ವಿಜೇತರ ವಿವರ
ಮಡಿಕೇರಿ, ಮಾ. ೧೬: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಜನರಲ್ ತಿಮ್ಮಯ್ಯ ಅವರ ೧೧೫ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಬಹಳಷ್ಟು ಮಂದಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಬAಧ ಸ್ಫರ್ಧೆಯ ತೀರ್ಪುಗಾರರಾಗಿ ಕಸ್ತೂರಿ ಗೋವಿಂದಮ್ಮಯ್ಯ ಹಾಗೂ ಚಿತ್ರಕಲೆಯ ತೀರ್ಪುಗಾರರಾಗಿ ಐಮಂಡ ರೂಪೇಶ್ ಮತ್ತು ಪ್ರಸನ್ನ ಕುಮಾರ್ ಇವರುಗಳು ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿವೆ.
ಪ್ರಬAಧ ಸ್ಪರ್ಧೆ ವಿಜೇತರು
ಬಿದ್ದಪ್ಪ ಕೆ.ಟಿ, ಶ್ರೀ ರಾಜರಾಜೇಶ್ವರಿ ಶಾಲೆ, ಚೇರಂಬಾಣೆ, ಪ್ರಥಮ ಬಹುಮಾನ, ತಾನ್ವಿ ಉತ್ತಪ್ಪ ಕೆ. ಕಾಲ್ಸ್ ಗೋಣಿಕೊಪ್ಪ, ದ್ವಿತೀಯ ಬಹುಮಾನ, ಲಿಪಿಕಾ ಬೋಪಣ್ಣ, ಶ್ರೀ ರಾಜೇಶ್ವರಿ ಶಾಲೆ, ಚೇರಂಬಾಣೆ, ತೃತೀಯ ಬಹುಮಾನ.
ಚಿತ್ರಕಲೆ ಸ್ಪರ್ಧೆ ವಿಜೇತರು
ಶ್ರೇಯಾ ಮರಿಯಾ ಅಂತೋಣಿ, ಸಂತ ಅಂತೋಣಿ ಪ್ರೌಢಶಾಲೆ, ವೀರಾಜಪೇಟೆ, ಪ್ರಥಮ ಬಹುಮಾನ, ಮಿಥಿಲಾ ಟಿ.ಎಂ., ಸಂತ ಜೋಸೆಫರ ಶಾಲೆ ಮಡಿಕೇರಿ, ದ್ವಿತೀಯ ಬಹುಮಾನ, ಪ್ರಣವ್ ಆರ್. ಆಚಾರ್ಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಡಿಕೇರಿ, ತೃತೀಯ ಬಹುಮಾನ, ವಂದನಾ ಎಂ.ಎA., ಶ್ರೀ ಕೃಷ್ಣ ವಿದ್ಯಾ ಮಂದಿರ, ಸಿದ್ದಾಪುರ ಸಮಾಧಾನಕರ ಬಹುಮಾನ, ಸಿಂಚನಾ ಕೆ., ಸೆಂಟ್ ಆನ್ಸ್ ಹೈಸ್ಕೂಲ್, ವೀರಾಜಪೇಟೆ, ಸಮಾಧಾನಕರ ಬಹುಮಾನ, ಮನಶ್ರೀ ಎನ್.ಟಿ., ಓಎಲ್ವಿ ಕಾನ್ವೆಂಟ್ ಹೈಸ್ಕೂಲ್, ಸೋಮವಾರಪೇಟೆ, ಸಮಾಧಾನಕರ ಬಹುಮಾನ ಲಭಿಸಿದೆ. ವಿದ್ಯಾರ್ಥಿಗಳು ಜನರಲ್ ತಿಮ್ಮಯ್ಯನವರ ೧೧೫ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನವನ್ನು ಪಡೆದುಕೊಳ್ಳಬಹುದು ಎಂದು ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.