ಮಡಿಕೇರಿ, ಮಾ.೧೨: ಇತ್ತೀಚೆಗೆ ದಕ್ಷ್ಷಿಣ ಕೊಡಗಿನಲ್ಲಿ ಮೂವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಕೊಂದು ತಿಂದುದು ಗಂಡು ಹುಲಿ ಎಂದು ಖಾತರಿಯಾಗಿದೆ. ಅರಣ್ಯ ಇಲಾಖೆ ಸೆರೆ ಹಿಡಿದಿರುವದು ಹೆಣ್ಣು ಹುಲಿಯಾಗಿದ್ದು ಮೈಸೂರು ಮೃಗಾಲಯದಲ್ಲಿರುವ ಈ ಹುಲಿಗೂ ಮಾನವ ಹತ್ಯೆಗೂ ಸಂಬAಧವಿಲ್ಲ ಎನ್ನುವುದು ಖಚಿತವಾಗಿದೆ.ಈ ಕುರಿತಾಗಿ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ ಜೀವಿ) ವಿಜಯಕುಮಾರ್ ಗೋಗಿ ಅವರು ‘ಶಕ್ತಿ’ಗೆ ನೀಡಿದ ಮಾಹಿತಿ ಹೀಗಿದೆ: ಕಳೆದ ಫೆಬ್ರವರಿ ೨೦ ಹಾಗೂ ೨೧ ರಂದು ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಹಾಗೂ ಕುಮಟೂರಿನಲ್ಲಿ ಹುಲಿಗೆ ಬಲಿಯಾದ ಇಬ್ಬರು ಹಾಗೂ ಬಳಿಕ ಮಾ. ೮ ರಂದು ಬೆಳ್ಳೂರಿನಲ್ಲಿ ಬಲಿಯಾದ ಬಾಲಕ ಇವರುಗಳ ಶವದ ಮೇಲಿದ್ದ ಹುಲಿಯ ಕೂದಲುಗಳನ್ನು ಹೈದರಾಬಾದ್‌ನಲ್ಲಿರುವ ‘ಸೆಲ್ಯುಲಾರ್ -ಮಾಲ್ಕುö್ಯಲರ್ ಬಯಾಲಜಿ ಸೆಂಟರ್’ಗೆ ಕಳುಹಿಸಲಾಗಿತ್ತು. ಅಲ್ಲಿನ ಪ್ರಯೋಗಾಲಯದಲ್ಲಿ ಅನುವಂಶಿಕ ಮ್ಯಾಪಿಂಗ್ ಪರೀಕ್ಷೆ ಬಳಿಕ ಈ ಮೂವರನ್ನೂ ಬಲಿ ತೆಗೆದುಕೊಂಡಿರುವದು ಒಂದೇ ಗಂಡು ಹುಲಿ ಎಂದು ಖಾತರಿಗೊಂಡಿದೆ. ಈ ವ್ಯಾಘ್ರ ಕಳೆದ ೨೦೧೩ ರಿಂದಲೇ ಅರಣ್ಯ ಇಲಾಖೆಯ ಸಿ.ಸಿ.ಟಿ.ವಿ ಕ್ಯಾಮರಾಗಳಲ್ಲಿ ಸೆÀರೆಯಾಗಿದೆ. ಈ ಹಿಂದೆ ದಕ್ಷಿಣ ಕೊಡಗಿನ ಅನೇಕ ಕಡೆಗಳಲ್ಲಿ ಹಸುಗಳನ್ನು ಹತ್ಯೆಗೈಯಲಾಗುತ್ತಿತ್ತು. ಆ ಪ್ರದೇಶಗಳಲ್ಲಿರಿಸಿದ ಕ್ಯಾಮರಾಗಳಲ್ಲಿಯೂ ಇದೇ ಗಂಡು ಹುಲಿಯ ಚಿತ್ರ- ವೀಡಿಯೋ ಸೆರೆಯಾಗಿದೆ. ಅದೇ ರೀತಿ ಇತ್ತೀಚೆಗೆ ಕಾರ್ಯಾಚರಣೆಯಲ್ಲಿ ಸೆರೆಯಾದ ಹೆಣ್ಣು ಹುಲಿಯು ಕಳೆದ ೨೦೧೨ ರಿಂದಲೇ ಇಲಾಖಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಅನೇಕ ಹಸು ಹತ್ಯೆ ಪ್ರಕರಣಗಳಲ್ಲಿ ಈ ಹುಲಿಯು ಕೂಡ ಅಲ್ಲಲ್ಲಿ ಇರಿಸಿದ್ದ ಕ್ಯಾಮರಾಗಳಲ್ಲಿ ಕಾಣಿಸಿಕೊಂಡಿದೆ. ಆದರೆ, ಈ ಹುಲಿಯ ರಕ್ತ ಪರೀಕ್ಷೆಯನ್ನೂ ನಡೆಸಲಾಗಿದ್ದು ಮಾನವ ಹತ್ಯೆಯಲ್ಲಿ ಈ ಹೆಣ್ಣು ಹುಲಿಯ ಪಾತ್ರವಿಲ್ಲ ಎಂಬದು ಖಚಿತಗೊಂಡಿದೆ.ಇಂದು ಮತ್ತೆ ಒಂದು ಹಸು ನಾಲ್ಕೇರಿಯಲ್ಲಿ ಹುಲಿಗೆ ಬಲಿಯಾದ ಕುರಿತು ಅರಣ್ಯಾಧಿಕಾರಿಯವರನ್ನು ‘ಶಕ್ತಿ’ ಪ್ರಶ್ನಿಸಿದಾಗ ಇನ್ನೂ ಎರಡು ಹುಲಿಗಳಿರಬಹುದು ಎಂದು ವಿಜಯಕುಮಾರ್ ಗೋಗಿ ಶಂಕೆ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯಿಂದ ಈಗ ಕಾರ್ಯಾಚರಣೆೆ ನಡೆಸುತ್ತಿರುವವರು ಪರಿಣಿತರಿದ್ದಾರೆ.(ಮೊದಲ ಪುಟದಿಂದ) ಈ ಹಿಂದೆ ಬಂಡಿಪುರ ವಿಭಾಗದಲ್ಲಿಯೂ ಅನೇಕ ಹುಲಿಗಳನ್ನು ಈ ತಂಡದವರು ಹಿಡಿದಿದ್ದಾರೆ. ಸದ್ಯದಲ್ಲಿಯೇ ಹುಲಿ ಸೆರೆಯಾಗುವ ವಿಶ್ವ್ವಾಸ ತಮಗಿದ್ದು ಇಡೀ ಅರಣ್ಯ ಇಲಾಖೆ ಸ್ಥಳೀಯ ಜನರೊಂದಿಗಿರುತ್ತದೆ ; ಜನತೆಯ ಸಹಕಾರವೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.