
ಗೋಣಿಕೊಪ್ಪಲು, ಮಾ. ೧೨: ನರಭಕ್ಷಕ ಹುಲಿ ಸೆರೆಗೆ ಸತತ ಪ್ರಯತ್ನ ನಡೆಸಿದರೂ ವ್ಯಾಘ್ರನ ಸುಳಿವು ಮಾತ್ರ ಕಾರ್ಯಾಚರಣೆ ತಂಡಕ್ಕೆ ಸಿಗುತ್ತಿಲ್ಲ. ಕಾರ್ಯಾಚರಣೆ ತಂಡವು ೬ ತಂಡಗಳಾಗಿ ಹಗಲಿಡೀ ಹುಲಿ ಕಾರ್ಯಾಚರಣೆ ನಡೆಸಿದರೂ ಕಾರ್ಯಾಚರಣೆ ತಂಡಕ್ಕೆ ಕಾಫಿ ತೋಟ, ಅರಣ್ಯ ಪ್ರದೇಶ ಮುಂತಾದ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಸಿಗುತ್ತಿಲ್ಲ..! ಇತ್ತ ಇಂದು ಕೂಡ ಹಸುವೊಂದು ಹುಲಿಗೆ ಬಲಿಯಾದ ಘಟನೆ ನಾಲ್ಕೇರಿಯಲ್ಲಿ ನಡೆÀದಿದೆ. ಸಾರ್ವಜನಿಕರಿಗೆ ಎದುರಾಗುತ್ತಿರುವ ಹುಲಿಯ ದರ್ಶನ ಸಿಬ್ಬಂದಿಗೆ ಮಾತ್ರ ಎದುರಾಗುತ್ತಿಲ್ಲ. (ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಮಾ. ೧೨: ನರಭಕ್ಷಕ ಹುಲಿ ಸೆರೆಗೆ ಸತತ ಪ್ರಯತ್ನ ನಡೆಸಿದರೂ ವ್ಯಾಘ್ರನ ಸುಳಿವು ಮಾತ್ರ ಕಾರ್ಯಾಚರಣೆ ತಂಡಕ್ಕೆ ಸಿಗುತ್ತಿಲ್ಲ. ಕಾರ್ಯಾಚರಣೆ ತಂಡವು ೬ ತಂಡಗಳಾಗಿ ಹಗಲಿಡೀ ಹುಲಿ ಕಾರ್ಯಾಚರಣೆ ನಡೆಸಿದರೂ ಕಾರ್ಯಾಚರಣೆ ತಂಡಕ್ಕೆ ಕಾಫಿ ತೋಟ, ಅರಣ್ಯ ಪ್ರದೇಶ ಮುಂತಾದ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಸಿಗುತ್ತಿಲ್ಲ..! ಇತ್ತ ಇಂದು ಕೂಡ ಹಸುವೊಂದು ಹುಲಿಗೆ ಬಲಿಯಾದ ಘಟನೆ ನಾಲ್ಕೇರಿಯಲ್ಲಿ ನಡೆÀದಿದೆ. ಸಾರ್ವಜನಿಕರಿಗೆ ಎದುರಾಗುತ್ತಿರುವ ಹುಲಿಯ ದರ್ಶನ ಸಿಬ್ಬಂದಿಗೆ ಮಾತ್ರ ಎದುರಾಗುತ್ತಿಲ್ಲ. (ಮೊದಲ ಪುಟದಿಂದ) ನಿನ್ನೆ ದಿನ ಶಾಸಕ ಬೋಯಪ್ಪ ಅವರು ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರಿಂದಾಗಿ ಸಾಕಾನೆಗಳ ಕಾರ್ಯಾಚರಣೆ ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ. ಸಾಕಾನೆಗಳು ಅರಣ್ಯ ಇಲಾಖೆಯ ತಾತ್ಕಾಲಿಕ ಕ್ಯಾಂಪ್ನ ಬಳಿ ಇರುವ ಕೆರೆ ಬಳಿ ವಿಶ್ರಾಂತಿ ಪಡೆಯುತ್ತಿವೆ. ಒಂದು ವೇಳೆ ಹುಲಿಯ ಜಾಡು ದೃಢಪಟ್ಟಲ್ಲಿ ಸಾಕಾನೆಗಳನ್ನು ಬಳಸಿಕೊಳ್ಳಲು ಅಲ್ಲಿಯೇ ಉಳಿಸಿಕೊಂಡಿದ್ದಾರೆ. ಹುಲಿಯ ಜಾಡು ಕಂಡು ಹಿಡಿಯಲು ಕರೆಸಿರುವ ರಾಣಾ ಎಂಬ ಶ್ವಾನವು ತನ್ನ ಕೆಲಸವನ್ನು ಪ್ರತಿನಿತ್ಯ ಮಾಡುತ್ತಿದೆ. ಆದರೆ ಹುಲಿಯ ಸುಳಿವು ಶ್ವಾನಕ್ಕೆ ಸಿಗುತ್ತಿಲ್ಲ.
ನರಭಕ್ಷಕ ಹುಲಿಯು ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದು ಕಾರ್ಯಾಚರಣೆ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ. ಮುಂಜಾನೆ ವೇಳೆಯಲ್ಲಿ ರೈತರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿರುವ ಜಾನುವಾರುಗಳ ಮೇಲೆ ದಾಳಿ ನಡೆಸಿ ಹಸುಗಳನ್ನು ಎಳೆದೊಯ್ದು ತಿನ್ನುತ್ತಿದೆ. ಇದರಿಂದಾಗಿ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ.
