ವೀರಾಜಪೇಟೆ: ಯೌವನದಲ್ಲಿ ಕಲಿತ ಕ್ರೀಡೆಗಳು ಅಜರಾಮರ ವಾಗಿರುತ್ತವೆ. ದೈಹಿಕ ಬಲದಿಂದ ಕ್ರೀಡೆಯಲ್ಲಿ ಭಾಗವಹಿಸಲು ಮನಸ್ಸು ಮುಖ್ಯ. ಎಂದು ಅಂತರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಅಭಿಮತ ವ್ಯಕ್ತಪಡಿಸಿದರು.
ವೀರಾಜಪೇಟೆ ನಗರದ ಮೀನುಪೇಟೆಯ ‘ಕೌ ಬಾಯ್ಸ್ ಕ್ರಿಕೆಟ್ ಕ್ಲಬ್’ ಆಶ್ರಯದಲ್ಲಿ ಲೆಜೆಂಡ್ಸ್ ಕಪ್ ೨೦೨೧ ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ಬಿಡ್ ಮೂಲಕ ಚಾಲನೆ ನೀಡಲಾಯಿತು. ಪೆರುಂಬಾಡಿ ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಜರುಗಿದ ಕ್ರಿಕೆಟ್ ಲೀಗ್‌ನ ಬಿಡ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ತಿಮ್ಮಯ್ಯ ಅವರು ಹಿರಿಯರಾಗಿದ್ದು ಈ ಹಿಂದೆ ಬಾಲ್ಯದಲ್ಲಿ ಕಲಿತ ಕ್ರೀಡೆಗಳು ಎಂದಿಗೂ ಶಾಶ್ವತವಾಗಿರುತ್ತದೆ. ಹಿರಿಯರೆಂದು ಸಂಕೋಚವನ್ನು ಬಿಟ್ಟು ತಮಗಾಗಿ ಆಯೋಜಿಸಲಾದ ಕ್ರಿಕೆಟ್ ಉತ್ಸವದಲ್ಲಿ ಭಾಗಿ ಯಾಗಿ ಕಲಿತ ಕೀಡೆಗೆ ಮರು ಜೀವ ನೀಡಿ ಎಂದು ಹಿರಿಯರ ಕ್ರಿಕೆಟ್ ಪಂದ್ಯಾಟದ ಕ್ರೀಡಾಪಟುಗಳಿಗೆ ಉತ್ತೇಜನ ತುಂಬಿದರು.
ಶಿಕ್ಷಕ ಹಾಗೂ ಹಿರಿಯ ಕ್ರಿಕೆಟ್ ಕ್ರೀಡಾಪಟು ಸುದೇಶ್ ಅವರು ಮಾತನಾಡಿ ಆಯೋಜಿಸಲಾಗುತ್ತಿರುವ ಹಿರಿಯರ ಕ್ರಿಕೆಟ್ ಲೀಗ್ ವೀರಾಜಪೇಟೆ ಇತಿಹಾಸದಲ್ಲಿ ಹೊಸ ಪ್ರಯೋಗವಾಗಿದೆ. ಪ್ರಸ್ತುತವಾಗಿ ಆಯೋಜಿಸುತ್ತಿರುವ ಹಿರಿಯರ ಕ್ರಿಕೆಟ್ ಪಂದ್ಯಾಟವು ಮುಂದೆಯೂ ನಡೆಯಬೇಕು ಎಂದರು.
ಹಿರಿಯ ಕ್ರೀಡಾಪಟುಗಳಾದ ಅಲ್ತಾಫ್, ಕಿರಣ್ ಕುಮಾರ್, ಹೆಚ್.ಎಂ ಆನಂದ ಎಸ್.ಬಿ.ಐ. ಉದ್ಯಮಿ ಶ್ರೀಕಾಂತ್ ಶೆಟ್ಟಿ, ರಿಶೇಪ್ ಫಿಟ್ನೆಸ್‌ನ ಮಾಲೀಕರಾದ ಸಂಪತ್, ರಾಜಕಾರಣಿ ಆರ್.ಕೆ. ಅಬ್ದುಲ್ ಸಲಾಂ, ಆರ್.ಎಸ್.ಎಲ್ ನ ಮಾಲೀಕರಾದ ರಶೀಧ್ ಮತ್ತು ಶಂಷೀರ್ ಉಪಸ್ಥಿತರಿದ್ದರು.
ತಾ. ೧೯, ೨೦, ೨೧ ರಂದು ಮೂರು ದಿನ ಕಾಲ ನಗರದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ನಡೆಯುವ ಹಿರಿಯರ ಕ್ರಿಕೆಟ್ ಲೆಜೆಂಡ್ಸ್ ಕಪ್ ೨೦೨೧ ನಲ್ಲಿ ಒಟ್ಟು ೧೨ ತಂಡಗಳು ಭಾಗವಹಿಸುತ್ತವೆ. ಅಭಿಮನ್ಯು ಕ್ರಿಕೆರ‍್ಸ್, ಸಿಟಿ ಸ್ಟಾರ್, ಆರ್.ಇ.ಎಫ್ ಕ್ರಿಕೆರ‍್ಸ್, ಕಲ್ಲು ಸ್ಟಾರ್, ರೈಸಿಂಗ್ ಸ್ಟಾರ್, ಚಾಲೆಂರ‍್ಸ್, ಬೂಂ ಇಲೆವನ್, ಕ್ರೌನ್ಸ್ ಕ್ರಿಕೆರ‍್ಸ್ , ಸಿ.ಡಿ. ಗ್ರೂಪ್, ಎಂ.ವೈ.ಸಿ.ಸಿ, ತ್ರೀ ಸ್ಟಾರ್ ಮತ್ತು ಲಾಂಪ್ರೀಡ್ ತಂಡಗಳು ಭಾಗವಹಿಸಲಿವೆ.