ನಾಪೋಕ್ಲು, ಮಾ. ೧೩: ಬೆಟ್ಟಗೇರಿ ಗ್ರಾಮದ ಕುಂಬಾರಕೊಪ್ಪಲು ಶ್ರೀ ರಾಮ ಮತ್ತು ಶ್ರೀದೇವಿ ದೇವಳದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವಾಗತ ಗೋಪುರದ ಉದ್ಘಾಟನೆಯನ್ನು ಬೆಂಗಳೂರಿನ ಉದ್ಯಮಿ ಬೀನಾ ಮಂಜುನಾಥ್ ರೆಡ್ಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಪಂಡ ರ‍್ಯಾಲಿ ಮಾದಯ್ಯ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸಿ.ಯಂ.ಕೆAಚಪ್ಪ, ಅರ್ಚಕರಾದ ಹೆಚ್.ಎಸ್.ಪೂಣಚ್ಚ, ಸಿ.ಎಸ್.ಪೂವಯ್ಯ, ದಾನಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.ದೇವರ ಉತ್ಸವ

ಮಡಿಕೇರಿ, ಮಾ. ೧೩: ಕಾರುಗುಂದ ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ದೇವರ ವರ್ಷಾವಧಿ ಉತ್ಸವ ತಾ. ೨೦ ರಿಂದ ೨೨ರ ವರೆಗೆ ಜರುಗಲಿದೆ. ತಾ. ೨೦ ರಂದು ಸಾಯಂಕಾಲ ಅಂದಿ ಕೊಟ್ಟ್, ತಾ. ೨೧ ರಂದು ಅಪರಾಹ್ನ ಪಟ್ಟಣಿ ಹಬ್ಬ (ಊಟದ ವ್ಯವಸ್ಥೆ ಇರುವುದು). ತಾ. ೨೨ ರಂದು ಅಪರಾಹ್ನ ಜಳಕ, ಬೆಳಕಿನ ಹಬ್ಬ ನಡೆಯಲಿದೆ.

ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ / ಆಶೀರ್ವಾದ ಪಡೆದುಕೊಳ್ಳಬೇಕೆಂದು ತಕ್ಕ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ಕೋರಿದ್ದಾರೆ. ಸರಕಾರದ ನಿಯಮದಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಾಗಿ ವಿನಂತಿ.ಸೋಮವಾರಪೇಟೆ, ಮಾ. ೧೩: ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಧರ್ಮಸ್ಥಳದಿಂದ ರೂ. ೧ ಲಕ್ಷ ದೇಣಿಗೆ ನೀಡಲಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀಡಿದ ೧ ಲಕ್ಷದ ಚೆಕ್‌ನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಸೇರಿದಂತೆ ಸಿಬ್ಬಂದಿಗಳು, ದೇವಾಲಯ ಅಭಿವೃದ್ಧಿ ಸಮಿತಿಯ ಜಗದೀಶ್ ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಯೋಜನೆಯ ಸಂಗ್ರಹಣಾ ವಿಭಾಗದ ಮೇಲ್ವಿಚಾರಕ ಸುಬ್ರಮಣಿ, ವಲಯ ಮೇಲ್ವಿಚಾರಕ ಸಂತೋಷ್, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಿವರಾತ್ರಿ ಉತ್ಸವ ಸಂಪನ್ನ

