*ಸಿದ್ದಾಪುರ, ಮಾ. ೯: ಬೀಟಿ ಮರದ ದಿಮ್ಮಿಗಳು ತುಂಬಿರುವ ಲಾರಿಯೊಂದನ್ನು ಚಾಲಕ ಸೇತುವೆ ಮಧ್ಯೆ ನಿಲ್ಲಿಸಿ ಹೋಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಪ್ರಸಂಗ ಅಭ್ಯತ್‌ಮಂಗಲ ಬಳಿಯ ಒಂಟಿಯAಗಡಿಯಲ್ಲಿ ಎದುರಾಗಿದೆ.

ಮೂರು ರಸ್ತೆಗಳು ಸೇರುವ ಒಂಟಿಯAಗಡಿಯಲ್ಲಿ ನಿರ್ಮಿಸಲಾಗಿರುವ ನೂತನ ಸೇತುವೆ ಮಧ್ಯದಲ್ಲಿ ನಿನ್ನೆ ರಾತ್ರಿ ೧೨ ಚಕ್ರದ, ಬೀಟಿ ಮರಗಳನ್ನು ತುಂಬಿಕೊAಡಿರುವ ಲಾರಿಯನ್ನು (ಕೆ.ಎ. ೫೧. ಸಿ. ೯೩೦೪) ನಿಲ್ಲಿಸಲಾಗಿದೆ. ಇಂದು ರಾತ್ರಿಯಾದರೂ ಲಾರಿಯ ಚಾಲಕ, ಮಾಲೀಕರ ಸುಳಿವಿಲ್ಲ. ಲಾರಿ ರಸ್ತೆ ಮಧ್ಯದಲ್ಲಿ ಇರುವದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ಲಾರಿಯನ್ನು ಮಾರ್ಗ ಮಧ್ಯೆ ಬಿಟ್ಟು ಹೋಗಿರುವ ಬಗ್ಗೆ ಗ್ರಾಮಸ್ಥರಲ್ಲಿ ಸಂಶಯ ವ್ಯಕ್ತಗೊಂಡಿದ್ದು, ಪೊಲೀಸರು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

- ಸುಧಿ