ಸೋಮವಾರಪೇಟೆ, ಮಾ. ೧೩: ತಾಲೂಕಿನ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವ ಸಮಾರೋಪ ದೇವಾಲಯ ಆವರಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ ವಹಿಸಿದ್ದರು. ಕಳೆದ ೨೨ ವರ್ಷಗಳಿಂದ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸರ್ವಧರ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಕರ ಗ್ರಾಮದ ಎಚ್.ಆರ್. ಮುತ್ತಣ್ಣ ದಂಪತಿಯನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸರ್ವಧರ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯ ಅನೇಕ ಗಣ್ಯರು ಕೆಲಸ ಮಾಡಿದ್ದಾರೆ. ಇಲ್ಲಿನ ಶ್ರೀ ನವದುರ್ಗಾ ಪರಮೇಶ್ವರಿ ದೇವಿಯ ಪ್ರತಿಷ್ಠಾಪನೆಗೆ ದಿವಂಗತ ವೆಂಕಟರಮಣಚಾರ್ ಅವರ ಸೇವೆ ಸ್ಮರಣೀಯ. ಈಗ ಈ ಕ್ಷೇತ್ರದ ಸರ್ವಧರ್ಮ ಕ್ಷೇತ್ರವಾಗಿ ಪ್ರಗತಿಯಾಗುತ್ತಿದೆ ಎಂದು ಗೌರವಾಧ್ಯಕ್ಷ ಎಚ್.ಆರ್.ಮುತ್ತಣ್ಣ ಹೇಳಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ.ಸುಮ, ಉಪಾಧ್ಯಕ್ಷೆ ರೋಹಿಣಿ, ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ ಅಶ್ವಥ್, ದೊಡ್ಡಮಳ್ತೆ ಗ್ರಾಪಂ ಅಧ್ಯಕ್ಷೆ ಕೆ.ಎಂ.ಬಿAದು, ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪರಮೇಶ್, ಪಂಚಾಯಿತಿ ಸದಸ್ಯರಾದ ಜಿ.ಎಸ್. ಪ್ರಸನ್ನ, ಎ.ಎಸ್. ನವೀನ್, ಸಿ.ಈ. ವೆಂಕಟೇಶ್, ಜಿ.ಜಿ.ಮಲ್ಲಿಕ, ಕೆ.ಡಿ.ವಿಶಾಲಾಕ್ಷಿ, ಸಹಕಾರ ಸಂಘದ ನಿರ್ದೇಶಕರುಗಳಾದ ಪುಷ್ಪಸುರೇಶ್, ದಿನೇಶ್, ಪ್ರಮುಖರಾದ ಜಿ.ಎ. ಮಹೇಶ್, ಮೋಹನ್, ಜಿ.ಎಂ. ಹೂವಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬಾಳೆಪಣ್ಣ್ ನಮ್ಮೆ

ಮಡಿಕೇರಿ, ಮಾ. ೧೩: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ತಾ. ೧೪ ರಂದು (ಇಂದು) ನಡೆಯಲಿದೆ. ಬೆಳಗ್ಗಿನ ಜಾವ ತಕ್ಕ ಮುಖ್ಯಸ್ಥರ ಮನೆಯಿಂದ ಭಂಡಾರ ಕುಯ್ಯ ತರುವುದಲ್ಲದೆ, ಮಧ್ಯಾಹ್ನ ೧೨.೩೦ ಗಂಟೆಗೆ ಎತ್ತು ಪೋರಾಟದೊಂದಿಗೆ ಭಕ್ತರು ಬನದಲ್ಲಿ ಸೇರಿ ಭಂಡಾರ, ಕಾಣಿಕೆ ಸಮರ್ಪಣೆ ನಡೆದು ತೆಂಗಿನ ಕಾಯಿ ನೈವೇದ್ಯ ಅರ್ಪಣೆಯಾಗುವುದಾಗಿ ಭಂಡಾರ ತಕ್ಕರಾದ ಕುಡುವಂಡ ಉತ್ತಪ್ಪ ತಿಳಿಸಿದ್ದಾರೆ. ಭಕ್ತರು ಕೊರೊನಾ ಸಂಬAಧಿತ ನಿಯಮಗಳನ್ನು ಪಾಲಿಸುವಂತೆ ಕೋರಿದ್ದಾರೆ.ಇಂದು ಬೆಳ್ಳುಮಾಡು ಉತ್ಸವ

