ಮಡಿಕೇರಿ, ಮಾ. ೧೨: ಭಕ್ತಿಪೂರ್ವಕವಾಗಿ ಆಚರಿಸಲ್ಪಡುವ ಮಹಾಶಿವರಾತ್ರಿ ಉತ್ಸವ ವಿವಿಧ ಪೂಜೆ-ಪುನಸ್ಕಾರಗಳು, ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಿಲ್ಲೆಯಾದ್ಯಂತ ಆರಾಧಿಸಲ್ಪಟ್ಟಿತು.ಪ್ರಮುಖವಾಗಿ ಈಶ್ವರ ದೇವಾಲಯಗಳಲ್ಲಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಾತ್ರವಲ್ಲದೆ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಹಾಗೂ ಮನೆ-ಮನೆಗಳಲ್ಲೂ ತಾ. ೧೧ ರಂದು ಹಗಲು-ರಾತ್ರಿ ಶಿವನ ಸ್ತುತಿ ಕಂಡುಬAದಿತು. ಈ ಪ್ರಯುಕ್ತವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳೂ ಅಲ್ಲಲ್ಲಿ ಆಯೋಜಿತವಾಗಿದ್ದವು.
ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ, ಮೇಕೇರಿಯ ಗೌರಿಶಂಕರ ದೇಗುಲ, ಶನಿವಾರಸಂತೆ ಮಲೆಮಲ್ಲೇಶ್ವರ, ಗವಿ ಸಿದ್ಧೇಶ್ವರ, ಪೇರ್ಮಾಡು ಈಶ್ವರ, ಇರ್ಪು ಶ್ರೀ ರಾಮೇಶ್ವರ ಸೇರಿದಂತೆ ಹಲವು ದೇವಾಲಯಗಳಲ್ಲಿ ಶಿವರಾತ್ರಿಯನ್ನು ಪ್ರಧಾನವಾಗಿ ಆಚರಿಸಲಾಗುತ್ತಿದ್ದು, ಈ ದೇವಾಲಯಗಳು ಸೇರಿದಂತೆ ಎಲ್ಲೆಡೆಯಲ್ಲಿ ಶಿವನ ಆರಾಧನೆ ಭಕ್ತಿ-ಪೂರ್ವಕವಾಗಿ ಹಾಗೂ ಅಲ್ಲಲ್ಲಿನ ಕಟ್ಟುಪಾಡುಗಳಂತೆ ಆಚರಿಸಲ್ಪಟ್ಟಿತು.
ಶ್ರೀ ಓಂಕಾರೇಶ್ವರ: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ವಿಶೇಷವಾಗಿ ಶ್ರೀ ರುದ್ರಹೋಮವನ್ನು ಆಚಾರ್ಯ ಶ್ರೀಪತಿ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಲ್ಲದೆ ಆದರ್ಶಭಟ್ ಮತ್ತಿತರ ಅರ್ಚಕರು ರುದ್ರಾಭಿಷೇಕ ಹಾಗೂ ಶಿವರಾತ್ರಿ ಪ್ರಯುಕ್ತ ರಾತ್ರಿ ವಿವಿಧ ಪೂಜೆಗಳನ್ನು ನಿರ್ವಹಿಸಿದರು. ದೇವಾಲಯವನ್ನು ಆಕರ್ಷಕವಾಗಿ ಅಲಂಕರಿಸಲಾಗಿದ್ದು, ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರೂ, ವ್ಯವಸ್ಥಿತ ರೀತಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್, ಸದಸ್ಯರುಗಳಾದ ಪ್ರಕಾಶಾಚಾರ್ಯ, ಸುನಿಲ್, ದಮಯಂತಿ, ಉದಯ್, ಆನಂದ್ ಮೊದಲಾದವರು ಹಾಜರಿದ್ದು ವ್ಯವಸ್ಥೆ ಕುರಿತು ಗಮನ ಹರಿಸಿದರು. ಮಡಿಕೇರಿ ಶ್ರೀ ಕನ್ಯಕಾ ಪರಮೇಶ್ವರಿ ದೇಗುಲದಲ್ಲಿರುವ ಶಿವಲಿಂಗ ದೇಗುಲದಲ್ಲಿ ರುದ್ರಾಭಿಷೇಕ ನಡೆಯಿತು. ವೇದಬ್ರಹ್ಮ ನರಸಿಂಹ ಭಟ್ ಅವರ ನೇತೃತ್ವದಲ್ಲಿ ರುದ್ರಪಠಣ ನೆರವೇರಿತು. ಪ್ರಧಾನ ಅರ್ಚಕ ವೆಂಕಟರಮಣ ಭಟ್ ಹಾಗೂ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಹಾಜರಿದ್ದರು.
