ವೀರಾಜಪೇಟೆ, ಮಾ. ೮: ಸುಭದ್ರ ನಾಡು ಕಟ್ಟಲು ಭಾಷೆಗಳಿಂದ ಮಾತ್ರ ಸಾಧ್ಯ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದ್ದಾರೆ. ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಬಳಗ ಏರ್ಪಡಿಸಿದ್ದ ನುಡಿಸೌರಭ-೨೦೨೧ನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ‘ಯುವಜನತೆಯಲ್ಲಿ ಸಾಹಿತಿಕ ಅಭಿರುಚಿ-ಆಸಕ್ತಿ ಮೂಡಿಸುವಲ್ಲಿ ವಿದ್ಯಾ ಸಂಸ್ಥೆಗಳಿಗೆ ಮಹತ್ತರ ಪಾತ್ರವಿದೆ. ಭಾಷೆಗಳು ನಾಡು ಕಟ್ಟಲು ಪೂರಕವಾಗುತ್ತವೆ. ಸಾಹಿತ್ಯಗಳು ಸಮಾಜವನ್ನು ತಿದ್ದುತ್ತವೆ. ಸಾಹಿತಿಗಳು ಕೆಡುಕಿನ ವ್ಯವಸ್ಥೆಗ ಳೊಂದಿಗೆ ರಾಜಿಯಾಗದೆ ಮುಕ್ತ ಧೋರಣೆಯ ವಕ್ತಾರರಾಗಬೇಕು ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ತೋರಿಸುವವರಾಗಬೇಕು’ ಎಂದರು.
ಉಪನ್ಯಾಸಕ ಅರ್ಜುನ್ ಮೌರ್ಯ ಅವರು ರಚಿಸಿದ ಕಥಾಸಂಕಲನ ‘ಅವನಿ’ ಕೃತಿಯ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಿತು.
ಕೃತಿಯ ಬಿಡುಗಡೆಯನ್ನು ನಿರ್ವಹಿಸಿದ ರಾಜ್ಯದ ಖ್ಯಾತ ಜಾನಪದ ವಿದ್ವಾಂಸ ಮೈಸೂರಿನ ಪಿ.ಕೆ. ರಾಜಶೇಖರ್‌ರವರು ಮಾತನಾಡಿ, ಕನ್ನಡ ಭಾಷೆ ದೇಶಕ್ಕೆ ಮಾದರಿಯಾದ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ.
ಕೊಡಗು ಜಿಲ್ಲೆ ಪ್ರಾದೇಶಿಕವಾಗಿ ಕೊಡವ ಭಾಷೆಯನ್ನು ಹೊಂದಿದ್ದರೂ ಈ ಮಣ್ಣಿನಲ್ಲಿ ಕನ್ನಡ ಸಾಹಿತ್ಯವೂ ಶ್ರೀಮಂತವಾಗಿದೆ. ಭಾಷೆಯ ಆಳವಾದ ಅಧ್ಯಯನದಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದರು.
ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಕೃತಿಯ ವಿಮರ್ಶೆಯನ್ನು ಮಾಡಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ. ಫಾ. ರೋನಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮುಖ್ಯ ಅತಿಥಿಗಳಾಗಿದ್ದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರೂ ಧರ್ಮಗುರುಗಳೂ ಆದ ರೆ.ಫಾ. ಮದುಲೈ ಮುತ್ತು ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕಿ ತೃಪ್ತಿ ಬೋಪಣ್ಣ ವೇದಿಕೆಯಲ್ಲಿದ್ದರು. ಅರ್ಥಶಾಸ್ತç ವಿಭಾಗದ ಉಪನ್ಯಾಸಕ ಶಾಂತಿಭೂಷಣ್ ಸ್ವಾಗತಿಸಿದರು. ಕೆ.ಎಸ್. ರಶ್ಮಿ ಧನ್ಯವಾದವಿತ್ತರು. ಪ್ರತಿಮಾ ಹರೀಶ್‌ರೈ ನಿರೂಪಣೆಗೈದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನುಡಿಸೌರಭ-೨೦೨೧ಕ್ಕೆ ತೆರೆ ಬಿದ್ದಿತು.