ಮಡಿಕೇರಿ, ಮಾ. ೧೨: ಸಮರ್ಥ ಕನ್ನಡಿಗರು ವತಿಯಿಂದ ಹಿಮವನ ಪ್ರತಿಭಾ ಸಂಗಮ-೨೦೨೧ ಕಾರ್ಯಕ್ರಮ ತಾ.೧೪ ರಂದು ನಗರದ ಓಂಕಾರೇಶ್ವರ ದೇವಾಲಯ ಆವರಣದ ಓಂಕಾರ ಸದನದಲ್ಲಿ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಯಿAದ ಮಕ್ಕಳು ಹಾಗೂ ಮಹಿಳೆಯರಿಗೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ೧ ರಿಂದ ೪ ವರ್ಷದ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ಕತೆ ಹೇಳುವ ಸ್ಪರ್ಧೆ, ೨ ರಿಂದ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾನಪದ ಹಾಡುವ ಗೀತೆ ಸ್ಪರ್ಧೆ ಹಾಗೂ ಕೋಲಾಟ ನೃತ್ಯ ಸ್ಪರ್ಧೆ, ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಹಾಗೂ ಗೃಹಿಣಿಯರಿಗೆ ಭಾವಗೀತೆ ಸ್ಪರ್ಧೆ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಸಂಪತ್ ಕುಮಾರ್ ಎಸ್.ಎಸ್ ಚಾಲನೆ ನೀಡಲಿದ್ದಾರೆ. ವೇದಿಕೆಯಲ್ಲಿ ಉದ್ಯಮಿ ಅಂಬೆಕಲ್ ಕುಶಾಲಪ್ಪ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಕಾಫಿ ಬೆಳೆಗಾರ ಅಜಯ್ ಸೂದ್, ಸಮರ್ಥ ಕನ್ನಡಿಗರು ಪ್ರಧಾನ ಸಂಚಾಲಕ ಬಸವರಾಜು ಎಸ್ ಕಲ್ಲುಸಕ್ಕರೆ, ಜಿಲ್ಲಾ ಪ್ರಧಾನ ಸಂಚಾಲಕಿ ಹಾಗೂ ಉಪನ್ಯಾಸಕಿ ಕೆ.ಜಯಲಕ್ಷಿö್ಮ ಉಪಸ್ಥಿತರಿರಲಿದ್ದಾರೆ.