
ಗೋಣಿಕೊಪ್ಪಲು, ಮಾ.೧೩: ಅರಣ್ಯವನ್ನೇ ನಂಬಿ, ಕಾಡು ಮರಗಳನ್ನು ದೇವರೆಂದು ಭಕ್ತಿ ಭಾವದಿಂದ ಪೂಜಿಸುತ್ತಿದ್ದ ಅರಣ್ಯವಾಸಿಗಳು ಇದೀಗ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಲು ವೇದಿಕೆ ಸಿದ್ಧಪಡಿಸಿದ್ದಾರೆ. ಸಾವಿರಾರು ಸಂಖ್ಯೆಯ ಕಾಡಿನ ಜನರು ಸಂವಿಧಾ ನಾತ್ಮಕವಾಗಿ, ಕಾನೂನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಟ ರೂಪಿಸಿ ಇದಕ್ಕೆ ಜಮ್ಮ - ಪಾಳೆ ಎಂಬ ಹೆಸರನ್ನಿಟ್ಟು ಆಹೋರಾತ್ರಿ ಚಳುವಳಿಗೆ ನಿರ್ಧರಿಸಿದ್ದಾರೆ. ರಾಷ್ಟಿçÃಯ ಉದ್ಯಾನವನ ನಾಗರ ಹೊಳೆಯ ಅರಣ್ಯ ಕಚೇರಿಯ ಸಮೀಪವಿರುವ ವಿಶಾಲವಾದ ಮರಗಳ ನೆರಳಿನಲ್ಲಿ ತಮ್ಮ ಹಕ್ಕನ್ನು ಪಡೆದೇ ತೀರುವ ನಿಟ್ಟಿನಲ್ಲಿ ಹೋರಾಟವನ್ನು ಮಾರ್ಚ್ ೧೭ರ ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಂಡಿದ್ದಾರೆ.ಈ ಹೋರಾಟಕ್ಕೆ ಈಗಾಗಲೇ ಹಲವು ಸಿದ್ಧತೆಗಳನ್ನು ನಡೆಸಿರುವ ಆದಿವಾಸಿಗಳು ರಾಜ್ಯ ಮೂಲ ನಿವಾಸಿಗಳ ವೇದಿಕೆಯ ಉಪಾಧ್ಯಕ್ಷ ಜೆ.ಕೆ.ತಿಮ್ಮ ಮುಂದಾಳತ್ವದಲ್ಲಿ ಆದಿವಾಸಿಗಳು ವಾಸವಿರುವ ಹಾಡಿಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಆಹ್ವಾನ ನೀಡಿದ್ದಾರೆ. ಈಗಾಗಲೇ ಅರಣ್ಯ ಹಕ್ಕು ಮಸೂದೆ ಜಾರಿಯಲ್ಲಿನ ವಿಳಂಬ ನೀತಿಯ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಮುಖ್ಯ ಸಂರಕ್ಷಣಾಧಿಕಾರಿಗಳು ಅನುಸೂಚಿತ ಬುಡಕಟ್ಟು ಆಯೋಗದ ನಿರ್ದೇಶಕರು ಹಾಗೂ ಇತರ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ಹೋರಾಟದ ರೂಪು ರೇಷೆಗಳನ್ನು ವಿವರಿಸಿದ್ದಾರೆ.ನಾಲ್ಕೇರಿ,ಕೆ.ಬಾಡಗ, ನಿಟ್ಟೂರು, ದೇವರಪುರ, ಕಾನೂರು ಹಾಗೂ ತಿತಿಮತಿ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ, ಗದ್ದೆಹಾಡಿ, ಸಿದ್ದಾಪುರ, ಬಾಳೆಕೋವು, ನಾಣಚ್ಚಿ ಗದ್ದೆಹಾಡಿ, ಕರಡಿಕಲ್ಲು, ಅತ್ತೂರು ಕೊಲ್ಲಿಯಾಡಿ, ಚಂದನಕೆರೆ, ಗೋಣಿಗದ್ದೆ, ಬೊಮ್ಮಾಡು, ಕೊಡಂಗೆ, ಬ್ರಹ್ಮಗಿರಿ, ದಾಳಿಂಬೆ ಕೊಲ್ಲಿ ಹಾಡಿ, ಕೋಳಂಗೇರೆ, ತಟ್ಟೆಕೆರೆ, ಕುಂಬಾರಕಟ್ಟೆ, ಆಯೀರ ಸುಳಿ, ಚೇಣಿಹಡ್ಲು, ಮರಪಾಲ, ಜಂಗಲ್ ಹಾಡಿ, ಮಜ್ಜಿಗೆ ಹಳ್ಳ, ಆನೆ ಕ್ಯಾಂಪ್, ಕಾರೇಕಂಡಿ, ಬೊಮ್ಮಾಡು ಸೇರಿದಂತೆ ಇನ್ನಿತರ ಹಾಡಿಗಳಲ್ಲಿ ತಲತಲಾಂತರಗಳಿAದ ನೆಲೆಸಿರುವ ಆದಿವಾಸಿಗಳು ತಮ್ಮ ಸಾಂಸ್ಕೃತಿಕ ಉಡುಗೆ ತೊಡುಗೆಯಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಪಾಲ್ಗೊಳ್ಳುವ ಮೂಲಕ ಐತಿಹಾಸಿಕ ಹೋರಾಟದಿಂದ ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಭಾಗವಹಿಸಲಿದ್ದಾರೆ.
