ಕೂಡಿಗೆ, ಮಾ. ೧೨: ಸೋಮವಾರಪೇಟೆ ತಾಲೂಕು ಕಂದಾಯ ಆಡಳಿತದ ವತಿಯಿಂದ ಪಿಂಚಣಿ ಅಂದಾಲತ್ ಕಾರ್ಯಕ್ರಮವು ಕುಶಾಲನಗರದ ನಾಡಕಚೇರಿ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ವಯೋವೃದ್ಧರು ತಮ್ಮ ದಾಖಲೆಯನ್ನು ಕಂದಾಯ ಇಲಾಖೆಗೆ ಒದಗಿಸಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭ ಉಪ ತಹಶೀಲ್ದಾರ್ ಶುಭ, ಕಂದಾಯ ನಿರೀಕ್ಷಕ ಸಂತೋಷ, ಎಲ್ಲಾ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿಗಳಾದ ಗುರುದರ್ಶನ್, ಗೌತಮ್ಮ, ಸಚಿನ್, ಪೀರ್ ಮಹಮದ್, ಅನುಷಾ, ನವ್ಯ, ಉಷಾ, ವಿಮಲ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ಫಲಾನುಭವಿಗಳು ಹಾಜರಿದ್ದರು.