ಮಡಿಕೇರಿ, ಮಾ. ೧೫: ಮಡಿಕೇರಿ ಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಇರುವ ಶೆಟ್ಟಿ ಸ್ವೀಟ್ಸ್ ಅಂಡ್ ಬೇಕರಿ ಮಾಲೀಕ ಕೃಷ್ಣ ಶೆಟ್ಟಿ (೬೨) ಇಂದು ಮಧ್ಯಾಹ್ನ ತಾವು ಕಟ್ಟಿಸುತ್ತಿದ್ದ ಹೊಸ ಮನೆಯ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಹಲವಾರು ವರ್ಷಗಳಿಂದ ಅವರು ಬೇಕರಿ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.