ಉಕ್ಕುಡ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿಯೂ ಶಿವರಾತ್ರಿ ಆಚರಣೆ ನಡೆಯಿತು.
ಶ್ರೀ ಬಸವೇಶ್ವರ ದೇವಾಲಯದಲ್ಲಿ
ಮಡಿಕೇರಿ: ಶ್ರೀ ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಆಚರಣೆ ನಡೆಯಿತು. ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಶಿವ ಮತ್ತು ನಂದೀಶ್ವರ ಸ್ವಾಮಿಗೆ ನಿರಂತರ ರುದ್ರಾಭಿಷೇಕ, ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಸೇವೆ ಮತ್ತು ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
(ಮೊದಲ ಪುಟದಿಂದ)
ಈಶ್ವರೀಯ ವಿಶ್ವವಿದ್ಯಾಲಯ
ಮಡಿಕೇರಿಯ ದಾಸವಾಳ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಆಚರಣೆ ನಡೆಯಿತು. ದಿನದ ಅಂಗವಾಗಿ ಬೆಳಿಗ್ಗೆ ೮೫ ಜ್ಯೋತಿಗಳನ್ನು ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಜಿಲ್ಲಾ ಪ್ರಮುಖರಾದ ಗಾಯತ್ರಿದೇವಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. ದಿನವಿಡೀ ಜ್ಯೋತಿದರ್ಶನ, ಭಜನೆ ಮತ್ತಿತರ ಪೂಜಾ ಕೈಂಕರ್ಯಗಳು ಜರುಗಿದವು.
ಉಕ್ಕುಡ ರಾಜರಾಜೇಶ್ವರಿ ಕ್ಷೇತ್ರದಲ್ಲಿ
ಇಲ್ಲಿನ ಕರ್ಣಂಗೇರಿಯ ಉಕ್ಕುಡದಲ್ಲಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಕ್ಷೇತ್ರದಲ್ಲಿರುವ ಶಿವನ ದೇವಾಲಯದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಎಳನೀರು ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ರಾತ್ರಿ ದೇಗುಲದಲ್ಲಿ ರಾಜೇಶ್ವರಿ ದೇವಿಯ ದರ್ಶನ, ದೀಪೋತ್ಸವ ನಡೆಯಿತು. ಭಕ್ತರು ದೇಗುಲದ ಆವರಣದಲ್ಲಿ ೧೦೦೧ ದೀಪಗಳನ್ನು ಉರಿಸಿದರು. ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.
ಮಡಿಕೇರಿಯ ಶ್ರೀಮುನೀಶ್ವರ ವೀರಭದ್ರೇಶ್ವರ ದೇವಾಲಯ
ನಗರದ ದಾಸವಾಳ ರಸ್ತೆಯಲ್ಲಿರುವ ಶ್ರೀಮುನೀಶ್ವರ ವೀರಭದ್ರೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು.
ಮಹಾಗಣಪತಿ ಹೋಮ, ಅಭಿಷೇಕ, ಅರ್ಚನೆ, ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಿವರಾತ್ರಿ ಹಬ್ಬದ ವಿಶೇಷವಾಗಿ ಶ್ರೀವೀರಭದ್ರ ಸ್ವಾಮಿಯ ಉತ್ಸವ ಮೂರ್ತಿಯ ಶೋಭಾಯಾತ್ರೆ ಗಣಪತಿ ಬೀದಿ, ಬನ್ನಿ ಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ತೆರಳಿತು. ನೂರಾರು ಭಕ್ತರು ಶಿವರಾತ್ರಿ ಉತ್ಸವಕ್ಕೆ ಸಾಕ್ಷಿಯಾದರು.
