ವೀರಾಜಪೇಟೆ,ಮಾ.೮: ಪತಿ ಮತ್ತು ಪತ್ನಿಯರಲ್ಲಿ ಹೊಂದಾಣಿಕೆಯ ಕೊರತೆ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತಿದ್ದ ಪತಿಯ ಮೇಲೆ ಪತ್ನಿ ದೂರು ನೀಡಿದ್ದಾಳೆ.
ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಮೊಹಮ್ಮದ್ ಸಫೀಕ್ (೪೦) ವೀರಾಜಪೇಟೆ ನಗರದ ಎಸ್.ಕೆ.ಖಲೀಲ್ ಅಹಮ್ಮದ್ ಅವರ ದ್ವಿತೀಯ ಪುತ್ರಿ ಎಸ್.ಕೆ.ಆಸ್ಬೀಯ (೨೭) ಎಂಬಾಕೆಯನ್ನು ೨೦೧೨ರಲ್ಲಿ ವಿವಾಹವಾಗಿದ್ದ ಸಫೀಕ್ ದುಬೈನಲ್ಲಿ ೨೦ ವರ್ಷಗಳಿಂದ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ. ನಂತರದಲ್ಲಿ ಇತ್ತೀಚೆಗೆ ತನ್ನ ಸ್ವಗೃಹಕ್ಕೆ ಆಗಮಿಸಿ ದುಬೈಗೆ ಹಿಂದಿರುಗದೆ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಫೀಕ್ ಮತ್ತು ಆತನ ತಾಯಿ ತನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಹೊರಗೆ ಹೋಗದಂತೆ ಮತ್ತು ದೂರವಾಣಿ ಸಂಪರ್ಕ ಕಡಿತಗೊಳಿಸಿ ಮನೆಯಲ್ಲಿ ಬಂಧಿಯಾಗುವAತೆ ವರ್ತಿಸಿದ್ದಾರೆ ಹಾಗಾಗಿ ಆಸ್ಬೀಯ ತನ್ನ ಇಬ್ಬರು ಮಕ್ಕಳೊಂದಿಗೆ ವೀರಾಜಪೇಟೆ ಸಿಲ್ವನಗರದಲ್ಲಿರುವ ಅಕ್ಕನ ಮನೆಗೆ ಬಂದು ತಂಗಿದ್ದಾಳೆ.
ತಾ.೭ ರಂದು ರಾತ್ರಿ ಏಕಾಏಕಿಯಾಗಿ ಮನೆಗೆ ಆಗಮಿಸಿದ ಸಫೀಕ್ ಆಸ್ಬೀಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಸ್ಬೀಯ ವೀರಾಜಪೇಟೆ ನಗರ ಠಾಣೆಯಲ್ಲಿ ತನ್ನ ಪತಿ ಮೊಹಮ್ಮದ್ ಸಫೀಕ್ನ ಮೇಲೆ ಮಾನಸಿಕ ಕಿರುಕುಳ ಮತ್ತು ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾಳೆ. ೪೯೮,೩೨೩ ಐ.ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕೆ.ಕೆ.ಎಸ್