ಮಡಿಕೇರಿ, ಮಾ. ೧೫: ಮಡಿಕೇರಿ ನಗರದ ಬ್ಲಾಕ್ ನಂ. ೧೪ರ ಡೈರಿ ಫಾರಂ ಬಳಿ (ಅಗ್ನಿಶಾಮಕ ದಳ ಕಚೇರಿ ಸಮೀಪ) ಸುಮಾರು ಹತ್ತುಮನೆಗಳ ಮುಂಭಾಗದಲ್ಲಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಚರಂಡಿ ನಿರ್ಮಿಸುವಂತೆ ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಡೀರಾ ಸದಾ ಮುದ್ದಪ್ಪ ಅವರ ನೇತೃತ್ವದಲ್ಲಿ ನಗರ ಸಭಾ ಆಯುಕ್ತ ರಾಮ್ ದಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದ ಪರವಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ, ಸುಮಾರು ೧೦೦ ಮೀಟರ್ ನಷ್ಟು ರಸ್ತೆ ಇದ್ದು ಈಗಾಗಲೇ ೮೦ ಮೀಟರ್ ಚರಂಡಿ ನಿರ್ಮಾಣ ಆಗಿದ್ದು, ಉಳಿದ ೨೦ ಮೀಟರ್ನಲ್ಲಿ ಚರಂಡಿ ನಿರ್ಮಾಣ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಕೋರಿದರು. ಸಮಸ್ಯೆ ಆಲಿಸಿದ ಆಯುಕ್ತರು ತಕ್ಷಣವೇ ಇಂಜಿನಿಯರ್ ಅವರನ್ನು ಕರೆಸಿ ಸ್ಥಳ ಪರಿಶೀಲನೆಗೆ ಆದೇಶಿಸಿದರು. ಜಿಲ್ಲಾ ಕಾಂಗ್ರೆಸ್ ಸದಸ್ಯ ಪುಷ್ಪ ಪೂಣಚ್ಚ, ಎಸ್ಸಿ ಘಟಕದ ನಗರಾಧ್ಯಕ್ಷ ಮುದ್ದುರಾಜ್, ಬೊಳ್ಳಿಯಂಡ ಗಣೇಶ್, ಎಂ.ಎA. ಹನೀಫ್ ನಿಯೋಗದೊಂದಿಗೆ ತೆರಳಿದ್ದರು.