ಓಂಕಾರೇಶ್ವರದಲ್ಲಿ ರುದ್ರ ಹೋಮ
ಮಡಿಕೇರಿ, ಮಾ. ೯: ಮಹಾಶಿವರಾತ್ರಿ ಪ್ರಯುಕ್ತ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ತಾ. ೧೧ರಂದು ಶ್ರೀ ರುದ್ರ ಹೋಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ಕ್ಕೆ ರುದ್ರ ಹೋಮ ಪ್ರಾರಂಭವಾಗಲಿದ್ದು, ೧೨ ಗಂಟೆಗೆ ಪೂರ್ಣಾಹುತಿ, ೧೨.೩೦ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಇದರಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ ದೇವಸ್ಥಾನದಲ್ಲಿ ನಾಲ್ಕು ಜಾವದ ಪೂಜೆ ನೆರವೇರಲಿದೆ ಎಂದು ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ಅವರು ತಿಳಿಸಿದ್ದಾರೆ.
ನಾಪೋಕು : ಸಮೀಪದ ಕೊಳಕೇರಿ ಗ್ರಾಮದ ಬಿದ್ದಾಟಂಡ ವಾಡೆ ಬಳಿ ಇರುವ ಶ್ರೀಮಹಾದೇವ ಕೋಟ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೧ ರಂದು ಗುರುವಾರ ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ರುದ್ರಾಭಿಷೇಕ, ಮಹಾಪೂಜೆ ಜರುಗಲಿದೆ.
ಹುದುಗೂರು ಶಿವರಾತ್ರಿ ಹಬ್ಬ ಆಚರಣೆ
ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಶಿವರಾತ್ರಿ ಹಬ್ಬದ ಕಾರ್ಯಕ್ರಮವಾಗಿ ತಾ. ೧೧ ರಂದು ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಅಲ್ಲದೆ ಶ್ರೀ ಉಮಾಮಹೇಶ್ವರ ಮೂರ್ತಿಯ ಮೆರವಣಿಗೆಯು ದೇವಾಲಯದ ಆವರಣದಲ್ಲಿ ನೆರವೇರಲಿದೆ. ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ ತಿಳಿಸಿದ್ದಾರೆ.
ತಾ. ೧೧ ರಂದು ಮಹಾಶಿವರಾತ್ರಿ ಉತ್ಸವ
ವೀರಾಜಪೇಟೆ : ಮಗ್ಗುಲ ಗ್ರಾಮದ ನವಗ್ರಹ ಮತ್ತು ಶನೀಶ್ವರ ದೇವಾಲಯದಲ್ಲಿ ತಾ. ೧೧ ರಂದು ಮಹಾಶಿವರಾತ್ರಿ ಉತ್ಸವವನ್ನು ಏರ್ಪಡಿಸಲಾಗಿದೆ.
ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಅಂದು ಬೆಳಿಗ್ಗೆ ಗಣಪತಿ ಹೋಮ, ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳು, ನವಗ್ರಹ ಮತ್ತು ಶನೀಶ್ವರನಿಗೆ ವಿವಿಧ ರೀತಿಯ ಅಭಿಷೇಕಗಳು ಜರುಗಲಿವೆ. ಅಪರಾಹ್ನ ೧೨.೩೦ ಗಂಟೆಗೆ ಮಹಾಪೂಜಾ ಸೇವೆ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಚೋಕಂಡ ರಮೇಶ್ ತಿಳಿಸಿದ್ದಾರೆ.