ಮೇಕೇರಿ: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಗುರುವಾರ ಬೆಳಗ್ಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ಸಂಕಲ್ಪ ಪೂಜೆ ನಡೆಯಿತು. ಬೆಳಗ್ಗೆ ಲೋಕಕಲ್ಯಾಣಕ್ಕಾಗಿ ಈಶ್ವರ ಪ್ರೀತ್ಯರ್ಥ ವಿಶೇಷ ಪೂಜೆ ನಡೆಯಿತು. ಇದೇ ಸಂದರ್ಭ ಗ್ರಾಮದ ಮನೆಗಳಿಂದ ಹೊರಕಾಣಿಗೆ ಸೇವೆಯೂ ಭವ್ಯ ಮೆರವಣಿಗೆಯ ಮೂಲಕ ನಡೆಯಿತು. ಆಕರ್ಷಕ ಚಂಡೇ ಮೇಳದೊಂದಿಗೆ ಗ್ರಾಮಗಳಿಂದ ದೇವಾಲಯದವರೆಗೂ ಶ್ರದ್ಧಾ ಭಕ್ತಿಯ ಮೆರವಣಿಗೆ ಸಾಗಿ ಬಂತು.
ನಡೆದು ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಶಿವರಾತ್ರಿ ಜಾಗರಣೆ ಅಂಗವಾಗಿ ಭಕ್ತಿ ಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ರುದ್ರಾಭಿಷೇಕ, ರಂಗಪೂಜೆ ನಡೆಯಿತು.
ಹುದುಗೂರು ಶ್ರದ್ಧಾಭಕ್ತಿಯ ಶಿವರಾತ್ರಿ
ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಹಬ್ಬದ ಕಾರ್ಯಕ್ರಮವು ನಡೆಯಿತು
ಹಬ್ಬದ ಅಂಗವಾಗಿ ದೇವಾಲಯದ ಆವರಣದಲ್ಲಿ ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಹೋಮ-ಹವನಗಳು, ಪೂಜಾ ಕಾರ್ಯಕ್ರಮಗಳು ನಡೆದವು.
ಪೂಜಾ ಕೈಂಕರ್ಯವನ್ನು ಕೇರಳದ ಸಜೀ ತಂಡದವರು ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಹುದುಗೂರು, ಹಾರಂಗಿ, ಕುಶಾಲನಗರ, ಮದಲಾಪುರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು.
ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಉಮಾಮಹೇಶ್ವರ ಸ್ವಾಮಿ ಮೂರ್ತಿ ಮೆರವಣಿಗೆಯು ವಿದ್ಯುತ್ ಅಲಂಕೃತ ಟ್ರಾö್ಯಕ್ಟರ್‌ನಲ್ಲಿ ವಿಗ್ರಹವನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ದೇವಾಲಯ ಆವರಣವನ್ನು ಪ್ರವೇಶಿಸಿದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.
ತೊರೆನೂರು ಶನೀಶ್ವ್ವರ ದೇವಾಲಯದಲ್ಲಿ ಪೂಜೆ
ಕೂಡಿಗೆ: ತೊರೆನೂರು ಗ್ರಾಮದಲ್ಲಿರುವ ಶನೀಶ್ವರ ದೇವಾಲಯದ ಆವರಣದಲ್ಲಿ ಶಿವರಾತ್ರಿಯ ಅಂಗವಾಗಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಹೋಮ ಹವನಗಳು, ಸತ್ಯನಾರಾಯಣ ಪೂಜೆ ನಡೆದವು.