ಮಡಿಕೇರಿ, ಮಾ. ೧೩: ವೀರಾಜಪೇಟೆ ತಾಲೂಕು ಇತಿಹಾಸ ಪ್ರಸಿದ್ಧ ಬೆಳ್ಳುಮಾಡುವಿನ ಶ್ರೀ ಅಡುಕೋಣಿ ಶಾಸ್ತಾವ್ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೪ ರಂದು (ಇಂದು) ನಡೆಯಲಿದೆ. ಬೆಳಿಗ್ಗೆ ೧೧.೩೦ ಗಂಟೆಗೆ ಎತ್ತು ಪೋರಾಟ, ೧೨.೩೦ಕ್ಕೆ ಮಹಾಪೂಜೆ, ೧ ಗಂಟೆಗೆ ೯ ಮಂದಿ ಉಪವಾಸ ವ್ರತಧಾರಿ ಮಹಿಳೆಯರಿಂದ ವಿಶೇಷ ಪೂಜೆ, ಗ್ರಾಮದ ಯುವಕರಿಗೆ ಹಾಗೂ ಅತಿಥಿಗಳಿಗೆ ತೆಂಗಿನ ಕಾಯಿ ಎಳೆಯುವ ಸ್ಪರ್ಧೆ ಹಾಗೂ ೨ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವತಕ್ಕರಾದ ಚಂಗುಲAಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.ಐಕೊಳ ಅಯ್ಯಪ್ಪ ಉತ್ಸವ

ಮಡಿಕೇರಿ, ಮಾ. ೧೩: ಐಕೊಳ ಗ್ರಾಮದ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೪ ರಿಂದ ತಾ. ೧೭ರ ವರೆಗೆ ನಡೆಯಲಿದ್ದು, ತಾ. ೧೪ ರಂದು (ಇಂದು) ತಕ್ಕರ ಮನೆಯಿಂದ ಭಂಡಾರ ತರುವುದು, ಸಂಜೆ ೭ ಗಂಟೆಗೆ ಅಂದಿ ಬೆಳಕು ನಡೆಯಲಿದೆ. ತಾ. ೧೫ ರಂದು ನೆರಪು ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು, ತಾ. ೧೬ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೧೨ ಗಂಟೆಗೆ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಂತರ ದೇವರ ಜಳಕ, ದೆವರ ನೃತ್ಯ ಮತ್ತು ತಾ. ೧೭ ರಂದು ಸಂಜೆ ೭ ಗಂಟೆಗೆ ಶ್ರೀ ಅಯ್ಯಪ್ಪ ಮತ್ತು ಚಾಮುಂಡಿ ತೆರೆ ನಡೆಯಲಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.ಸಿದ್ದಾಪುರ, ಮಾ ೧೩: ಗುಹ್ಯ ಗ್ರಾಮದ ವಿಷ್ಣುಮೂರ್ತಿ ಹಾಗೂ ಬೀರ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ವಿಷ್ಣುಮೂರ್ತಿ ಅಗ್ನಿಪ್ರವೇಶ, ಅಜ್ಜಪ್ಪನ ತೆರೆ, ಬೀರ ತೆರೆ ನಡೆಯಿತು. ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.ಗುಡ್ಡೆಹೊಸೂರು, ಮಾ. ೧೩: ಇಲ್ಲಿನ ಬೊಳ್ಳುರು ಗ್ರಾಮದ ಶ್ರೀ ಮುನೇಶ್ವರ ದೇವರ ಬನದಲ್ಲಿ ವಾರ್ಷಿಕ ಮಹಾಪೂಜೆ ನಡೆಯಿತು. ಪೂಜಾ ಕಾರ್ಯದಲ್ಲಿ ಸರ್ವ ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು. ಈ ಸಂದÀರ್ಭ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಗಣಪತಿ ಹೋಮ ಮತ್ತು ವಿವಿಧ ಪೂಜೆಯನ್ನು ನಡೆಸಲಾಯಿತು.