ಸುಂಟಿಕೊಪ್ಪ, ಮಾ. ೧೨: ಶ್ರೀಕೊಡಂಗಲ್ಲೂರು ಭದ್ರಕಾಳಿ ಶ್ರೀಕುರುಂಭ (ಭಗವತಿ) ದೇವಸ್ಥಾನದ ವಾರ್ಷಿಕ ಪೂಜೆಯ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷಪೂಜಾ ಕೈಂಕರ್ಯಗಳು ತಾ. ೧೪ರಂದು ಮತ್ತು ತಾ. ೧೫ರಂದು ನಡೆಯಲಿದೆ.

ಕಳೆದ ೫೫ ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀಕುರುಂಭ(ಭಗವತಿ) ದೇವಸ್ಥಾನದ ವಾರ್ಷಿಕ ಮಹಾಪೂಜೆ ಅಂಗವಾಗಿ ತಾ.೧೪ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ಸಂಜೆ ೬ ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, ೬.೪೫ ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಪೂಜೆ, ೭ ಗಂಟೆಗೆ ಗುಳಿಗನಿಗೆ ಪೂಜೆ, ೭.೧೫ ಗಂಟೆಗೆ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, ದೇವಿಯ ದರ್ಶನ, ತಾಲಪುರಿ ಮೆರವಣಿಗೆ, ೮.೩೦ ರಿಂದ ೧೦.೩೦ ರವರೆಗೆ ವಸೂರಿ ಮಾಲೆ, ದೇವಿ ದರ್ಶನ ಹಾಗೂ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.

ಸೋಮವಾರ ಬೆಳಿಗ್ಗೆ ೯ ಗಂಟೆಗೆ ಹರಕೆ, ೧೦ ರಿಂದ ೧೧ ರವರೆಗೆ ದೇವಿಗೆ ಹರಕೆ ಅರ್ಪಣೆ ಹಾಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಪಿ.ಆರ್.ಸುಕುಮಾರ್, ಪಿ.ಆರ್. ಸುನಿಲ್‌ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.