ಪೂಜಾ ಕೈಂಕರ್ಯಗಳನ್ನು ಪುರುಷೋತ್ತಮ ತಂಡದವರು ನೆರವೇರಿಸಿದರು. ದೇವಾಲಯದ ಸಮಿತಿಯ ಅಧ್ಯಕ್ಷ ಸಿ.ಎಸ್. ಮಾದಪ್ಪ, ಕಾರ್ಯದರ್ಶಿ ಕೆ.ಎಸ್. ಕೃಷ್ಣಗೌಡ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು. ಪೂಜಾ ಕಾರ್ಯಕ್ರಮದಲ್ಲಿ ತೊರೆನೂರು, ಗದ್ದೆಹೂಸಳ್ಳ, ಬೈರಪ್ಪನಗುಡಿ ವ್ಯಾಪ್ತಿಯ ಭಕ್ತಾದಿಗಳು ಭಾಗವಹಿಸಿದರು.
ಕುಶಾಲನಗರ ವಿಭಾಗದಲ್ಲಿ
ಕುಶಾಲನಗರ: ಮಹಾಶಿವರಾತ್ರಿ ಅಂಗವಾಗಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕುಶಾಲನಗರದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಹೋಮ, ಹವನ ಮತ್ತಿತರ ಪೂಜೆಗಳು ಜರುಗಿದವು.
ಅತ್ತೂರು ಪಂಚಲಿAಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಕೇರಳದ ಅರ್ಚಕರ ತಂಡದಿAದ ಪೂಜಾ ಕಾರ್ಯಗಳು ನಡೆದು ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಕುಶಾಲನಗರ ಗಂಧದಕೋಟಿ ಬಳಿ ಉದ್ಭವಲಿಂಗಕ್ಕೆ ಅಭಿಷೇಕ ಮುಂತಾದ ಪೂಜೆಗಳು ನೆರವೇರಿಸಲಾಯಿತು. ಕುಶಾಲನಗರ ಬಳಿ ಕಾವೇರಿ ನದಿ ಮಧ್ಯೆ ಇರುವ ಹೊಳೆರಾಮಪ್ಪನ ಗುಡಿಯಲ್ಲಿ ಕುಶಾಲನಗರ ಮತ್ತು ಚಿಕ್ಕಹೊಸೂರು ಗ್ರಾಮದ ಭಕ್ತಾದಿಗಳು ಪೂಜೆ ಸಲ್ಲಿಸಿದರು.
ಶಿವರಾತ್ರಿ ಅಂಗವಾಗಿ ಕುಶಾಲನಗರ ಪಟ್ಟಣ ಅಯ್ಯಪ್ಪಸ್ವಾಮಿ ದೇವಾಲಯ, ಕನ್ನಿಕಾ ಪರಮೇಶ್ವರಿ ಸೇರಿದಂತೆ ಎಲ್ಲಾ ದೇವಾಲಯಗಳನ್ನು ಶೃಂಗರಿಸಲಾಗಿತ್ತು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸೋಮೇಶ್ವರ ದೇವಾಲಯಗಳಲ್ಲಿ ದೀಪೋತ್ಸವ ನಡೆಯಿತು.
ಸುಂಟಿಕೊಪ್ಪ: ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಬೆಳಿಗ್ಗೆ ೯ಗಂಟೆಯಿAದ ೧೨ ಗಂಟೆಯವರೆಗೆ ಸಾರ್ವಜನಿಕರಿಂದ ೩೦೦ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಮತ್ತು ಮಧ್ಯಾಹ್ನ ೧ ಗಂಟೆಯಿAದ ೩ ಗಂಟೆವರೆಗೆ ಅನ್ನದಾನ ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಾದ ೭ನೇ ಹೊಸಕೋಟೆ, ಮಾಗ್ಡೂರು, ಕೊಡಗರಹಳ್ಳಿ, ಸುಂಟಿಕೊಪ್ಪ ಸೇರಿದಂತೆ ಸುಮಾರು ೭೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಾ. ಶಶಿಕಾಂತ್ ರೈ, ಕಾರ್ಯದರ್ಶಿ ಜವಾಹರ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪೇರೂರು ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶಿವರಾತ್ರಿ
ನಾಪೋಕ್ಲು: ಶಿವರಾತ್ರಿ ಹಬ್ಬವನ್ನು ಇಲ್ಲಿನ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾಪೋಕ್ಲು ವ್ಯಾಪ್ತಿಯ ಮೂರು ಇಗ್ಗುತ್ತಪ್ಪ ದೇವಾಲಯಗಳಲ್ಲಿ ಒಂದಾದ ಪೇರೂರು ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ರುದ್ರಾಭಿಷೇಕ ಮತ್ತು ಮಹಾಪೂಜೆ ಜರುಗಿತು.
ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಕ್ತರಿಂದ ತುಲಾಭಾರ ಸೇವೆ ನಡೆಯಿತು. ಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ಏರ್ಪಡಿಸಲಾಯಿತು. ಬಳಿಕ ಇಗ್ಗುತ್ತಪ್ಪ ದೇವರ ಉತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ನೃತ್ಯಬಲಿ ವೀಕ್ಷಿಸಿದರು. ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.
ಕಾವೇರಿ ಬೈವಾಡ್ ಸಮಿತಿಯಿಂದ ತಲಕಾವೇರಿಗೆ ಇರುಮುಡಿ ಯಾತ್ರೆ
ನಾಪೋಕ್ಲು: ಶಿವರಾತ್ರಿ ಪ್ರಯುಕ್ತ ಕೊಡಗಿನ ಕುಲದೈವ, ದಕ್ಷಿಣದ ಗಂಗೆ, ಪಾಪ ವಿನಾಶಿನಿ ಶ್ರೀ ಕಾವೇರಿ ಮಾತೆಗೆ ವೃತಧಾರಿಗಳಾಗಿ ಭಕ್ತಿ ಸಮರ್ಪಿಸುವ ಶ್ರೀ ಮೂಲಕಾವೇರಿ ಬೈವಾಡು ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಪಾರಾಣೆ, ನಾಪೋಕ್ಲು ಶ್ರೀ ಕಾವೇರಿ ಬೈವಾಡು ಸಮಿತಿ ವತಿಯಿಂದ ೩೨ ನೇ ವರ್ಷದ ಶ್ರೀ ಮೂಲ ಕಾವೇರಿ ಬೈವಾಡು ಕಾರ್ಯಕ್ರಮದ ಅಂಗವಾಗಿ ವೃತಧಾರಿಗಳು ಬುಧವಾರ ಸಂಜೆ ಪಾರಾಣೆಯ ಗುರುಸ್ವಾಮಿ ಬಿದ್ದಂಡ ಪೊನ್ನಪ್ಪ ಅವರ ಮನೆಯಲ್ಲಿ ಕಾವೇರಿ ಬೈವಾಡ್‌ಗೆ ಇರುಮುಡಿ ಕಟ್ಟು ತುಂಬಿಸಿ ಗÀÄರುವಾರ ನಸುಕಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರÀÄ. ಈ ಸಂದರ್ಭ ವೃತಧಾರಿಗಳು ಮಾತೆ ಕಾವೇರಿಯನ್ನು ಸ್ತುತಿಸುವ ಶರಣು ಘೋಷ ಕೂಗಿದರು.
