ನಾಪೋಕ್ಲು, ಮಾ. ೯: ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್‌ಗಳ ಸೇವೆ ಪುನರಾರಂಭಗೊAಡಿದೆ. ಬೆಂಗಳೂರಿನಿAದ ರಾತ್ರಿ ೧೦.೩೦ಕ್ಕೆ ಹೊರಡುವ ರಾಜಹಂಸ ಬಸ್ ಬೆಳಿಗ್ಗೆ ೪.೩೦ಕ್ಕೆ ನಾಪೋಕ್ಲು ತಲುಪಲಿದೆ. ನಾಪೋಕ್ಲುವಿನಿಂದ ೮.೩೦ಕ್ಕೆ ಹೊರಡುವ ರಾಜಹಂಸ ಬಸ್ ಬೆಂಗಳೂರಿಗೆ ಹಿಂತಿರುಗಲಿದೆ.

ನೂತನವಾಗಿ ಕೆ.ಎಸ್‌ಆರ್ ಟಿಸಿಯಿಂದ ನಾಪೋಕು ್ಲವಿಗೆ ಓಲ್ವೋ ಬಸ್ ಸಂಚಾರ ಆರಂಭಿಸಲಾಗಿದೆ. ಈ ಬಸ್ ಬೆಂಗಳೂರಿನಿAದ ಮಧ್ಯಾಹ್ನ ಒಂದು ಗಂಟೆಗೆ ಹೊರಟು ವೀರಾಜಪೇಟೆ ಮಾರ್ಗವಾಗಿ ೭.೩೦ ಕ್ಕೆ ನಾಪೋಕ್ಲು ತಲುಪಲಿದೆ. ಇದೇ ಬಸ್ ರಾತ್ರಿ ೧೦ ಗಂಟೆಗೆ ನಾಪೋಕ್ಲಿನಿಂದ ಹೊರಟು ವೀರಾಜಪೇಟೆ ಮೂಲಕವಾಗಿ ಬೆಂಗಳೂರು ತಲುಪಲಿದೆ. ನಾಪೋಕ್ಲುವಿಗೆ ಬಸ್ ಸೌಲಭ್ಯ ಕಲ್ಪಿಸಿರುವ ಬಗ್ಗೆ ಹಾಕಿ ಕರ್ನಾಟಕದ ಉಪಾಧ್ಯಕ್ಷ ಅರೆಯಡ ಪವಿನ್ ಪೊನ್ನಣ್ಣ ಕೆಎಸ್‌ಆರ್‌ಟಿಸಿ ಸಂಸ್ಥೆಯ ಅಧ್ಯಕ್ಷ ಚಂದ್ರಪ್ಪ ಅವರ ಕೃತಜ್ಞತೆ ಕಾರ್ಯವನ್ನು ಶ್ಲಾಘಿಸಿದ್ದಾರೆ.