ಬೇಂಗ್ನಾಡ್ ಫೀನಿಕ್ಸ್ ಹಾಕಿ ಕಪ್ : ಇಂದು ಫೈನಲ್
ಮಡಿಕೇರಿ, ಮಾ.೧೩ : ಚೇರಂಬಾಣೆಯ ಬೇಂಗ್ ನಾಡ್ ಫೀನಿಕ್ಸ್ ಕ್ಲಬ್ ವತಿಯಿಂದ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬೇಂಗ್ನಾಡ್ ಫೀನಿಕ್ಸ್ ಹಾಕಿ ಕಪ್-೨೦೨೧ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಶಿವಾಜಿ ತಂಡ ಹಾಗೂ ಡಾಲ್ಫಿನ್ಸ್ ತಂಡ ಫೈನಲ್ ಪ್ರವೇಶಿಸಿದೆ.
ಇಂದು ನಡೆದ ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ಶಿವಾಜಿ ತಂಡ ಹಾಗೂ ಬ್ಲೂ ಸ್ಟಾರ್ ಪೊದ್ದಿಮನಿ ನಡುವೆ ಪೈಪೋಟಿ ಏರ್ಪಟ್ಟು ಶಿವಾಜಿ ತಂಡ ಟೈ ಬ್ರೇಕರ್ ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಮಧ್ಯಾಹ್ನ ನಾಲಡಿ ಹಾಗೂ ಡಾಲ್ಫಿನ್ಸ್ ನಡುವೆ ಪಂದ್ಯ ನಡೆದು ೨ ಗೋಲುಗಳಿಂದ ಡಾಲ್ಫಿನ್ಸ್ ತಂಡ ಜಯಗಳಿಸಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಚೇರಂಬಾಣೆಯ ಸ್ಕೂಲ್ ಸೈಡ್ ಕ್ಲಬ್ನ ಸದಸ್ಯರನ್ನು ಬೇಂಗ್ ನಾಡ್ ಫೀನಿಕ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ತಾ.೧೪ ರಂದು (ಇಂದು) ಬೆಳಗ್ಗೆ ೧೧ ಗಂಟೆಗೆ ಶಿವಾಜಿ ತಂಡ ಹಾಗೂ ಡಾಲ್ಫಿನ್ಸ್ ತಂಡದ ನಡುವೆ ಫೈನಲ್ ಪಂದ್ಯಾವಳಿ ನಡೆಯಲಿದೆ. ವಿಜೇತ ತಂಡಕ್ಕೆ ರೂ.೨೯,೯೯೯ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ೧೯,೯೯೯ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಬೇಂಗ್ ನಾಡ್ ಫೀನಿಕ್ಸ್ ಕ್ಲಬ್ ನ ಅಧ್ಯಕ್ಷ ಬಡ್ಡಿರ ಸೋಮಣ್ಣ ತಿಳಿಸಿದ್ದಾರೆ.
ಗೆಲುವಿಗಾಗಿ ಉಪವಾಸ
ಕುಶಾಲನಗರ, ಮಾ.೧೩: ಕ್ರಿಕೆಟ್ ಅಭಿಮಾನಿ ಓರ್ವ ತನ್ನ ನೆಚ್ಚಿನ ತಂಡದ ಗೆಲುವಿಗಾಗಿ ಆಟದ ಮೈದಾನದಲ್ಲಿ ಪಂದ್ಯಾಟ ಮುಗಿಯುವ ತನಕ ಉಪವಾಸ ಸತ್ಯಾಗ್ರಹ ಮಾಡಿದ ಘಟನೆ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ಕಾವೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಮ್ಮಿಕೊಳ್ಳಲಾಗಿದ್ದು, ತನ್ನ ನೆಚ್ಚಿನ ತಂಡ ಗೆಲುವು ಸಾಧಿಸಲೆಂದು ಇಲ್ಲಿನ ಯುವಕ ಮಹದೇವ್ ಎಂಬಾತ ಬೆಳಗ್ಗಿನಿಂದ ಪಂದ್ಯ ಮುಗಿವ ತನಕ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದಾನೆ.
