ನಾಪೋಕ್ಲು, ಫೆ. ೧೨: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸರಕಾರಿ ಪಿ.ಯು.ಸಿ ಬಾಲಕ ಮತ್ತು ಬಾಲಕಿಯರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟದ ನೇತೃತ್ವವನ್ನು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿಷ್ಣುಮೂರ್ತಿ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟನೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎನ್.ಎಸ್.ಉದಯಶಂಕರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ವಹಿಸಿದ್ದರು.ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚೋಕಿರ ಪ್ರಭು ಪೂವಪ್ಪ, ಕೊಂಡಿರ ಗಣೇಶ್ ಇದ್ದರು.ತೀರ್ಪುಗಾರರಾಗಿ ಮೂರ್ನಾಡುವಿನ ಮಂಜುನಾಥ್, ಅನಿಲ್ ಹೊದವಾಡ, ಕೆ.ಪಿ.ಬಾಣೆ ಶಾಲೆಯ ಕಸ್ತೂರಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಪ್ರಾಂಶುಪಾಲೆ ಡಾ. ಅವನಿಜಾ ಸ್ವಾಗತ, ಉಪನ್ಯಾಸಕಿ ಸುಚಿತ್ರ ನಿರೂಪಿಸಿ, ಉಪನ್ಯಾಸಕ ಪೂಣಚ್ಚ ವಂದಿಸಿದರು.