ಪೂರ್ವಭಾವಿ ಸಭೆ: ಈ ಬಗ್ಗೆ ಹಾಡಿಯ ಮುಖಂಡರುಗಳು ನಾಗರಹೊಳೆಯ ಹಾಡಿಯಲ್ಲಿ ಪ್ರಕೃತಿಯ ಮಡಿಲಿನಲ್ಲಿ ಪೂರ್ವಭಾವಿ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಒಳಗೆ, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನಾಂಗದ ಜೇನುಕುರುಬ, ಬೆಟ್ಟ ಕುರುಬ, ಯರವ ಮುಂತಾದ ಬುಡಕಟ್ಟು ಜನಾಂಗದವರು ತಲ ತಲಾಂತರಗಳಿAದ ಪಾರಂಪಾರಿಕವಾಗಿ ತಮ್ಮ ವಾಸದ ಕಾಡಿನಲ್ಲಿ ತಮ್ಮದೇ ಆದ ಭಾಷೆ, ಉಡುಗೆ ತೊಡುಗೆ ಸಾಂಪ್ರದಾಯಿಕ ಪದ್ಧತಿ, ಸಂಸ್ಕೃತಿ, ಸಾಂಪ್ರದಾಯಿಕ ಕೆತ್ತನೆ, ಬಿತ್ತನೆ ರೂಪದಲ್ಲಿ ಭತ್ತ,
(ಮೊದಲ ಪುಟದಿಂದ) ರಾಗಿ, ಜೋಳ, ಗೆಡ್ಡೆಗೆಣಸು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ‘ಕುಮುರಿ’ ಬೇಸಾಯದ ಕೃಷಿ ಪದ್ಧತಿಯಲ್ಲಿ ಕಾಡಿನಲ್ಲಿ ನೈಸರ್ಗಿಕವಾಗಿ ಸಿಗುವ ಕಿರು ಅರಣ್ಯ ಉತ್ಪನ್ನಗಳಾದ ಜೇನು, ಮರದ ಪಾಚಿ, ನೆಲ್ಲಿಕಾಯಿ, ಸೀಗೆಕಾಯಿ, ಅಂಟುವಾಳಕಾಯಿ, ಗೆಡ್ಡೆ ಗೆಣಸುಗಳು, ಸೊಪ್ಪುಗಳು, ನಾರುಬೇರುಗಳು, ಗಿಡಮೂಲಿಕೆ ಔಷಧಿ ಸಸ್ಯಗಳು ಮತ್ತು ಅನೇಕ ರೀತಿಯ ಕಿರು ಅರಣ್ಯ ಉತ್ಪನ್ನಗಳನ್ನು ಬಳಕೆ ಮಾಡುತ್ತ, ಸಂರಕ್ಷಿಸುತ್ತ, ಪೋಷಿಸುತ್ತಿದ್ದಾರೆ.
