ಬೆಂಗಳೂರು, ಮಾ. ೧೩ : ರಾಜ್ಯದ ರೈತರು ಸಹಕಾರ ಸಂಘ, ಸಹಕಾರ ಬ್ಯಾಂಕ್ಗಳಿAದ ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ ೧೦-೦೭-೨೦೧೮ಕ್ಕೆ ಹೊಂದಿರುವ ಹೊರಬಾಕಿಯ ಗರಿಷ್ಠ ೧ ಲಕ್ಷದವರೆಗಿನ ಸಾಲ ಮನ್ನಾದ ಹಣ ಬಿಡುಗಡೆ ಮಾಡಿ ಆದೇಶಿಸಿದೆ.ಈ ಕುರಿತಂತೆ ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾಉಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ೧ ಲಕ್ಷಗಳ ಸಾಲ ಮನ್ನಾ ಯೋಜನೆಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಶದಿಂದ ೬೫,೫೪೩ ರೈತರಿಗೆ ಸಂಬAಧಿಸಿದAತೆ ರೂ.೩೫೦.೧೬ ಕೋಟಿಗಳ ಹಸಿರು ಪಟ್ಟಿ ನೀಡಿದ್ದು, ಅದರ ಪಟ್ಟಿಯನ್ನು ಎಕ್ಸ್ಲ್ ಶೀಟ್ನಲ್ಲಿ ಈಗಾಗಲೇ ನೀಡಿದ್ದು, ಇದರಲ್ಲಿ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿದ್ದ ರೂ.೫೫.೦೧ ಕೋಟಿಗಳ ಮೊತ್ತವನ್ನು ಗಡುವು ದಿನಾಂಕದ ಆಧಾರವಾಗಿ ನಷ್ಟ ಮೂಲಕ ಅನುದಾನ ಬಿಡುಗಡೆ ಮಾಡಲು ಉಲ್ಲೇಖ ೨ರಲ್ಲಿ ೮,೩೧೩ ರೈತರ ಪಟ್ಟಿ ನೀಡಲಾಗಿತ್ತು.
ಉಲ್ಲೇಖ-೩ರಲ್ಲಿ ಸರ್ಕಾರ ಬಾಕಿ ಇರುವ ೫೭,೨೨೯ ರೈತರಿಗೆ ಅನುದಾನ ಬಿಡುಗಡೆ ಮಾಡಲು ಅಯವ್ಯಯದಲ್ಲಿ ಲಭ್ಯವಿದ್ದು, ರೂ.೨೬೦.೪೧ ಕೋಟಿಗಳನ್ನು ಬಿಡುಗಡೆ ಮಾಡಿ, ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ ರೂ.೩೪.೭೩ ಕೋಟಿಗಳನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ್ದು, ಒಟ್ಟಾರೆ ರೂ.೨೯೫.೧೪ಲಕ್ಷಗಳನ್ನು ಬಿಡುಗಡೆ ಮಾಡಿ ಸಾಲ ಮನ್ನಾ ಯೋಜನೆಯನ್ನು ಇದೇ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಲು ಸೂಚಿಸಲಾಗಿದೆ.ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರ ಅಯವ್ಯಯದ ಅವಕಾಶದಲ್ಲಿ ಸದ್ಯ ಬಿಡುಗಡೆ ಮಾಡಿರುವ ರೂ.೨೬೦.೪೧ ಕೋಟಿಗಳ ಜೊತೆಯಲ್ಲಿ ರೂ.೧ ಲಕ್ಷಗಳ ಸಾಲ ಮನ್ನಾ ಯೋಜನೆಯಲ್ಲಿ ಜಮಾ ಆಗಿರುವ ಬಡ್ಡಿ ಮತ್ತು ಸಹಕಾರ ಸಂಘಗಳು ಪಾವತಿಸಿರುವ ಮೊತ್ತ ರೂ.೨೩.೭೮ ಕೋಟಿ ಮತ್ತು ರೂ.೫೦,೦೦೦ಗಳ ಸಾಲ ಮನ್ನಾ ಯೋಜನೆಯಲ್ಲಿ ಸಹಕಾರ ಸಂಘಗಳು ವಾಪಸ್ ಜಮಾ ನೀಡಿ, ಠೇವಣಿ ಇರಿಸಿದ್ದ ಮೊತ್ತ ರೂ.೧೦.೯೫ ಕೋಟಿಗಳನ್ನು ಅವಧಿ ಪೂರ್ಣ ಪಕ್ವಗೊಳಿಸಿ, ೫೭,೨೨೯ ರೈತರ ಉಳಿತಾಯ ಖಾತೆಗಳಿಗೆ ರೂ.೨೯೫.೧೪ ಕೋಟಿಗಳನ್ನು ನೆಫ್ಟ್ ಮೂಲಕ ಕೂಡಲೇ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಅಪೆಕ್ಸ್ ಬ್ಯಾಂಕಿನಲ್ಲಿ ಸಾಲ ಮನ್ನಾ ಯೋಜನೆಯಲ್ಲಿ ಉಳಿಯುವ ಮೊತ್ತವನ್ನು ಬಡ್ಡಿಯೊಂದಿಗೆ ೧೫ ದಿನಗಳ ಅವಧಿಗೆ ಠೇವಣಿ ಮಾಡಿ, ಈ ಕಚೇರಿಯ ಆದೇಶದವರೆಗೆ ನವೀಕರಿಸಲು ಸೂಚಿಸಲಾಗಿದೆ.