ಸೋಮವಾರಪೇಟೆ, ಮಾ. ೧೬: ಇಲ್ಲಿನ ಶಾಲಾ ರಸ್ತೆಯಲ್ಲಿರುವ ಅರಳಿ ಮರದ ಶ್ರೀ ಮುನೇಶ್ವರ ದೇವಾಲಯದಲ್ಲಿ ಮೂರನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ೧ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ವಿಕಲಚೇತನರಾದ ಸಂಗಮೇಶ್ ಅವರನ್ನು ಸನ್ಮಾನಿಸ ಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ, ಕಾರ್ಯಕ್ರಮ ಆಯೋಜಕರಾದ ಕೃಷ್ಣಮೂರ್ತಿ, ಬಲರಾಮ್ ಸೇರಿದಂತೆ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.