ಚೆಟ್ಟಳ್ಳಿಯಲ್ಲಿ ಶಿವರಾತ್ರಿ ಪೂಜೆ
*ಸಿದ್ದಾಪುರ : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೧ ರಂದು ಶ್ರೀ ಪಶುಪತಿನಾಥ, ಶ್ರೀಕಾವೇರಿ ಮಾತೆ, ಶ್ರೀ ಆಂಜನೇಯ, ಶ್ರೀ ವಿನಾಯಕ ಹಾಗೂ ಶ್ರೀಮಹಾವಿಷ್ಣು ಮೂರ್ತಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿ, ಶ್ರೀ ವೀರಾಂಜನೇಯ ಯುವಕ ಸಂಘ ಹಾಗೂ ಕೂಡ್ಲೂರು ಶ್ರೀವಿನಾಯಕ ದೇವಾಲಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಗುಣವಂತೇಶ್ವರ ಭಟ್ ಅವರ ನೇತೃತ್ವದಲ್ಲಿ ಸಂಜೆ ೬ ಗಂಟೆಗೆ ಮಹಾಮಂಗಳಾರತಿ ಮತ್ತು ದೀಪಾರಾಧನೆ ಜರುಗಲಿದೆ. ೭ ಗಂಟೆಗೆ ಮಡಿಕೇರಿಯ ಮಂಜುಳಾ ಆರ್. ಭಟ್ ತಂಡದಿAದ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ೯ ಗಂಟೆಗೆ ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆಯಾಗಲಿದೆ.
ಮಡಿಕೇರಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಡಿಕೇರಿಯ ಮಹದೇವಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಶಿವ ಮತ್ತು ನಂದೀಶ್ವರ ಸ್ವಾಮಿಗೆ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ನಿರಂತರ ರುದ್ರಾಭಿಷೇಕ ಸಾಯಂಕಾಲ ೫ ಗಂಟೆಯಿAದ ರಾತ್ರಿ ೮ ಗಂಟೆಯವರೆಗೆ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಸೇವೆ ಮತ್ತು ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿವೆ.
ಶಿವರಾತ್ರಿ ಆಚರಣೆ
ಮಡಿಕೇರಿ: ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ತಾ. ೧೧ ರಂದು ಬೆಳಿಗ್ಗೆಯಿಂದ ರುದ್ರಾಭಿಷೇಕ ಮತ್ತು ಮಧ್ಯಾಹ್ನ ೧೨ ಗಂಟೆಗೆ ಮೃತ್ಯುಂಜಯ ಹೋಮ ಹಾಗೂ ಸಾಯಂಕಾಲ ೬ ಗಂಟೆಗೆ ವೀರಾಜಪೇಟೆ ವಿವೇಕ ಸ್ನೇಹ ಬಳಗದವರಿಂದ ಸತ್ಸಂಗ ಏರ್ಪಡಿಸಲಾಗಿದೆ.
ಆದೇಶ ಪಾಲನೆಗೆ ಮನವಿ
ಗೋಣಿಕೊಪ್ಪ: ಜಿಲ್ಲಾಧಿಕಾರಿಯವರ ಆದೇಶದಂತೆ ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಜಾತ್ರಾಪ್ರಯುಕ್ತ ಜನಜಂಗುಳಿ ಸೇರುವುದನ್ನು ನಿರ್ಬಂಧಿಸಿದೆ. ಜಾತ್ರೆಗೆ ಹೊರಗಿನ ಭಕ್ತರು ಆಗಮಿಸಬಾರದೆಂದು ಮನವಿ ಮಾಡಲಾಗಿದೆ. ಸ್ಥಳೀಯ ಭಕ್ತರು ಕೋವಿಡ್ - ೧೯ ನಿಯಮಾವಳಿಗಳನ್ನು ಅನುಸರಿಸುತ್ತಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸಬೇಕೆಂದು ಆಡಳಿತ ಮಂಡಳಿ ಅಧ್ಯಕ್ಷ ಎಂ.ಪಿ. ವಿಷ್ಣು ಕೋರಿದ್ದಾರೆ.
ಶಿವರಾತ್ರಿ ಹಬ್ಬದ ವಿಶೇಷ ಪೂಜೆ
ಮಡಿಕೇರಿ: ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವನಿಗೆ ಬೆಳಿಗ್ಗೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಬಸ್ಮಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯುತ್ತದೆ. ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಬೆಳಿಗ್ಗೆ ೮ ಗಂಟೆಯಿAದ ೧೦ರವರೆಗೆ ನಡೆಯಲಿದೆ. ಕೋವಿಡ್ ನಿಯಮ ದಂತೆ ಮಾಸ್ಕ್ ಧರಿಸಿ ಅಂತರ ಪಾಲಿಸಬೇಕಾಗಿ ಆಡಳಿತ ಮಂಡಳಿ ಯವರು ಕೋರಿದ್ದಾರೆ.