ಮಡಿಕೇರಿ, ಮಾ. ೧೫: ಪೊನ್ನಂಪೇಟೆ ಸಮೀಪದ ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕ ಉತ್ಸವದ ಪ್ರಯುಕ್ತ ತಾ. ೨೭ ರಂದು ಸಾಯಂಕಾಲ ೭ ಗಂಟೆಗೆ ದೇವರ ಕೊಡಿಮರ ನಿಲ್ಲಿಸುವುದು, ತಾ. ೩೧ ರಂದು ವಾರ್ಷಿಕ ಹಬ್ಬ ನಡೆಯಲಿರುವ ಪ್ರಯುಕ್ತ ಮಧ್ಯಾಹ್ನ ೧೨ ಗಂಟೆವರೆಗೆ ಪೂಜಾ ಕಾರ್ಯ, ಅಪರಾಹ್ನ ೩.೩೦ ಗಂಟೆಗೆ ದೇವರು ಹೊರ ಬರುವುದು, ದೇವರ ನೃತ್ಯ, ಭಂಡಾರ ಸೇರಿದಂತೆ ವಿವಿದ ಪೂಜಾ ಕಾರ್ಯಗಳು ನಡೆಯಲಿವೆ.