ಸೆಳೆದರು.
ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಈ ನಡುವೆ ಸರಕಾರ ಹುಲಿ ಸೆರೆಗೆ ನಿಯೋಜಿಸಿದ್ದ ಶಾರ್ಪ್ ಶೂಟರ್ ನಿರ್ಗಮನ ಕೂಡ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದರು.
ಕೊಡಗಿಗೆ ಧೈರ್ಯದಿಂದ ಬನ್ನಿ : ಕೊಡಗಿನ ಜನರು ತುಂಬ ಒಳ್ಳೆಯವರು ಯಾವುದೇ ಭಯವಿಲ್ಲದೆ ಅರಣ್ಯ ಸಚಿವರು ಕೊಡಗಿಗೆ ಬರಬಹುದು. ನಾವು ನಿಮ್ಮೊಂದಿಗೆ ಬರುತ್ತೇವೆ.
(ಮೊದಲ ಪುಟದಿಂದ) ಜನರು ಯಾವುದೇ ತೊಂದರೆ ನಿಮಗೆ ನೀಡುವುದಿಲ್ಲ. ಕೊಡಗು ಜಿಲ್ಲೆಗೆ ಅರಣ್ಯ ಸಚಿವರು ಬಂದು ಜನರಿಗೆ ವಿಶ್ವಾಸದ ಮಾತುಗಳನ್ನಾಡಬೇಕು. ಅರಣ್ಯ ಇಲಾಖೆಗೆ ಶಕ್ತಿ ತುಂಬಿಸಬೇಕು ಎಂದು ವೀಣಾ ಅಚ್ಚಯ್ಯ ಒತ್ತಾಯಿಸಿದರು.
ಆನೆ ಬಳಸಿಕೊಂಡು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಕಾಫಿ ತೋಟಗಳು ನಾಶವಾಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಕೋರಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ನಾನು ಕೊಡಗಿಗೆ ಬರಬಹುದು. ಸರಕಾರ ಅಲ್ಲಿಗೆ ಹೋದರೆ ಹುಲಿ ಸಿಗುತ್ತೆ ಎಂದಾದರೆ ನಾನು ಖಂಡಿತ ಬರುತ್ತೇನೆ. ಆದರೆ, ನಾನು ಬಂದರೆ ಅರಣ್ಯ ಇಲಾಖೆ ಅಧಿಕಾರಿಗಳು ಶಿಷ್ಠಾಚಾರದ ಹಿನ್ನೆಲೆ ನನ್ನ ಹಿಂದೆ ಇರುತ್ತಾರೆ. ಇದರಿಂದ ಕಾರ್ಯಾ ಚರಣೆಗೆ ತೊಡಕಾಗುತ್ತದೆ. ಇದರಿಂದ ಕೊಡಗಿಗೆ ಹೋಗುವುದನ್ನು ತಡ ಮಾಡಿದ್ದೇನೆ ಹುಲಿ ಸಿಕ್ಕ ನಂತರ ನಿಶ್ಚಿತವಾಗಿ ಬಂದು ಜನರ ಸಮಸ್ಯೆ ಆಲಿಸುತ್ತೇನೆ ಎಂದರು.
ಪರಿಹಾರ ಹೆಚ್ಚಳದ ಭರವಸೆ : ಹುಲಿ ದಾಳಿಯಿಂದ ಸಾವನ್ನಪ್ಪುವ ಜಾನುವಾರುಗಳಿಗೆ ರೂ. ೧೦ ಸಾವಿರ ಪರಿಹಾರ ನೀಡಲಾಗುತ್ತಿದೆ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ವಿಪತ್ತು ನಿಧಿಯಿಂದ ಪರಿಹಾರÀ ಹಣವನ್ನು ರೂ. ೩೦ ಸಾವಿರಕ್ಕೆ ಏರಿಕೆ ಮಾಡಲು ಕ್ರಮಕೈಗೊಳ್ಳುತ್ತೇನೆ. ಇದರೊಂದಿಗೆ ಬೆಳೆ ಹಾನಿಗೆ ಪ್ರಧಾನಮಂತ್ರಿ ಫಸಲು
ಭೀಮ ಯೋಜನೆಗೆ ಸಂಯೋಜಿಸ ಬಹುದೇ ಎಂದು ಕೃಷಿ ಸಚಿವ ರೊಂದಿಗೆ ಚರ್ಚಿಸಿ, ಪರಿಶೀಲಿಸಿ
ಕ್ರಮ ಕೈಗೊಳ್ಳುತ್ತೇನೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.