ಬಳಿಕ ವೃತಾಧಾರಿಗಳಾದ ಭಕ್ತರು ಇರುಮುಡಿಯೂಂದಿಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ಅಲ್ಲಿಂದ ಭಾಗಮಂಡಲ ಸಂಗಮದಲ್ಲಿ ಸ್ನಾನ ಮುಗಿಸಿ ಶ್ರೀ ಭಗಂಡೇಶ್ವರನ ದರ್ಶನ ಪಡೆದು ಪತ್ತಾಯಕ್ಕೆ ಅಕ್ಕಿ ಹಾಕಿ, ಈಡುಕಾಯಿ ಒಡೆದು ಅಲ್ಲಿಂದ ತಲಕಾವೇರಿ ಸನ್ನಿಧಾನದಲ್ಲಿ ಶ್ರೀ ಕಾವೇರಿ ಮಾತೆಗೆ ಇರುಮುಡಿ ಬೈವಾಡನ್ನು ಸನ್ನಿಧಾನದಲ್ಲಿ ಅರ್ಪಿಸಿದರು. ಬಳಿಕ ಸಾಮೂಹಿಕ ಕುಂಕುಮಾರ್ಚನೆಯನ್ನು ಮಾಡಿ ವೃತಧಾರಿಗಳು ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿ, ಶಿವನ ಧ್ಯಾನದಲ್ಲಿ ಭಕ್ತಿಯಿಂದ ಪ್ರಸಾದ ಸ್ವೀಕರಿಸಿ ಹಿಂತಿರುಗಿದರು.
ವೀರಾಜಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ
ವೀರಾಜಪೇಟೆಯ ವಿವಿಧೆಡೆಗಳಲ್ಲಿ ನಿನ್ನೆ ದಿನ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ನವಗ್ರಹ ಮತ್ತು ಶನೀಶ್ವರ ದೇವಾಲಯದಲ್ಲಿ ಬೆಳಿಗ್ಗೆ ಪ್ರಾತಃಕಾಲ ಗಣಪತಿ ಹೋಮ, ಶನೀಶ್ವರನಿಗೆ ವಿವಿಧ ರೀತಿಯ ಅಭಿಷೇಕಗಳು, ಅಪರಾಹ್ನ ೧೨.೪೫ಕ್ಕೆ ಮಹಾ ಪೂಜಾಸೇವೆ ಜರುಗಿತು. ನಂತರ ಅಪರಾಹ್ನ ೧.೩೦ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಮಗ್ಗುಲದ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.
ವೀರಾಜಪೇಟೆಯ ತೆಲುಗರಬೀದಿಯಲ್ಲಿರುವ ಅಂಗಾಳಪರಮೇಶ್ವರಿ ದೇವಾಲಯದಲ್ಲಿ ತಾ. ೧೦ರಿಂದಲೇ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶುದ್ಧ ಕಳಶ, ಧ್ವಜಾರೋಹಣದೊಂದಿಗೆ ಆರಂಭಗೊAಡ ಉತ್ಸವದಲ್ಲಿ ಸಂಜೆಯವರೆಗೂ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳು ಜರುಗಿದವು. ತಾ. ೧೧ ರಂದು ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥ ಆಗಮನ, ಮುತ್ತೆöÊದೆಯರು ಮೆರವಣಿಗೆಯಲ್ಲಿ ಪದ್ಧತಿಯಂತೆ ದೇವಾಲಯಕ್ಕೆ ತೆರಳಿ ದೇವಿಗೆ ಕಾವೇರಿ ತೀರ್ಥದಿಂದ ಅಭಿಷೇಕ ಪೂಜಾಸೇವೆ ಸಲ್ಲಿಸಿದರು. ತೀರ್ಥ ಅಭಿಷೇಕ ಪೂಜೆಯೂ ರಾತ್ರಿ ೯ಗಂಟೆಯಿAದ ನಾಲ್ಕು ಅವಧಿಗಳ ಕಾಲ ಬೆಳಗಿನ ಜಾವದವರೆಗೆ ನಡೆಯಿತು.
ತಾ. ೧೨ ರಂದು ಮಹಾಪೂಜಾ ಸೇವೆ, ಅನ್ನ ಸಂತರ್ಪಣೆ ಹಾಗೂ ಮುಖ್ಯ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಿಯ ಆರಾಧನೆ ರಾತ್ರಿ ೭.೩೦ರ ವರೆಗೂ ನಡೆಯಿತು. ರಾತ್ರಿ ಮಹಾಪೂಜಾ ಸೇವೆಯೊಂದಿಗೆ ಮೂರು ದಿನಗಳಿಂದ ಆಚರಿಸಿದ ಮಹಾಶಿವರಾತ್ರಿ ಉತ್ಸವಕ್ಕೆ ವಿದಾಯ ಹೇಳಲಾಯಿತು.
