ಕುಶಾಲನಗರ, ಮಾ.೮: ರಾಜ್ಯ ಮಟ್ಟದ ಅಂಡರ್ ೧೫ ಲೆದರ್ ಬಾಲ್ ಟೂರ್ನಮೆಂಟ್‌ನಲ್ಲಿ ಚನ್ನರಾಯ ಪಟ್ಟಣ ತಂಡ ಐಎನ್‌ಎಸ್ ಕಪ್ ತನ್ನದಾಗಿಸಿಕೊಂಡಿತು. ಮಂಡ್ಯ ತಂಡ ರನ್ನರ್ಸ್ ಅಪ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು.

ಕುಶಾಲನಗರ ಸಮೀಪದ ಗುಡ್ಡೆಹೊಸೂರು ಐಎನ್‌ಎಸ್ (ಐಚೆಟ್ಟೀರ ನರೇನ್ ಸುಬ್ಬಯ್ಯ) ಸ್ಪೋರ್ಟ್ಸ್ ಕೇಂದ್ರದಲ್ಲಿ ಮಡಿಕೇರಿ ರೋಟರಿ ಮಿಸ್ಟ್ಹಿಲ್ಸ್ ಮತ್ತು ಐಎನ್‌ಎಸ್ ಸ್ಪೋರ್ಟ್ಸ್ ಸೆಂಟರ್ ಪ್ರಾಯೋಜಕತ್ವದಲ್ಲಿ ಮೂರು ವಾರಾಂತ್ಯದ ಕಾಲ ನಡೆದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಾಜ್ಯದ ೮ ತಂಡಗಳು ಪಾಲ್ಗೊಂಡು ಕುಶಾಲನಗರ, ಮಾ.೮: ರಾಜ್ಯ ಮಟ್ಟದ ಅಂಡರ್ ೧೫ ಲೆದರ್ ಬಾಲ್ ಟೂರ್ನಮೆಂಟ್‌ನಲ್ಲಿ ಚನ್ನರಾಯ ಪಟ್ಟಣ ತಂಡ ಐಎನ್‌ಎಸ್ ಕಪ್ ತನ್ನದಾಗಿಸಿಕೊಂಡಿತು. ಮಂಡ್ಯ ತಂಡ ರನ್ನರ್ಸ್ ಅಪ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು.

ಕುಶಾಲನಗರ ಸಮೀಪದ ಗುಡ್ಡೆಹೊಸೂರು ಐಎನ್‌ಎಸ್ (ಐಚೆಟ್ಟೀರ ನರೇನ್ ಸುಬ್ಬಯ್ಯ) ಸ್ಪೋರ್ಟ್ಸ್ ಕೇಂದ್ರದಲ್ಲಿ ಮಡಿಕೇರಿ ರೋಟರಿ ಮಿಸ್ಟ್ಹಿಲ್ಸ್ ಮತ್ತು ಐಎನ್‌ಎಸ್ ಸ್ಪೋರ್ಟ್ಸ್ ಸೆಂಟರ್ ಪ್ರಾಯೋಜಕತ್ವದಲ್ಲಿ ಮೂರು ವಾರಾಂತ್ಯದ ಕಾಲ ನಡೆದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಾಜ್ಯದ ೮ ತಂಡಗಳು ಪಾಲ್ಗೊಂಡು ಭಾಗವಹಿಸಿದ್ದವು. ಮಡಿಕೇರಿ ರೋಟರಿ ಮಿಸ್ಟ್ಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಕ್ಲೀನ್ ಕೂರ್ಗ್ ಇನಿಶೀಯೇಟಿವ್ ಸಂಚಾಲಕ ಅರುಣ್ ಅಪ್ಪಚ್ಚು ಅವರುಗಳು ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.

ರೋಟರಿ ಮಿಸ್ಟ್ಹಿಲ್ಸ್ನ ಅಧ್ಯಕ್ಷ ಸಂದೀಪ್, ಐಎನ್‌ಎಸ್ ಕೇಂದ್ರದ ಐಚೆಟ್ಟೀರ ರವಿ ಸೋಮಯ್ಯ, ಪೊನ್ನಪ್ಪ, ಕಾಮಿನಿ ಸೋಮಯ್ಯ, ಸುಭಾಶಿನಿ ಪೊನ್ನಪ್ಪ ಸೇರಿದಂತೆ ರೋಟರಿ ಪ್ರಮುಖರು ಇದ್ದರು. ಅಂಪೈರ್ ಆಗಿ ಹೇಮಂತ್ ಮತ್ತು ಯತಾರ್ಥ್ ಕಾರ್ಯ ನಿರ್ವಹಿಸಿದರು.