ಸೋಮವಾರಪೇಟೆ: ಇಲ್ಲಿನ ಮೊಗೇರ ಯುವ ವೇದಿಕೆ ವತಿಯಿಂದ ಏಪ್ರಿಲ್ ೧೭ ಮತ್ತು ೧೮ರಂದು ಪ್ರಥಮ ವರ್ಷದ ಕ್ರೀಡಾಕೂಟ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಪಿ.ಕೆ.ಚಂದ್ರು ತಿಳಿಸಿದ್ದಾರೆ.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಒಳನಾಡು ಸಾರಿಗೆ, ಬಂದರು ಹಾಗೂ ಮೀನುಗಾರಿಕಾ ಇಲಾಖಾ ಸಚಿವ ಎಸ್. ಅಂಗಾರ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರುಗಳು ಉದ್ಘಾಟಿಸಲಿದ್ದಾರೆ.
ಜನಾಂಗ ಬಾಂಧವರಿಗಾಗಿ ಕ್ರೀಡಾಕೂಟ ಆಯೋಜಿಸಿದ್ದು, ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಥ್ರೋಬಾಲ್, ಪುರುಷ ಹಾಗೂ ಮಹಿಳಾ ತಂಡಗಳಿಗೆ ಪ್ರತ್ಯೇಕವಾಗಿ ಹಗ್ಗ-ಜಗ್ಗಾಟ ಪಂದ್ಯಾಟವನ್ನು ಏರ್ಪಡಿಸಲಾಗಿದೆ.
ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. ೨೧ ಸಾವಿರ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ ರೂ. ೧೧ ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಥ್ರೋಬಾಲ್ ಪಂದ್ಯಾಟದ ವಿಜೇತರಾಗುವ ತಂಡಕ್ಕೆ ಪ್ರಥಮ ಬಹುಮಾನ ರೂ. ೩ ಸಾವಿರ, ದ್ವಿತೀಯ ರೂ. ೨ ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ, ಹಗ್ಗ-ಜಗ್ಗಾಟದಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ. ೩ ಸಾವಿರ, ದ್ವಿತೀಯ ರೂ. ೨ ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು.
ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜನಾಂಗ ಬಾಂಧವರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ತಂಡಗಳ ಹೆಸರು ನೋಂದಾವಣೆ ಸೇರಿದಂತೆ ಹೆಚ್ಚಿನ ವಿವರಗಳಿಗೆ ಕ್ರೀಡಾಕೂಟ ಸಂಘಟಕರುಗಳಾದ ಪಿ.ಕೆ. ಚಂದ್ರು, ಪಿ.ಬಿ. ಸುರೇಶ್, ಎಂ. ವೆಂಕಪ್ಪ, ಪ್ರವೀಣ್ ಹಾಗೂ ವಿನೋದ್ (ಮೊ.ಸಂ: ೯೬೮೬೦೧೫೭೮೭, ೯೯೬೪೯೯೬೭೭೯, ೯೧೦೮೦೯೨೮೦೭) ಅವರುಗಳನ್ನು ಸಂಪರ್ಕಿಸಬಹು ದಾಗಿದೆ.