ಮಡಿಕೇರಿ, ಮಾ. ೯: ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಹುಲಿ ದಾಳಿ ಪ್ರಕರಣದಿಂದ ಜೀವಗಳು ಬಲಿಯಾಗುತ್ತಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯೆ ಶೂನ್ಯವೇಳೆಯಲ್ಲಿ ಮೇಲ್ಮನೆಯಲ್ಲಿ ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿ ಅಧಿಕವಾಗಿದ್ದು, ೧೫ ದಿನಗಳ ಅಂತರದಲ್ಲಿ ೩ ಜನರ ಜೀವವನ್ನು ಹುಲಿ ಬಲಿ ತೆಗೆದುಕೊಂಡಿದೆ. ಜೊತೆಗೆ ನೂರಾರೂ ಜಾನುವಾರುಗಳನ್ನು ಕೊಂದು ಹಾಕಿದೆ. ಇದರ ಪರಿಣಾಮ ಜಿಲ್ಲೆಯ ಜನ ಹೊರಬರಲು ಭಯಭೀತರಾಗಿದ್ದಾರೆ. ಇದನ್ನು ಅರಿತು ಸರಕಾರ ಸೂಕ್ತ ಕ್ರಮವಹಿಸಬೇಕೆಂದು ಅರಣ್ಯ ಸಚಿವರ ಮೂಲಕ ಸರಕಾರವನ್ನು ಒತ್ತಾಯಿಸಿದರು.