ಪ್ರಥಮ ಪಂದ್ಯಾಟದಲ್ಲಿ ಆತನ ಬೆಂಬಲಿತ ‘ಸೆನ್ಸಾ’ ತಂಡ ಗೆಲುವು ಸಾಧಿಸಿದೆ. ಫೈನಲ್ನಲ್ಲಿ ತನ್ನ ನೆಚ್ಚಿನ ತಂಡ ಗೆಲುವು ಸಾಧಿಸಿದಲ್ಲಿ ಕುಶಾಲನಗರದಿಂದ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಪಾದಯಾತ್ರೆ ತೆರಳುವುದಾಗಿ ಮಹದೇವ ತಿಳಿಸಿದ್ದಾರೆ.ಸೋಮವಾರಪೇಟೆ, ಮಾ. ೧೩: ಸಮೀಪದ ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಕಾಲೇಜು ಪ್ರಾಂಶುಪಾಲ ಹೆಚ್.ಎನ್. ರಾಜು ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ಗಳನ್ನು ಆಯೋಜಿಸುವುದರಿಂದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಅನುಕೂಲವಾಗುತ್ತದೆ. ಇದರೊಂದಿಗೆ ಕ್ರೀಡಾಪಟುಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಟಿ. ಚಂಗಪ್ಪ, ಪ್ರಮುಖರಾದ ಡಿ.ಎಂ. ಪುಪ್ಪಯ್ಯ, ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಟಿ. ಚಂಗಪ್ಪ, ಪ್ರಮುಖರಾದ ಡಿ.ಎಂ. ಪುಪ್ಪಯ್ಯ, ಕೂಡಿಗೆ, ಮಾ. ೧೩: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟಿçÃಯ ಹಾಕಿಗೆ ಆಯ್ಕೆಯಾಗಿದ್ದಾರೆ.
ಹಾಕಿ ಇಂಡಿಯಾ ನಡೆಸುತ್ತಿರುವ ಹನ್ನೊಂದನೇ ಸಬ್ ಜೂನಿಯರ್ ಬಾಲಕರ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಪಂದ್ಯಾವಳಿಯು ಹರಿಯಾಣದ ನರ್ವಾನದ ಕ್ರೀಡಾಂಗಣದಲ್ಲಿ ನಡೆಯಲ್ಲಿದೆ. ಹಾಕಿ ಕ್ರೀಡಾಕೂಟವು ತಾ. ೧೭ ರಿಂದ ೨೫ ರವರೆಗೆ ನಡೆಯಲಿದೆ. ಇದರಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಚೇತನ್, ಪವನ್, ರಿಷಿಕುಶಾಲಪ್ಪ, ತೇಜಸ್, ರೋಹಿತ್, ನಕುಲ್, ಪವನ್, ಕೇಚು, ಧ್ರುವ, ಹರ್ಷ ಆಯ್ಕೆಗೊಂಡು ಈಗಾಗಲೇ ನರ್ವಾನ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ತರಬೇತುದಾರರಾಗಿ ಕವಿ ಅರಸನ್ ಮತ್ತು ವ್ಯವಸ್ಥಾಪಕರಾಗಿ ರಾಮಚಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಹಾಕಿ ತರಬೇತಿಯನ್ನು ಕೂಡಿಗೆ ಹಾಕಿ ತರಬೇತಿದಾರ ವೆಂಕಟೇಶ ನೀಡಿದ್ದಾರೆ.