ಚೆಟ್ಟಳ್ಳಿಯಲ್ಲಿ ನಡೆದ ಪೂಜಾ ಕಾರ್ಯಕ್ರಮ
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜನಪರ ಹೋರಾಟ ಸಮಿತಿ ಚೆಟ್ಟಳ್ಳಿ, ಶ್ರೀ ವೀರಾಂಜನೇಯ ಯುವಕ ಸಂಘ ಚೆಟ್ಟಳ್ಳಿ ಹಾಗೂ ಶ್ರೀವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಚೆಟ್ಟಳ್ಳಿ ಸಂಯುಕ್ತ ಆಶ್ರಯದಲ್ಲಿ ದಿನಾಂಕ ತಾ. ೧೧ ರಂದು ಚೆಟ್ಟಳ್ಳಿಯ ಸಹಕಾರ ಸಂಘದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪೂಜಾ ಕಾರ್ಯಕ್ರಮ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ನೆರವೇರಿತು.
ಸಂಜೆ ೭ ಗಂಟೆಗೆ ಶ್ರೀ ಪಶುಪತಿನಾಥ ಹಾಗೂ ಶ್ರೀ ಕಾವೇರಿ ಮಾತೆಗೆ ವೀರಾಂಜನೇಯ, ಮಹಾವಿಷ್ಣು, ವಿಶ್ನೇಶ್ವರನಿಗೆ ವಿಶೇಷ ಪೂಜೆ ಮಹಾಮಂಗಳಾರತಿ ಹಾಗೂ ದೀಪಾರಾಧನೆ, ಕಾರ್ಕಳ ಶಿಲ್ಪಿಗಳಾದ ಗುಣವಂತೇಶ್ವರ ಭಟ್, ವಕೀಲ ಕೃಷ್ಣಮೂರ್ತಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಪುರುಷರು ಮಹಿಳೆಯರು ಹಾಗೂ ಮಕ್ಕಳು ಅಣತೆ ಬೆಳಗಿದರು.
ನಂತರ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ವಕೀಲ ಕೃಷ್ಣಮೂರ್ತಿ ಹಾಗೂ ಅತಿಥಿಗಳು ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ವಕೀಲ ಕೃಷ್ಣಮೂರ್ತಿ, ಕಾರ್ಕಳ ಶಿಲ್ಪಿಗಳಾದ ಗುನವಂತೇ ಶ್ವರಭಟ್ಟ್, ಜನಪರಹೋರಾಟ ಸಮಿತಿಯ ಉಪಾಧ್ಯಕ್ಷ ಎನ್.ಡಿ. ನಾಣಯ್ಯ, ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ, ಕೂಡ್ಲೂರು ಚೆಟ್ಟಳ್ಳಿಯ ಶ್ರೀ ವಿನಾಯಕ ದೇವಾಲಯ ಸಮಿತಿಯ ಅಧ್ಯಕ್ಷ ಎನ್.ಎಸ್. ರವಿ, ಚೆಟ್ಟಳ್ಳಿ ಪೊಲೀಸ್ ಉಪಠಾಣೆಯ ಎಎಸ್‌ಐ ಶ್ರೀನಿವಾಸ್, ಮಡಿಕೇರಿಯ ಮಂಜುಳಾ ಆರ್. ಭಟ್ಟ್ ಭಜನಾ ತಂಡದವರಿಗೆ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕಿ ಪುತ್ತರಿರ ಸೀತಮ್ಮ, ಮುಳ್ಳಂಡ ಮಾಯಮ್ಮ, ರಾಜ್ಯಮಾಹಿತಿ ಹಕ್ಕು ಸಂಸ್ಥೆಯ ಜಿಲ್ಲಾಧ್ಯಕ್ಷ ಪುತ್ತರಿರ ದೇವಯ್ಯ ಅವರು ಸನ್ಮಾನಿಸಿ ಗೌರವಿಸಲಾಯಿತು.
