ಕೂಡಿಗೆ, ಮಾ. ೧೫: ಕುಶಾಲನಗರದಿಂದ ೩ ಕಿಲೋಮೀಟರ್ ದೂರದಲ್ಲಿರುವ ಕುಶಾಲನಗರ ಸರಕಾರಿ ಪ.ಪೂ. ಕಾಲೇಜಿಗೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆಗಳು ಅಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ-ಹಾರಂಗಿ ಮಾರ್ಗವಾಗಿ ಸರಕಾರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮಡಿಕೇರಿ ಘಟಕದ ವ್ಯವಸ್ಥಾಪಕರಿಗೆ ಕಾಲೇಜು ವಿದ್ಯಾರ್ಥಿಗಳಿಂದ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿ ಸೌಮ್ಯ, ಸಾಗರ ಸೇರಿದಂತೆ ಇತರರು ಹಾಜರಿದ್ದರು.