ವೀರಾಜಪೇಟೆ, ಮಾ. ೧೩: ಸಮೀಪದ ಕೊಟ್ಟೊಳಿ ಗ್ರಾಮದ ಐತಿಹಾಸಿಕ ಹಿನ್ನಲೆ ಇರುವ ಉದ್ಭವ ಶಿವಲಿಂಗ ಹಾಗೂ ಉದ್ಭವ ಗಣಪತಿ ಯನ್ನು ಹೊಂದಿರುವ ಶ್ರೀಧಾರಾ ಮಹೇಶ್ವರ ದೇವರ ವಾರ್ಷಿಕ ಮಹಾ ಶಿವರಾತ್ರಿ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ತಾ ೯. ರಂದು ದೇವರ ಕಟ್ಟು ಬಿದ್ದು ತಾ. ೧೦ ರಂದು ಬೆಳಿಗ್ಗೆ ೮ ಗಂಟೆಯಿAದ ನಡೆಯಿತು. ಸಂಜೆ ಚಂಗಚAಡ ಕುಟುಂಬಸ್ಥರ ಐನ್ ಮನೆಯಿಂದ ದೇವರ ಭಂಡಾರ ಬಂದ ನಂತರ ತಾ. ೧೧ ರಂದು ಮುಂಜಾನೆ ಇರುಳು ಬೆಳಕು, ರುದ್ರಾಭಿಶಷೇಕ ,ರುದ್ರಹೋಮ ನಂತರ ಗ್ರಾಮದವರಿಂದ ಎತ್ತು ಪೋರಾಟ ಬಂದ ನಂತರ ಶ್ರೀ ದೇವರ ನೃತ್ಯ ,ಅಲಂಕಾರ ಪೂಜೆ, ಮಹಾಪೂಜೆ, ಉತ್ಸವ ಮೂರ್ತಿಯ ಅವಭೃತಸ್ನಾನವಾದ ಶ್ರೀ ದೇವರ ನೃತ್ಯವನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ಕಣ್ತುಂಬಿಕೊAಡರು. ತಾ. ೧೨ ರಂದು ಬೆಳಿಗ್ಗೆ ಕುಟ್ಟಿಚಾತ, ಅಯ್ಯಪ್ಪ, ಕ್ಷೇತ್ರಪಾಲ, ಮಂತ್ರವಾದಿ ಗುಳಿಗ ದೇವರುಗಳ ಭೂತಬಲಿ ನಡೆಯಿತು. ತಾ. ೧೩ರಂದು ನಾಗಪೂಜೆ, ಅಮ್ಮನಿಗೆ ತಾಂಬೀಲ, ಬ್ರಹ್ಮರಾಕ್ಷಸ ತಾಂಬೀಲ, ಭೈರವಾದಿ ಪಂಚ ಮೂರ್ತಿ ಪೂಜೆಗಳು ನಡೆಯಿತು. ನಂತರ ಹಬ್ಬಕ್ಕೆ ತೆರೆಯೆಳೆಯಲಾಯಿತು. ಶ್ರೀ ದೇವರ ಹಬ್ಬವನ್ನು ಗ್ರಾಮದ ಎಲ್ಲ ಜನಾಂಗದವರು ಒಟ್ಟಿಗೆ ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಭಗವತಿ ಭದ್ರಕಾಳಿ ಹಬ್ಬ

ನಾಪೋಕ್ಲು, ಮಾ. ೧೩ : ಇಲ್ಲಿನ ಶ್ರೀ ಭಗವತಿ ಭದ್ರಕಾಳಿ ದೇವಾಲಯದ ಹಬ್ಬವು ತಾ. ೧೭ ರಿಂದ ೨೧ರ ವರೆಗೆ ನಡೆಯಲಿದೆ. ಹಬ್ಬದ ಹಿನ್ನೆಲೆ ಊರಿನ ಜನರು ದೇವಾಲಯದಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ದೇವರ ಕೆರೆ, ದೇವಾಲಯದ ಆವರಣ ಮತ್ತು ಒಳಾಂಗಣವನ್ನು ತೊಳೆದು ಸ್ವಚ್ಛಗೊಳಿಸಿ ನಂತರ ದೇವಳದ ಒಳಗಿರುವ ಬಾವಿಯನ್ನು ಸಹ ಸ್ವಚ್ಛಗೊಳಿಸಿ ಶುಚಿತ್ವವನ್ನು ಕೈಗೊಳ್ಳಲಾಯಿತು. ಈ ಕಾರ್ಯದಲ್ಲಿ ದೇವಾಲಯದ ಅಡಳಿತ ಮಂಡಳಿ ಮತ್ತು ಸದಸ್ಯರು, ನಾಪೋಕ್ಲು ಭಗವತಿ ಮಹಿಳಾ ಸಮಾಜದ ಅಡಳಿತ ಮಂಡಳಿಯವರು ಮತ್ತು ಊರಿನವರು ಕೈಜೋಡಿಸಿದರು.