ನಿಯಮಗಳಂತೆ ಹಕ್ಕು ನೀಡಲು ೨೦೦೯ರಿಂದ ಆದಿವಾಸಿ ಬುಡಕಟ್ಟು ಸಮುದಾಯಗಳು ನಿಗಧಿತ ನಮೂನೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರೂ ಸರ್ಕಾರದ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ. ಕೇವಲ ವಾಸಕ್ಕಾಗಿ ಹಕ್ಕು ಪತ್ರ ನೀಡಿ ಕಾನೂನನ್ನು ಉಲ್ಲಂಘಿಸಿದ್ದಾರೆ. ವೈಯಕ್ತಿಕ ಹಕ್ಕಿನಲ್ಲಿ ಬೇಸಾಯಕ್ಕಾಗಿ ಭೂಮಿ ನೀಡಿಲ್ಲ.ನಮೂನೆ ‘ಬಿ’ಯಲ್ಲಿ ಸಮುದಾಯದ ಹಕ್ಕಿಗಾಗಿ, ೨೦೦೯ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಇಲ್ಲಿಯವರೆಗೆ ಪರಿಶೀಲನೆ ನಡೆಸಿ ಹಕ್ಕು ಪತ್ರ ನೀಡಿಲ್ಲ. ನಮೂನೆ ’ಸಿ’ಯಲ್ಲಿ ಸಮುದಾಯದ ಸಂಪನ್ಮೂಲದ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳಿಗೆ ಇನ್ನು ಹಕ್ಕು ಪತ್ರ ಲಭಿಸಿಲ್ಲ. ಕಾನೂನಿನಲ್ಲಿ ಕಾಲಾವಕಾಶವನ್ನು ರೂಪಿಸಿದ್ದರೂ. ಈ ಬಗ್ಗೆ ಕಾನೂನನ್ನೇ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆದಿವಾಸಿಗಳು ಆಕ್ಷೇಪಿಸಿದ್ದಾರೆ.
ಆದಿವಾಸಿ ಬುಡಕಟ್ಟುಗಳು ವಾಸಿಸುವ ಕಾಡುಗಳಲ್ಲಿ ಸಾಂಪ್ರದಾಯಿಕ ಆರಾಧನಾ ಸ್ಥಳಗಳು, ಸ್ಮಶಾನ, ಕಿರು ಅರಣ್ಯ ಉತ್ಪನ್ನದ ಕಾಡುಗಳು ಆಗಿರುವುದರಿಂದ ನಾಗರಹೊಳೆ ಕಾಡನ್ನು ೫ನೇ ಮತ್ತು ೬ನೇ ಅನುಸೂಚಿತ ಬುಡಕಟ್ಟು ಪ್ರದೇಶ ಎಂದು ಘೋಷಿಸಿ ೨೦೦೬ರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಹಕ್ಕುಗಳನ್ನು ನಿಯಮಗಳಂತೆ ನೀಡಬೇಕು. ಡಾ. ಮುಜಾಫರ್ ಅಸ್ಸಾದಿ ವರದಿ ೨೦೧೪ರ ಶಿಫಾರಸ್ಸನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂಬ ಉದ್ದೇಶದಿಂದ ಜಮ್ಮ - ಪಾಳೆ ಹೋರಾಟವನ್ನು ರೂಪಿಸಿದ್ದಾರೆ. ವಿವಿಧ ಹಾಡಿಯ ಮುಖಂಡರಾದ ಜೆ.ಎಂ.ಸೋಮಯ್ಯ, ಜೆ.ಎಂ.ರಮೇಶ್, ಜೆ.ಬಿ.ಮನು, ಜೆ.ಕೆ.ಕಾಳ,ಜೆ.ಆರ್.ಶಾಂತಿ, ಗೌರಿ, ಸೀತಾ ಸೇರಿದಂತೆ ಇನ್ನಿತರ ಮುಖಂಡರು ಸಭೆಯಲ್ಲಿ ದೀರ್ಘ ಚರ್ಚೆ ನಡೆಸಿದರು.
