ಗೋಣಿಕೊಪ್ಪಲು, ಮಾ. ೧೨: ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ಮಾನವ ಸಂಘರ್ಷ, ಹುಲಿ ಹಾವಳಿ ಶಾಶ್ವತ ಪರಿಹಾರ ಕಂಡುಕೊಳ್ಳಲು ನ್ಯಾಯಾಲಯದ ಮೊರೆ ಹೋಗುವುದು ಉತ್ತಮ, ಕೊಡಗಿನ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ವಕೀಲರ ತಂಡ ಸನ್ನದ್ಧವಾಗಿದೆ. ಹೋರಾಟ ನಿರಂತರವಾಗಿ ನಡೆಯಲಿ, ಹೋರಾಟದ ರೂಪುರೇಷೆಗಳು ನಡೆಯಲಿ, ಹೋರಾಟಕ್ಕೆ ಸದಾ ಬೆಂಬಲವಿದೆ ಎಂದು ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಹೇಳಿದರು. ರೈತಸಂಘ ವತಿಯಿಂದ ೫ ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಅವರು ಆಗಮಿಸಿ ಈ ಬಗ್ಗೆ ವಿವರಿಸಿದರು. ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ ಹೋರಾಟವನ್ನು ಮತ್ತಷ್ಟು ಹೆಚ್ಚು ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮುಂದುವರೆಯಲಿ ಎಂದರು.

ಪ್ರತಿಭಟನೆಯ ಮುಂದಾಳತ್ವ ವಹಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ನರಭಕ್ಷಕ ಹುಲಿಯಿಂದ ಮೃತಪಟ್ಟ ವ್ಯಕ್ತಿಯ ವಿಷಯದಲ್ಲಿ ಹಿರಿಯ ವಕೀಲ ಅಜ್ಜಿಕುಟ್ಟಿರ ಪೊನ್ನಣ್ಣನವರ ಮುಂದಾಳತ್ವದಲ್ಲಿ ಬೆಂಗಳೂರಿನಲ್ಲಿ ವಿಶೇಷ ಸಭೆ ಆಯೋಜಿಸಿ ಜಿಲ್ಲೆಯ ಹಿರಿಯ ಅನುಭವಿ ವಕೀಲರ ಸಹಾಯ ಪಡೆದು ಮುಂದಿನ ಹೋರಾಟದ ರೂಪುರೇಷೆ ನಡೆಸೋಣ, ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ತೀವ್ರಗೊಳಿಸುವುದು, ಮುಂದಿನ ೨೦ ದಿನಗಳ ಕಾಲ ಹೋರಾಟ ನಡೆಸುವುದು, ನಮ್ಮ ಮುಂದಿರುವ ಹೋರಾಟದ ಹೆಚ್ಚೆಗಳು ಎಂದರು. ಪ್ರತಿ ಮನೆಗಳಿಂದ ಇಬ್ಬರು ಭಾಗವಹಿಸಬೇಕು, ರಾಜಕೀಯ ವೇದಿಕೆಗೆ ಅವಕಾಶ ಇಲ್ಲ ಎಂದರು. ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪುಚ್ಚಿಮಾಡ ಅಶೋಕ್, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಚಂಗುಲAಡ ಸೂರಜ್, ಆಲೆಮಾಡ ಮಂಜುನಾಥ್, ಬಾಚಮಾಡ ಭವಿಕುಮಾರ್, ಕರ್ತಮಾಡ ಸುಜು, ಜಿ.ಪಂ.ಸದಸ್ಯರಾದ ಬಿ.ಎನ್.ಪ್ರಥ್ವಿ, ತೀತಿರ ಧರ್ಮಜ, ಪುಚ್ಚಿಮಾಡ ಲಾಲಾ ಪೂಣಚ್ಚ, ಅಪ್ಪಚಂಗಡ ಮೋಟಯ್ಯ, ಎಂ.ಟಿ.ಕಾರ್ಯಪ್ಪ, ಬೆಳೆಗಾರರ ಸಂಘದ ಮುಖಂಡರಾದ ಮಾಣೀರ ವಿಜಯ್ ನಂಜಪ್ಪ, ಕಟ್ಟೇರ ವಿಶ್ವನಾಥ್, ಟಾಟು ಮೊಣ್ಣಪ್ಪ, ಚಟ್ಟಂಗಡ ಕಂಬ ಕಾರ್ಯಪ್ಪ, ಮಚ್ಚಮಾಡ ಅನೀಶ್ ಮಾದಪ್ಪ, ಅಜ್ಜಿಕುಟ್ಟಿರ ಪ್ರವೀಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಇಟ್ಟೀರ ಪೊನ್ನಣ್ಣ, ಚಕ್ಕೆರ ವಾಸು ಕುಟ್ಟಪ್ಪ, ಕಾಳಿಮಾಡ ಕಿರಣ್, ಕಾಟಿಮಾಡ ಜಿಮ್ಮಿ, ಮೀದೇರಿರ ಕವಿತ ರಾಮ್, ಚೊಟ್ಟೆಯಂಡಮಾಡ ಉದಯ, ಮುಂತಾದವರು ಭಾಗವಹಿಸಿದ್ದರು.

- ಹೆಚ್.ಕೆ.ಜಗದೀಶ್