ಸಿದ್ದಾಪುರ, ಮಾ. ೮: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವ ಕಲಾ ಸಂಘದ ವತಿಯಿಂದ ೪ನೇ ವರ್ಷದ ಮಹಾ ಶಿವರಾತ್ರಿ ಹಾಗೂ ಜಾಗರಣ ಮಹೋತ್ಸವ ತಾ. ೧೧ ರಂದು ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ ೫.೩೦ಕ್ಕೆ ಚಂಡೆ ವಾದ್ಯಮೇಳದೊಂದಿಗೆ ಕುಲದೇವತೆ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ನಡೆಯಲಿದ್ದು, ರಾತ್ರಿ ೭.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಪಾಲಚಂಡ ಚೀಯಣ್ಣ ಹಾಗೂ ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಅಂಬಿಕಾ ಭಾಗವಹಿಸಲಿದ್ದಾರೆ. ರಾತ್ರಿ ೮ ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದ್ದು, ಚೈತ್ರಾ ಕುಂದಾಪುರ ನಡೆಸಿ ಕೊಡಲಿದ್ದಾರೆ. ಇದಾದ ಬಳಿಕ ವೀರಾಜಪೇಟೆಯ ಜಗನ್ಮೋಹನ್ ನಾಟ್ಯಾಲಯ ವಿದ್ವಾನ್ ರಾಜೇಶ್ ಆಚಾರ್ಯ ಮತ್ತು ಶಿಷ್ಯ ವೃಂದದಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಟೀಮ್ ಇಂಟೋಪೀಸ್ ಡ್ಯಾನ್ಸ್ ಕ್ರೀವ್ ತಂಡದಿAದ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ ೧೧ ಗಂಟೆಯಿAದ ಬೆಳಿಗ್ಗೆ ೬ ಗಂಟೆಯವರೆಗೂ ವ್ರತ ಆಚರಿಸುವ ಭಕ್ತಾದಿಗಳಿಗೆ ಲಘು ಉಪಹಾರ ಹಾಗೂ ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಮುತ್ತಪ್ಪ ಯುವಕಲಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.