ಸುಂಟಿಕೊಪ್ಪ, ಮಾ. ೧೨: ಸುಂಟಿಕೊಪ್ಪದ ಶ್ರೀ ಚಾಮುಂಡಿ ಹಾಗೂ ಮುತ್ತಪ್ಪ ದೇವಸ್ಥಾನ ಗ್ರಾಮ ದೇವತೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವವು ಶೃದ್ಧಾ ಭಕ್ತಿಯಿಂದ ಗ್ರಾಮ ದೇವತೆಯ ಆವರಣದಲ್ಲಿ ನೆರವೇರಿತು. ಗ್ರಾಮ ದೇವತೆಯ ಬನದಲ್ಲಿ ಗ್ರಾಮ ದೇವತೆಗೆ ಬೆಳಿಗ್ಗೆ ೬.೪೦ ರಿಂದ ೭.೩೦ ರವರೆಗೆ ಸ್ಥಳ ಶುದ್ಧಿ ೮.೩೦ಕ್ಕೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ನಂತರ ೯.೪೦ ರಿಂದ ೧೦.೩೦ ರವರೆಗೆ ಹರಕೆ ಸಮರ್ಪಣೆ ಭಕ್ತಾಧಿಗಳು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ಪ್ರಸಾದವನ್ನು ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು.

ಈ ಸಂದರ್ಭ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ವೈ.ಎಂ. ಕರುಂಬಯ್ಯ, ಎಸ್.ಜಿ. ಶ್ರೀನಿವಾಸ್, ಕೆ.ಪಿ. ಜಗನ್ನಾಥ್, ರಮೇಶ್ ಪಿಳ್ಳೆ, ಎ.ಶ್ರೀಧರ್, ಡಾ. ಶಶಿಕಾಂತರೈ, ಪಿ.ಕೆ. ಜಗದೀಶ್ ರೈ, ಪಟ್ಟೆಮನೆ ಉದಯಕುಮಾರ್, ಧನುಕಾವೇರಪ್ಪ ಮತ್ತಿತರರು ಇದ್ದರು.