ಮಂಜುಳಾ ಆರ್. ಭಟ್ಟ್ ಮಡಿಕೇರಿ ತಂಡದಿAದ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿನಿಯೋಗ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರು, ಊರಿನವರು ಭಾಗವಹಿಸಿದ್ದರು.
ಭಾಗಮಂಡಲ-ತಲಕಾವೇರಿಯಲ್ಲಿ
ಶ್ರೀಭಗAಡೇಶ್ವರ - ತಲಕಾವೇರಿ ದೇವಾಲಯಗಳಲ್ಲಿ ಪ್ರತಿವರ್ಷದಂತೆ ಮಹಾಶಿವರಾತ್ರಿ ಉತ್ಸವ ಸಂಭ್ರಮದಿAದ ಜರುಗಿತು. ಶಿವರಾತ್ರಿ ಉತ್ಸವದ ಪ್ರಯುಕ್ತ ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಶತರುದ್ರಾಭಿಷೇಕ ನಡೆಯಿತು. ಬಳಿಕ ಮಹಾರುದ್ರಹೋಮ ಮಹಾಮಂಗಳಾರತಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ನಾಲ್ಕನೇ ಪುಟದಿಂದ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಏಕದಶಾ ರುದ್ರಾಭಿಷೇಕ ಮಹಾಮಂಗಳಾರತಿ ಜರುಗಿತು. ಭಕ್ತರು ಬೆಳಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಸಂಜೆ ೬.೩೦ಕ್ಕೆ ಅಭಿಷೇಕ ನೆರವೇರಿತು. ಬಳಿಕ ಲಕ್ಷದೀಪ ಉರಿಸಲಾಯಿತು. ಉತ್ಸವದ ಅಂಗವಾಗಿ ಭಕ್ತರು ದೇವಾಲಯದಲ್ಲಿ ಲಕ್ಷದೀಪಕ್ಕೆ ಎಣ್ಣೆಸುರಿದು ಬಳಿಕ ತ್ರಿವೇಣಿ ಸಂಗಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಉತ್ಸವದ ಅಂಗವಾಗಿ ಹನ್ನೆರಡು ಸುತ್ತು ದೇವರ ನೃತ್ಯ ಬಲಿ ಜರುಗಿತು. ದಕ್ಷಿಣ ಕನ್ನಡದ ಬಾಚಕೆರೆ ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಭಸ್ಮಾಸುರ - ಶಬರಿಮಲೆ ಅಯ್ಯಪ್ಪ ಯಕ್ಷಗಾನ ಪ್ರಸಂಗ ಜರುಗಿತು. ಭಕ್ತರು ಯಕ್ಷಗಾನ ವೀಕ್ಷಿಸಿದರು.
ಪ್ರತಿವರ್ಷದಂತೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬರಲಿಲ್ಲ. ದೇವಾಲಯದ ಅರ್ಚಕ ಹರೀಶ್‌ಭಟ್ ನೇತೃತ್ವದಲ್ಲಿ ಪೂಜಾಕಾರ್ಯಗಳು ನೆರವೇರಿದವು. ಭಗಂಡೇಶ್ವರ-ತಲಕಾವೇರಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಪಾರುಪತ್ತೆಗಾರ ಪೊನ್ನಣ್ಣ, ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಗ್ರಾಮಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್‌ಕುಮಾರ್, ರವಿಹೆಬ್ಬಾರ್ ಸೇರದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಇರ್ಪು ಶ್ರೀ ರಾಮೇಶ್ವರ
ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವವು ನಿನ್ನೆ ಮತ್ತು ಇಂದು ಶ್ರದ್ಧಾಭಕ್ತಿಯಿಂದ ನಡೆಯಿತು. ಜಿಲ್ಲಾಧಿಕಾರಿಗಳ ಆದೇಶದಂತೆ ಜನಜಂಗುಳಿ ಸೇರಲು ನಿರ್ಬಂಧವಿದ್ದುದರಿAದ ಅನ್ನ