ಕೂಡಿಗೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆಯುತ್ತಿರುವ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಯ ಐದು ವಿದ್ಯಾರ್ಥಿನಿಯರು ೧೧ ನೇ ರಾಷ್ಟಿçÃಯ ಕಿರಿಯರ ವಿಭಾಗದ ರಾಷ್ಟಿçÃಯ ಮಹಿಳಾ ಚಾಂಪಿಯನ್ ಶಿಪ್ ೨೦೨೧ರ ಸಾಲಿನ ಹಾಕಿ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ರಾಷ್ಟಿçÃಯ ಹಾಕಿ ಪಂದ್ಯಾವಳಿಯು ಜಾರ್ಖಂಡ್ ರಾಜ್ಯದಲ್ಲಿ ನಡೆಯಲ್ಲಿದ್ದು, ಈ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಪರವಾಗಿ ಆಡಲಿದ್ದಾರೆ. ತಾ. ೧೦ ರಿಂದ ರಾಷ್ಟಿçÃಯ ಮಟ್ಟದಲ್ಲಿ ಹಾಕಿ ಪಂದ್ಯಾಟವು ಆರಂಭವಾಗಲಿದೆ. ರಾಷ್ಟಿçÃಯ ಮಹಿಳಾ ಹಾಕಿ ಚಾಂಪಿಯನ್ ಶಿಪ್ ಕಿರಿಯ ವಿಭಾಗಕ್ಕೆ ಕೂಡಿಗೆ ಕ್ರೀಡಾ ಶಾಲೆಯ ತಾಜಾ ಬೆಳ್ಳಿಯಪ್ಪ, ಕೌಶಲ್ಯ, ತಾಮ್ಯ ಬೆಳ್ಳಿಯಪ್ಪ, ಅನನ್ಯ, ಬೊಳ್ಳಮ್ಮ ರಾಜ್ಯ ತಂಡದಿAದ ಆಯ್ಕೆಗೊಂಡು ಈಗಾಗಲೇ ಜಾರ್ಖಂಡ್ಗೆ ತಲುಪಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಹಾಕಿ ತರಬೇತಿಯನ್ನು ಕೂಡಿಗೆ ಹಾಕಿ ತರಬೇತುದಾರರಾದ ವೆಂಕಟೇಶ ತರಬೇತಿಯನ್ನು ನೀಡಿರುತ್ತಾರೆ.
ನಾಪೋಕ್ಲು: ಮೂರ್ನಾಡು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಕಾಂತೂರು ಭಗವತಿ ಯುವಕ ಸಂಘದ ವತಿಯಿಂದ ಏರ್ಪಡಿಸ ಲಾಗಿದ್ದ ಅಂತರ ಗ್ರಾಮ ಕ್ರೀಡಾಕೂಟದಲ್ಲಿ ಬಾಡಗ ಗ್ರಾಮ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು.
ಕಿಗ್ಗಾಲು ಗ್ರಾಮ ತಂಡ ರನ್ರ್ಸ್ ಪ್ರಶಸ್ತಿಗೆ ಭಾಜನವಾಯಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಾಡಗ ಗ್ರಾಮ ತಂಡ ಪ್ರಥಮ ಸ್ಥಾನ ಪಡೆದರೆ, ಕಿಗ್ಗಾಲು ಗ್ರಾಮ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಿಗ್ಗಾಲು ಗ್ರಾಮ ತಂಡ ಪ್ರಥಮ ಸ್ಥಾನ, ಕಾಂತೂರು ಗ್ರಾಮ ತಂಡ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್ ಸ್ಪರ್ಧೆಯಲ್ಲಿ ಕಾಂತೂರು ಗ್ರಾಮ ತಂಡ ಪ್ರಶಸ್ತಿ ಪಡೆದುಕೊಂಡರೆ ದ್ವಿತೀಯ ಸ್ಥಾನ ಐಕೊಳ ಗ್ರಾಮ ತಂಡದ ಪಾಲಾಯಿತು. ಕ್ರೀಡಾಕೂಟವನ್ನು ಹಾಕಿ ಆಟಗಾರ ಬೊಳ್ತಜ್ಜೀರ ಎ. ಅಶೋಕ್ ಉದ್ಘಾಟಿಸಿದರು. ಭಗವತಿ ಯುವಕ ಸಂಘದ ಅಧ್ಯಕ್ಷ ಪಳಂಗAಡ ಯು. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂರ್ನಾಡು ಸಹಕಾರ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಪಳಂಗAಡ ಅಪ್ಪಣ್ಣ, ಕಾಫಿ ಬೆಳೆಗಾರ ಪಳಂಗAಡ ಪ್ರಕಾಶ್ ಪೊನ್ನಪ್ಪ, ನಿವೃತ್ತ ಶಿಕ್ಷಕಿ ಬಾಚೆಟ್ಟೀರ ಕಮಲು ಮುದ್ದಯ್ಯ ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಹಾಗೂ ಭಗವತಿ ಯುವಕ ಸಂಘದ ಪದಾಧಿಕಾರಿಗಳು ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು. ಭಾರತ ಜ್ಯೂನಿಯರ್ ಹಾಕಿ ತಂಡದ ತರಬೇತುದಾರ ಬೊಳ್ಳೆಪಂಡ ಜೆ. ಕಾರ್ಯಪ್ಪ, ಮೂರ್ನಾಡು ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಕಂಬೀರAಡ ಕೆ. ಬೋಪಣ್ಣ ಪಾಲ್ಗೊಂಡಿದ್ದರು. ಕಾಂತೂರು ಭಗವತಿ ಯುವಕ ಸಂಘದ ಅಧ್ಯಕ್ಷ ಪಳಂಗAಡ ಯು. ಗಣೇಶ್, ಕಾರ್ಯದರ್ಶಿ ಅವರೆಮಾದಂಡ ಜಿ.ಪೂವಯ್ಯ, ಖಜಾಂಚಿ ಅವರೆಮಾದಂಡ ಪಚ್ಚು ಕುಶಾಲಪ್ಪ ಸೇರಿದಂತೆ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.