ವೀರಾಜಪೇಟೆ, ಮಾ. ೧೨ : ಅಕ್ರಮವಾಗಿ ಕೇರಳ ರಾಜ್ಯದಿಂದ ಲಾಟರಿ ಟಿಕೆಟ್‌ಗಳನ್ನು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತಿದ್ದ ವ್ಯಕ್ತಿಯೋರ್ವ ಬಂಧನವಾದ ಘಟನೆ ವೀರಾಜಪೇಟೆ ಆರ್ಜಿ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಹಳೆ ಸಿದ್ದಾಪುರ ಗ್ರಾಮದ ಸಾಧಿಕ್ (೩೨) ಅಕ್ರಮವಾಗಿ ಲಾಟರಿ ಮಾರಾಟ ಮಾಡಿ ಬಂಧನವಾದ ವ್ಯಕ್ತಿ. ಕೇರಳ ರಾಜ್ಯದ ಇರಿಟ್ಟಿ ಎಂಬಲ್ಲಿ ಲಾಟರಿ ಟಿಕೆಟುಗಳನ್ನು ಖರೀದಿಸಿ ಇರಿಟ್ಟಿಯಿಂದ ಮಾಕುಟ್ಟ ಮಾರ್ಗವಾಗಿ ಆರೋಪಿಯು ಕೃತ್ಯಕ್ಕೆ ಬಳಸಿದ ಹೊಂಡ ಅಕ್ಟಿವ ಸ್ಕೂಟರ್ ವಾಹನ ಸಂಖ್ಯೆ ಕೆಎ-೧೨ ಎಸ್-೪೭೪೪ ರಲ್ಲಿ ನಗರಕ್ಕೆ ಆಗಮಿಸುತಿದ್ದ ವೇಳೆಯಲ್ಲಿ ವೀರಾಜಪೇಟೆ ನಗರದ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ ಅವರಿಗೆ ಬಂದ ಮಾಹಿತಿ ಮೇರೆಗೆ ನಗರದ ಹೊರವಲಯ ಆರ್ಜಿ ಸೇತುವೆ ಬಳಿ ತಾ. ೧೦ರ ರಾತ್ರಿ ೮.೩೦ ಕ್ಕೆ ಸ್ಥಳಕ್ಕೆ ಆಗಮಿಸಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಚೀಲದಲ್ಲಿ ಇರಿಸಲಾಗಿದ್ದ ರೂ. ೨೩,೦೦೦ ಮೌಲ್ಯದ ರೂ. ೪೦ ಮುಖ ಬೆಲೆಯ ೫೭೫ ಟಿಕೆಟ್‌ಗಳಿರುವುದು ಗೊಚರಿಸಿದೆ. ಕೃತ್ಯಕೆ ಬಳಸಿದ್ದ ವಾಹನ ಮತ್ತು ಲಾಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನ ಮೇಲೆ ಕರ್ನಾಟಕ ರಾಜ್ಯ ಲಾಟರಿ ನಿಷೇದ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶ್ರೀಧರ್ ಅವರ ನಿರ್ದೇಶನದಲ್ಲಿ ವೀರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕ ಹೆಚ್.ಎಸ್. ಬೋಜಪ್ಪ, ಸಿಬ್ಬಂದಿಗಳಾದ ಸತೀಶ್, ಮೋಹನ್, ಮಧು. ಮುಸ್ತಫಾ, ಗಿರೀಶ್, ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
- ಕೆ.ಕೆ.ಎಸ್.