*ಗೋಣಿಕೊಪ್ಪಲು, ಮಾ. ೧೩: ಪದವಿ ಪೂರ್ವ ಕಾಲೇಜುಗಳ ನಡುವೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ತಂಡ ವಾಲಿಬಾಲ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್ ಮತ್ತು ಕಬ್ಬಡಿ ಪಂದ್ಯಾಟಗಳಲ್ಲಿ ಜಯ ಸಾಧಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ದೈಹಿಕ ಶಿಕ್ಷಕ ಸಂತೋಷ್ ಅವರು ತರಬೇತಿ ನೀಡಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ತಿಳಿಸಿದ್ದಾರೆ. ವೀರಾಜಪೇಟೆ, ಮಾ. ೧೩: ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡಾಕೂಟಗಳು ಗ್ರಾಮಸ್ಥರಿಗೆ ಉತ್ಸವದಂತೆ. ಭಾಗವಹಿಸುವ ಪ್ರತಿಯೊಬ್ಬರ ಭಾವನೆಗಳಲ್ಲಿ ನಮ್ಮತನ ಕಂಡು ಬರುತ್ತದೆ. ಎಂದು ತಾಲೂಕು ಪಂಚಾಯಿತಿಯ ಸದಸ್ಯರಾದ ಬಿ.ಎಂ.ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕು ಆರ್ಜಿ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದ ಯೂತ್ ಫ್ರೆಂಡ್ಸ್ ಪೆರುಂಬಾಡಿ ಸಂಸ್ಥೆಯ ಆಶ್ರಯದಲ್ಲಿ ಬಾಳುಗೋಡುವಿನ ಅಯ್ಯಪ್ಪ ಭಜನಾ ಮಂದಿರದ ಅವರಣದಲ್ಲಿ ನಡೆಯುತ್ತಿರುವ ಪ್ರಥಮ ವರ್ಷದ ಹೊನಲು ಬೆಳಕಿನ ಪ್ರೋ ಕಬಡ್ಡಿ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾದ ಸಿ.ಆರ್. ಬಾಬು ಅವರು ಮಾತನಾಡಿ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದ ಯುವಕರು ಗ್ರಾಮದಲ್ಲಿ ಕಬಡ್ಡಿ ಪಂದ್ಯಾಟವನ್ನು ಅಯೋಜಿಸಿರುವುದು ಇತರರಿಗೆ ಪ್ರೇರಣೆಯಾಗಿದೆ.
ಯೂತ್ ಫ್ರೆಂಡ್ಸ್ ಪೆರುಂಬಾಡಿ ಸಂಸ್ಥೆಯ ಅಧ್ಯಕ್ಷ ಉಮೇಶ್ ಟಿ.ಬಿ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪಂದ್ಯಾಟಗಳನ್ನು ಗ್ರಾಮದ ಹಿರಿಯರಾದ ಈರಯ್ಯ ಅವರು ಉದ್ಘಾಟಿಸಿದರು.
ಆರ್ಜಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ, ಉದ್ಯಮಿ ಚುಪ್ಪ ನಾಗರಾಜ್, ಅರ್ಜಿ ಪಂಚಾಯಿತಿ ಸದಸ್ಯರಾದ ಅನೂಪ್, ಸುನೀತಾ ಹರಿದಾಸ್, ಬಿಟ್ಟಂಗಾಲ ಗ್ರಾಮ ಪಂಚಾಯತಿಯ ಸದಸ್ಯರಾದ ನವೀನ್ ಎಂ.ಪಿ ಉಪಸ್ಥಿತರಿದ್ದರು.
ಪಂದ್ಯಾವಳಿಗಳ ಉದ್ಘಾಟನಾ ಪಂದ್ಯಾಟವು ಸೆವೆನ್ ಇಗಲ್ಸ್ ಮತ್ತು ಸೈಕೊ ಡಿಫೆಂರ್ಸ್ ತಂಡಗಳ ಮದ್ಯೆ ನಡೆದು ಸೆವೆನ್ ಇಗಲ್ಸ್ ತಂಡವು ೩೦-೨೨ ಅಂಕಗಳೋAದಿಗೆ ಸೈಕೋ ಡಿಫೆಂರ್ಸ್ ತಂಡವನ್ನು ಮಣಿಸಿ ಜಯಗಳಿಸಿತು.
ಪಂದ್ಯಾಟದಲ್ಲಿ ಕಬಡ್ಡಿ ಪಂದ್ಯಾಟದ ಅಯೋಜಕರು ಸೇರಿದಂತೆ ವಿವಿಧ ತಂಡಗಳ ಮಾಲೀಕರು ಆಟಗಾರರು,ಗ್ರಾಮಸ್ಥರು ಹಾಜರಿದ್ದರು.