ಸಿದ್ದಾಪುರ, ಮಾ. ೧೬: ಕೊಡಗು ಜಿಲ್ಲೆಯನ್ನು ಸ್ಕಾಟ್‌ಲ್ಯಾಂಡ್‌ಗೆ ಹೋಲಿಸಿರುವುದು ತಪ್ಪು, ಕೊಡಗು ಕಾವೇರಿ ಮಾತೆಯ ತವರೆಂದು ಬಣ್ಣಿಸಿ, ಕೊಡಗನ್ನು ಸಿಪಾಯಿಗಳ ನಾಡೆಂದು ಗುರುತಿಸಿ, ಕೊಡಗಿನ ಸಂಸ್ಕೃತಿಯನ್ನು ವಿದೇಶಿ ನೆಲಕ್ಕೆ ಹೋಲಿಕೆ ಮಾಡಬೇಡಿ ಎಂದು ಖ್ಯಾತ ವಾಗ್ಮಿ ಚೈತ್ರ ಕುಂದಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.

ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ಶಿವರಾತ್ರಿ ಜಾಗರಣೆ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿವರಾತ್ರಿ ಜಾಗರಣೆ ಕೇವಲ ಒಂದು ದಿನ ನಿದ್ದೆಗೆಟ್ಟು ಜಾಗರಣೆ ಆಚರಿಸುವ ಹಬ್ಬವಲ್ಲ. ಇದು ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ಪ್ರತಿಯೊಬ್ಬರು ಜಾಗರೂಕತೆಯಿಂದ ಜಾಗರಣೆ ಮಾಡಬೇಕೆಂಬ ಸಂದೇಶ ಸಾರುವ ಹಬ್ಬವಾಗಿದೆ ಎಂದರು.

ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಲವ್ ಜಿಹಾದ್ ಹೆಸರಿನಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳು ನಮ್ಮ ಸಮಾಜದ ಸುತ್ತಮುತ್ತ ನೆಲೆಸಿದ್ದು, ಈ ಹಿನ್ನೆಲೆಯಲ್ಲಿ ಪೋಷಕರು ಜಾಗೃತರಾಗಿ ಎಂದು ಕಿವಿಮಾತು ಹೇಳಿದರು.

ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಮೋಹಕ್ಕೆ ಬಲಿಯಾದ ಹಿಂದೂಗಳು ಹುಟ್ಟು ಹಬ್ಬ, ಇನ್ನಿತರ ಆಚಾರ ವಿಚಾರಗಳನ್ನು, ಹಿಂದೂ ಸಂಸ್ಕೃತಿ ಯನ್ನು ಬದಿಗೊತ್ತಿ, ಪಾಶ್ಚಾತ್ಯ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂದಿಗೂ ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳು, ದೇಶೀಯ ಉತ್ಸವಗಳು ನಮ್ಮ ಗ್ರಾಮಗಳಲ್ಲಿ ನೆಲೆ ನಿಲ್ಲಬೇಕೆಂದರೆ ಹಿಂದೂ ಸಂಘಟನೆಯ ಯುವಕರು ಬೇಕು. ಆದರೆ ಇತ್ತೀಚೆಗೆ ಕೇಸರಿ ಶಾಲು ಧರಿಸಿ, ಧರ್ಮದ ಹಾಗೂ ಸಮಾಜದ ಕಾರ್ಯ ಮಾಡುತ್ತಿರುವ ಯುವಕರಿಗೆ ಕೋಮುವಾದಿಗಳೆಂಬ ಹಣೆಪಟ್ಟಿ ಕಟ್ಟಿ ವಿರೋಧಿಸುತ್ತಿರುವ ಜನರು ನಮ್ಮ ಮಧ್ಯೆ ಇರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದರು.

ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಅಂಬಿಕಾ ಪ್ರಾಸ್ತಾವಿಕ ಮಾತನಾಡಿ ದುಷ್ಟ ಶಕ್ತಿಗಳು ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮತಾಂತರ ಮಾಡುತ್ತಿದ್ದು, ಹಿಂದೂಗಳು ಜಾಗ ರೂಕತೆಯಿಂದ ಇರಬೇಕೆಂದರು.

ಶಿವರಾತ್ರಿ ಜಾಗರಣೆ ಮಹೋತ್ಸವದ ಅಂಗವಾಗಿದ್ದು ಸಂಜೆ ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಚಂಡೆ ವಾದ್ಯ ಮೇಳಗಳೊಂದಿಗೆ ಅಪಾರ ಸಂಖ್ಯೆಯಲ್ಲಿ ಸ್ತಿçÃಯರು ಹಾಗೂ ಮಕ್ಕಳು ದೀಪ ಹಿಡಿದು ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ಸಭಾಂಗಣಕ್ಕೆ ಸಾಗಿ ದೀಪ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಶರಣ್ ಸ್ವಾಗತಿಸಿ, ಬಿಂದು ನಿರೂಪಿಸಿ, ಪದ್ಮನಾಭ ವಂದಿಸಿದರು.

ಜಾಗರಣೆಯ ಅಂಗವಾಗಿ ಭಕ್ತಾದಿಗಳಿಗೆ ಅನ್ನದಾನ ಹಾಗೂ ವ್ರತ ಆಚರಿಸುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರನ್ನು ರಂಜಿಸಿತು