ಮಡಿಕೇರಿ, ಮಾ. ೧೨; ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿನ ಘಟನೆಗಳ ಬಳಿಕ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗದ ಕಾನೂನು ಗಳನ್ನು ಸರಕಾರ ತಂದಿದ್ದು, ಇದನ್ನು ವಿರೋಧಿಸಿ ಜಿಲ್ಲೆಯಾದ್ಯಂತ ಜಲ್ಲಿ,ಕಲ್ಲು ಹಾಗೂ ಇತರ ಕಟ್ಟಡ ಸಾಮಗ್ರಿ ಉತ್ಪನ್ನಗಳನ್ನು ಸರಬರಾಜು ಮಾಡದೆ ಇರಲು ಕೊಡಗು ಕ್ರಷರ್ ಮಾಲೀಕರ ಸಂಘ ತೀರ್ಮಾನಿಸಿದೆ.ಈಗಿನ ಕಾನೂನಿನಂತೆ ಕ್ರಷರ್ ಗಳಲ್ಲಿ ಲೈಸೆನ್ಸ್ ಹೊಂದಿರುವ ಪರಿಣಿತರನ್ನು ಕರೆಯಿಸಿ ಬಂಡೆಗಳನ್ನು ಸ್ಪೋಟಿಸಲಾಗುತ್ತಿದೆ. ಆದರೆ, ಇದೀಗ ಸರಕಾರ ಹೊಸ ಕಾನೂನು ಜಾರಿ ಸಂಘ ತೀರ್ಮಾನಿಸಿದೆ.ಈಗಿನ ಕಾನೂನಿನಂತೆ ಕ್ರಷರ್ ಗಳಲ್ಲಿ ಲೈಸೆನ್ಸ್ ಹೊಂದಿರುವ ಪರಿಣಿತರನ್ನು ಕರೆಯಿಸಿ ಬಂಡೆಗಳನ್ನು ಸ್ಪೋಟಿಸಲಾಗುತ್ತಿದೆ. ಆದರೆ, ಇದೀಗ ಸರಕಾರ ಹೊಸ ಕಾನೂನು ಜಾರಿ ಸ್ಪಷ್ಟವಾಗಿ ನಮೂದಿಸಿಲ್ಲ. ಇದರಿಂದಾಗಿ ಕ್ರಷರ್ ವ್ಯವಹಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಒಂದೋ ಈ ಹಿಂದೆ ಇದ್ದಂತಹ ಆದೇಶ ಮುಂದುವರಿಸಲಿ, ಇಲ್ಲವಾದಲ್ಲಿ ಸರಕಾರವೇ ಲೈಸೆನ್ಸ್ ನೀಡು ವಂತಾಗಬೇಕು. ಅದುವರೆಗೆ ಜಿಲ್ಲೆಯಲ್ಲಿ ಕ್ವಾರಿಗಳನ್ನು ಬಂದ್ ಮಾಡಿ ಕಟ್ಟಡ ಸಾಮಗ್ರಿಗಳ ಸರಬರಾಜನ್ನು ಅನಿರ್ದಿಷ್ಟಾವಧಿ ವರೆಗೆ ಸ್ಥಗಿತಗೊಳಿಸಲಾಗುವದು. ಈಗಾಗಲೇ(ಮೊದಲ ಪುಟದಿಂದ) ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರಕಾರದ ಗಮನಕ್ಕೆ ತರಲಾಗುವದೆಂದು ಸಂಘದ ಅಧ್ಯಕ್ಷ ವಿ.ಎಂ.ವಿಜಯ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸಾಮಗ್ರಿಗಳ ಸ್ಥಗಿತ ಬಳಿಕ ಹೊರ ಜಿಲ್ಲೆಯಿಂದ ವಸ್ತುಗಳನ್ನು ಸಾಗಿಸಿದರೆ ಪ್ರತಿರೋಧ ಒಡ್ಡುವದಾಗಿಯೂ ಅಧ್ಯಕ್ಷ ವಿಜಯ ತಿಳಿಸಿದ್ದಾರೆ.

ಲಾರಿ ಮಾಲೀಕರ ಸಂಘ ಹೇಳಿಕೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಲಾರಿ ಮಾಲೀಕರ ಕಾರ್ಮಿಕರ ಸಂಘದ ಮಾಜಿ ಕಾರ್ಯದರ್ಶಿ ಮಶೂದ್ ಮೆಟ್ರೋ, ಕ್ವಾರಿ ಸ್ಥಗಿತದಿಂದ ಜಿಲ್ಲೆಯ ಲಾರಿ ಮಾಲೀಕರುಗಳಲ್ಲದೆ, ಸಾವಿರಾರು ಮಂದಿ ಕಾರ್ಮಿಕರ ಬದುಕು ಡೋಲಾಯಮಾನವಾಗಲಿದ್ದು, ಈ ಬಗ್ಗೆ ಸರಕಾರ ಸ್ಪಂದಿಸಿ ಪರಿಹಾರ ಒದಗಿಸಬೇಕಿದೆ ಎಂದು ಕೋರಿದ್ದಾರೆ.