ಪಾರಂಪರಿಕ ಪದ್ಧತಿಗೆ ವ್ಯತಿರಿಕ್ತ ಪರಿಣಾಮ: ಅಜ್ಜಯ್ಯನ ಜಮ್ಮದ ಕಾಡು, ದೇವರ ಕಾಡು,ಕಿರು ಅರಣ್ಯ ಉತ್ಪನ್ನಗಳ ಕಾಡು,ಕುಮುರಿ ಬೇಸಾಯದ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಮರಗಳನ್ನು ನಾಗರಿಕ ಸಮಾಜದ ಅಭಿವೃದ್ಧಿ ಹೆಸರಿನಲ್ಲಿ ಆದಿವಾಸಿ ಬುಡಕಟ್ಟು ಜನರು ವಾಸಿಸುತ್ತಿದ್ದ ಕಾಡುಗಳಲ್ಲಿನ ನೈಸರ್ಗಿಕ ಮರಗಳನ್ನು ಮತ್ತು ಸಸ್ಯರಾಶಿ, ಪ್ರಾಣಿ ಸಂಕುಲ, ಪಕ್ಷಿರಾಶಿಗಳನ್ನು ಅರಣ್ಯದ ವಿವಿಧ ಯೋಜನೆಗಳು ಘೋಷಣೆಗಳಾದ ಮೀಸಲು ಅರಣ್ಯ, ಸೂಕ್ಷö್ಮ ಪರಿಸರ ತಾಣ ಮುಂತಾದ ಯೋಜನೆಗಳನ್ನು ರೂಪಿಸುವಾಗ ಬುಡಕಟ್ಟು ಸಮುದಾಯಗಳು ಕಾಡಿನಲ್ಲಿ ವಾಸಿಸುತ್ತಿದ್ದ ವೇಳೆ ಯಾವುದೇ ಮಾಹಿತಿಯನ್ನು ನೀಡದೆಅವರ ಪಾರಂಪಾರಿಕ ಪದ್ಧತಿಗೆ ವಿರುದ್ಧವಾಗಿ ಯೋಜನೆಗಳು ರೂಪಿಸಿರುವುದರಿಂದ ಕಾಡಿನಲ್ಲಿದ್ದ ಬುಡಕಟ್ಟು ಜನಾಂಗದವರಿಗೆ ವಿರುದ್ಧವಾಗಿ ಯೋಜನೆಗಳು ರೂಪುಗೊಂಡಿದೆ. ಪ್ರಕೃತಿಗೆ ವಿರುದ್ಧವಾದ ಸರ್ಕಾರಕ್ಕೆ ಆರ್ಥಿಕವಾಗಿ ಲಾಭವಾಗುವಂತಹ ತೇಗ, ನೀಲಗಿರಿ, ಅಕೇಶಿಯಾ ಮರಗಳನ್ನು ಬೆಳೆಸಿ ಆದಿವಾಸಿಗಳ ಬೇಸಾಯದ ಕಾಡಿನಲ್ಲಿ ನೆಡುತೋಪುಗಳಾಗಿ ಮರಗಳನ್ನು ಬೆಳೆಸಿದ್ದಾರೆ. ಇಂತಹ ಯೋಜನೆಗಳಿಂದ ಬುಡಕಟ್ಟುಗಳ ಪದ್ಧತಿ, ಅವರ ನೈಸರ್ಗಿಕವಾದ ಕಾಡುಗಳು ಕಣ್ಮರೆಯಾಗಿದೆ, ಇದರಿಂದಾಗಿ ಪರಿಸರದ ಹವಾಗುಣಗಳು ಬದಲಾಗುತ್ತಿವೆ. ಪ್ರಾಣಿ, ಪಕ್ಷಿಗಳು, ಸಸ್ಯ ರಾಶಿಗಳು ಹಿಂಸೆಗೆ ಒಳಗಾಗುತ್ತಿವೆ.
ಅರಣ್ಯ ಅಭಿವೃದ್ಧಿ ಯೋಜನೆಗಳಿಂದ, ಸಂಶೋಧನೆಗಳಿAದ, ಕಾಯ್ದೆಗಳಿಂದಾಗಿ ಆದಿವಾಸಿ ಬುಡಕಟ್ಟುಗಳ ವಾಸಸ್ಥಾನದ ಹಕ್ಕು ಮತ್ತು ಬೇಸಾಯದ ಹಕ್ಕು, ಸಮುದಾಯದ ಹಕ್ಕು,ಹಿಡುವಳಿಯ ಹಕ್ಕು, ಸಮುದಾಯದ ಸಂಪನ್ಮೂಲದ ಹಕ್ಕುಗಳನ್ನು ಗುರುತಿಸದೆ ಚಾರಿತ್ರಿಕವಾಗಿ ಅನ್ಯಾಯ ಉಂಟು ಮಾಡಿರುತ್ತೇವೆ ಎಂದು ಕೇಂದ್ರ ಸರ್ಕಾರವು ಒಪ್ಪಿಕೊಂಡು ಗಣರಾಜ್ಯ ೫೭ನೇ ಸಂಸತ್ತಿನಲ್ಲಿ ಆದಿವಾಸಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಹಕ್ಕು ನೀಡಲು “ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪಾರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯಮಾಡುವ ಅದಿನಿಯಮ ೨೦೦೬,(೨೦೦೭ರ೨) ನಿಯಮಗಳು ೨೦೦೮ರ ನಿಯಮಗಳ ತಿದ್ದುಪಡಿ ೨೦೧೨ರ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.